ಕಾಡು ಸಂರಕ್ಷಣೆಗೆ ಪರಿಣಾಮಕಾರಿ ಕಾಯಿದೆÀ ಜಾರಿ ಅಗತ್ಯ
ಮೈಸೂರು

ಕಾಡು ಸಂರಕ್ಷಣೆಗೆ ಪರಿಣಾಮಕಾರಿ ಕಾಯಿದೆÀ ಜಾರಿ ಅಗತ್ಯ

September 30, 2021

ಮೈಸೂರು,ಸೆ.29-ಕಾಡಿನ ಸಂರಕ್ಷಣೆಗೆ ಕಾಯಿದೆ ಗಳನ್ನು ರೂಪಿಸಿದರೆ ಸಾಲದು, ಅವುಗಳನ್ನು ಪರಿಣಾಮ ಕಾರಿಯಾಗಿ ಜಾರಿಗೆ ತರುವುದು ಅಗತ್ಯ ಎಂದು ಖ್ಯಾತ ವನ್ಯಜೀವಿ ತಜ್ಞರಾದ ಕೃಪಾಕರ ಹೇಳಿದರು.

ಮೈಸೂರು ಜೆಎಸ್‍ಎಸ್ ಮಹಾವಿದ್ಯಾಪೀಠದ ಶ್ರೀ ಶಿವ ರಾತ್ರೀಶ್ವರ ಧಾರ್ಮಿಕ ದತ್ತಿಯ ವತಿಯಿಂದ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಸಾನ್ನಿಧ್ಯದಲ್ಲಿ ಏರ್ಪಡಿಸಿದ್ದ ‘ಜ್ಞಾನ ವಾರಿಧಿ-43’ ಡಿಜಿಟಲ್ ಸಾಪ್ತಾಹಿಕ ಉಪನ್ಯಾಸ ಕಾರ್ಯ ಕ್ರಮದಲ್ಲಿ “ಕಾಡಿನ ಸಂರಕ್ಷಣೆ” ಕುರಿತು ಉಪನ್ಯಾಸ ನೀಡುತ್ತಾ, ಕರ್ನಾಟಕದಲ್ಲಿ ಅರಣ್ಯ ಸಂರಕ್ಷಣೆಯ ಬಗ್ಗೆ ಹೆಚ್ಚಿನ ಜಾಗೃತಿ ಇದೆ. ಆದರೆ ಅವುಗಳನ್ನು ಇರುವ ಹಾಗೆ ಸ್ವಾಭಾವಿಕವಾಗಿಯೇ ಜತನದಿಂದ ರಕ್ಷಿಸಬೇಕು. ಅಮೆರಿಕದ ಅಧ್ಯಕ್ಷರಾಗಿದ್ದ ರೂಸ್‍ವೆಲ್ಟ್ ರವರು ಅರಣ್ಯ ಸಂರಕ್ಷಣೆಯಲ್ಲಿ ಮಾದರಿ ಕೆಲಸವನ್ನು ಮಾಡಿದರು.

ಮನುಷ್ಯ ನಿರ್ಮಿತವೆಲ್ಲವೂ ಕೇವಲ ತಾತ್ಕಾಲಿಕವಾದವು. ಸ್ವಾಭಾವಿಕವಾದ ಜೈವಿಕ ಅರಣ್ಯ ಸಂಪತ್ತು ಮಾತ್ರ ಶಾಶ್ವತ. ವನ್ಯಜೀವಿ ಸಂತತಿ ಅತ್ಯಂತ ಅಮೂಲ್ಯ ವಾದದ್ದು, ಮೃಗಾಲಯದಲ್ಲಿರುವ ಪ್ರಾಣಿಗಳಿಗೆ ಯಾವುದೇ ಮೌಲ್ಯವಿರುವುದಿಲ್ಲ. ವನ್ಯಜೀವಿಗಳಿಗೆ ಯಾವುದೇ ನಿರ್ಬಂಧಗಳಿರಬಾರದು. ಪ್ರವಾಸೋದ್ಯಮದಿಂದ ಅರಣ್ಯಕ್ಕೆ ಯಾವುದೇ ತೊಂದರೆ ಇಲ್ಲ. ಆದರೆ ಅಭಿ ವೃದ್ಧಿಯ ಹೆಸರಿನಲ್ಲಿ ಕಾಡಿನ ಮಧ್ಯದಲ್ಲಿ ದೊಡ್ಡ ದೊಡ್ಡ ರಸ್ತೆಗಳನ್ನು ನಿರ್ಮಿಸುತ್ತಿರುವುದು ಇದಕ್ಕೆ ಮಾರಕ ವಾಗುತ್ತಿದೆ ಎಂದರಲ್ಲದೆ, ಜನಸಂಖ್ಯೆಯ ಹೆಚ್ಚಳವು ಸಹಜವಾಗಿಯೇ ಸ್ವಾಭಾವಿಕ ಸಂಪತ್ತನ್ನು ಬರಿದಾಗಿ ಸುತ್ತಾ ಸಾಗುತ್ತಿರುವುದು ಅಪಾಯದ ಮುನ್ಸೂಚನೆ ಎಂದು ಆತಂಕಿಸಿದರು. ಕಾಳ್ಗಿಚ್ಚು ಇಡೀ ಅರುಣ್ಯ ಸಂಕುಲವನ್ನೇ ನಾಶಗೊಳಿಸಿ ಜೈವಿಕ ವೈವಿಧ್ಯತೆಯನ್ನು ಬದಲಾಯಿಸಿ ಬಿಡುತ್ತದೆ ಇಂತಹ ಅವಘಡಗಳು ಸಂಭವಿಸದಂತೆ ನೋಡಿಕೊಳ್ಳಬೇಕು ಎಂದು ಕೃಪಾಕರ ತಿಳಿಸಿದರು.

Translate »