`ನಮ್ಮ ಭೂಮಿ ನಮ್ಮದು; ಭೂಮಿ ಹಕ್ಕಿಗಾಗಿ ಭೂ ಹೋರಾಟ’
ಮೈಸೂರು

`ನಮ್ಮ ಭೂಮಿ ನಮ್ಮದು; ಭೂಮಿ ಹಕ್ಕಿಗಾಗಿ ಭೂ ಹೋರಾಟ’

September 30, 2021

ಮೈಸೂರು,ಸೆ.29(ಪಿಎಂ)- ಸಂತ್ರಸ್ತರ ಭೂಮಿ ಹಕ್ಕಿಗಾಗಿ `ನಮ್ಮ ಭೂಮಿ ನಮ್ಮದು; ಭೂಮಿ ಹಕ್ಕಿಗಾಗಿ ಭೂ ಹೋರಾಟ’ ಶೀರ್ಷಿಕೆಯಡಿ ಚಳುವಳಿ ಕೈಗೆತ್ತುಕೊಳ್ಳ ಲಾಗಿದೆ. ಶೋಷಿತ ಸಮುದಾಯಗಳ ಶ್ರೇಯೋಭಿವೃದ್ಧಿಗಾಗಿ ಅಸ್ತಿತ್ವಕ್ಕೆ ತಂದಿರುವ ಕರ್ನಾಟಕ ದಲಿತ ಚಳುವಳಿ ನವ ನಿರ್ಮಾಣ ವೇದಿಕೆ ವತಿಯಿಂದ ಇದರ ಮೊದಲ ಹಂತದ ಹೋರಾಟ ಪಿರಿಯಾ ಪಟ್ಟಣದಲ್ಲಿ ನಡೆಯಲಿದೆ. ಅ.2ರಂದು ಅಲ್ಲಿನ ತಾಲೂಕು ಆಡಳಿತ ಭವನದ ಎದುರು ಒಂದು ದಿನದ ಉಪವಾಸ ಸತ್ಯಾಗ್ರಹ ನಡೆಸ ಲಾಗುವುದು ಎಂದು ವೇದಿಕೆ ಮುಖಂಡ ಹರಿಹರ ಆನಂದಸ್ವಾಮಿ ತಿಳಿಸಿದರು.
ಮೈಸೂರು ಜಿಲ್ಲಾ ಪತ್ರಕರ್ತರ ಭವನ ದಲ್ಲಿ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, 1970-80ರ ದಶಕ ಗಳಲ್ಲಿ ದಲಿತ ಮತ್ತು ರೈತ ಚಳವಳಿಯ ಹೋರಾಟದ ಫಲವಾಗಿ ಸರ್ಕಾರದ ವಿವಿಧ ಯೋಜನೆಗಳಡಿ ದಲಿತರು, ಆದಿವಾಸಿ ಗಳು, ಹಿಂದುಳಿದವರು, ಅಲ್ಪಸಂಖ್ಯಾತರು ಸೇರಿದಂತೆ ಬಡವರಿಗೆ ಒಂದಿಷ್ಟು ಭೂಮಿ ದೊರೆಯಲು ಸಾಧ್ಯವಾಯಿತು. ಈ ವರ್ಗ ಗಳ ಶೇ.60ರಷ್ಟು ಜನತೆ ಭೂಮಿ ಹೊಂದಲು ಸಾಧ್ಯವಾದರೆ ಉಳಿದ ಶೇ.40ರಷ್ಟು ಮಂದಿಗೆ ಅದು ಸಾಧ್ಯವೇ ಆಗಿಲ್ಲ. ಇನ್ನು ಭೂಮಿ ಅನುಭೋಗದಲ್ಲಿದ್ದರೂ ಸಮರ್ಪಕ ದಾಖಲೆ ಗಳು ಇಲ್ಲದೇ ಬ್ಯಾಂಕ್ ಸಾಲ ಸೇರಿದಂತೆ ಸರ್ಕಾರದ ನಾನಾ ಸೌಲಭ್ಯಗಳು ದೊರೆ ಯದಾಗಿವೆ. ಇಂತಹ ಅವ್ಯವಸ್ಥೆ ಸರಿಪಡಿಸ ಬೇಕೆಂದೇ ಈ ಚಳವಳಿ. ದಲಿತ ಚಳವಳಿ ದಿಕ್ಕು ತಪ್ಪಿದ ಹಿನ್ನೆಲೆಯಲ್ಲಿ ಇದನ್ನೇ ನಂಬಿದ್ದ ಜನ ಸಮುದಾಯದ ಹಕ್ಕುಗಳನ್ನು ದಕ್ಕಿಸಿ ಕೊಳ್ಳಲು ದಲಿತ ಚಳುವಳಿ ನವನಿರ್ಮಾಣ ವೇದಿಕೆ ಅಸ್ತಿತ್ವಕ್ಕೆ ತಂದಿದ್ದೇವೆ. ಪ್ರಥಮ ಹಂತ ದಲ್ಲಿ ವೇದಿಕೆ ವತಿಯಿಂದ ಭೂಮಿ ಹಕ್ಕಿಗೆ ಸಂಬಂಧಿಸಿದಂತೆ ಹೋರಾಟ ಹಮ್ಮಿಕೊಂ ಡಿದ್ದು, ಅ.2ರ ಗಾಂಧಿ ಜಯಂತಿಯಂದು ಪಿರಿಯಾಪಟ್ಟಣ ತಾಲೂಕು ವ್ಯಾಪ್ತಿಯ ಭೂ ಸಂತ್ರಸ್ತರಿಗೆ ಸಂಬಂಧಿಸಿದಂತೆ ಮೊದಲ ಹಂತದ ಹೋರಾಟ ಆರಂಭವಾಗಲಿದೆ. ಆನಂತರದಲ್ಲಿ ಈ ಹೋರಾಟ ರಾಜ್ಯವ್ಯಾಪಿ ವಿಸ್ತಾರಗೊಳ್ಳಲಿದೆ ಎಂದು ತಿಳಿಸಿದರು.

ಕಂದಾಯ ಇಲಾಖೆ ಅತ್ಯಂತ ಭ್ರಷ್ಟ ಗೊಂಡಿದ್ದು, ಇದು ಶೋಷಿತ ಸಮುದಾಯ ಗಳ ಭೂಮಿ ಹಕ್ಕು ಸಂಬಂಧ ಪೂರಕ ದಾಖಲೆಗಳನ್ನು ಒದಗಿಸಿಕೊಡಲು ಪ್ರಾಮಾ ಣಿಕ ಪ್ರಯತ್ನ ಮಾಡುತ್ತಿಲ್ಲ. ಅರಣ್ಯ ಇಲಾಖೆಯೂ ಉಳುಮೆ ಮಾಡುವ ಭೂಮಿ ಯಿಂದ ರೈತರನ್ನು ಒಕ್ಕಲೆಬ್ಬಿಸುವ ಕೆಲಸದಲ್ಲಿ ನಿರತವಾಗಿದೆ ಎಂದು ದೂರಿದರಲ್ಲದೆ, ಅಂದು ಬೆಳಗ್ಗೆ 10ಕ್ಕೆ ಗಾಂಧಿವಾದಿ ಸಂತೋಷ್ ಕೌಲಗಿ, ಹಿರಿಯ ಆದಿವಾಸಿ ನಾಯಕಿ ಮಾಸ್ತಮ್ಮ ಈ ಹೋರಾಟಕ್ಕೆ ಚಾಲನೆ ನೀಡಲಿದ್ದಾರೆ ಎಂದರು.

ಡೀಡ್ ಸ್ವಯಂ ಸೇವಾ ಸಂಸ್ಥೆಯ ನಿರ್ದೇ ಶಕ ಡಾ.ಎಸ್.ಶ್ರೀಕಾಂತ್ ಮಾತನಾಡಿ, ಇಡೀ ರಾಜ್ಯದ ಗ್ರಾಮೀಣ ಪ್ರದೇಶಕ್ಕೆ ಈ ಹೋರಾಟ ಅನ್ವಯಿಸಲಿದೆ. ತಮ್ಮ ಹಕ್ಕುಗಳ ಸಂರಕ್ಷ ಣೆಗಾಗಿ ಆದಿವಾಸಿ ಸಮುದಾಯವೇ ಸ್ವತಃ ಈ ಹೋರಾಟದ ಮುಂಚೂಣಿಯಲ್ಲಿ ಇರ ಲಿದ್ದು, ಹೀಗಾಗಿ ಭೂಮಿಯನ್ನು ನಂಬಿ ಬದು ಕುತ್ತಿರುವ ಎಲ್ಲರೂ ಹೋರಾಟ ಬೆಂಬಲಿ ಸಬೇಕೆಂದು ಮನವಿ ಮಾಡಿದರು. ವೇದಿಕೆ ಮುಖಂಡರಾದ ಬಂಗವಾದಿ ನಾರಾಯ ಣಪ್ಪ, ಪಿ.ಸಂಬಯ್ಯ, ಟಿ.ಈರಯ್ಯ, ಆದಿವಾಸಿ ಮುಖಂಡ ಕೃಷ್ಣಯ್ಯ ಗೋಷ್ಠಿಯಲ್ಲಿದ್ದರು.

Translate »