ಅಕ್ಟೋಬರ್ ತಿಂಗಳಲ್ಲಿ  ಬ್ಯಾಂಕುಗಳಿಗೆ 12 ದಿನ ರಜೆ ಕೊಡಗು ಜಿಲ್ಲೆಯಲ್ಲಿ 13 ದಿನ ಮಾತ್ರ
ಮೈಸೂರು

ಅಕ್ಟೋಬರ್ ತಿಂಗಳಲ್ಲಿ ಬ್ಯಾಂಕುಗಳಿಗೆ 12 ದಿನ ರಜೆ ಕೊಡಗು ಜಿಲ್ಲೆಯಲ್ಲಿ 13 ದಿನ ಮಾತ್ರ

September 30, 2021

ಮೈಸೂರು, ಸೆ.29(ಆರ್‍ಕೆ)- ರಾಜ್ಯದಲ್ಲಿ ಬ್ಯಾಂಕುಗಳಿಗೆ ಅಕ್ಟೋಬರ್ ತಿಂಗಳಲ್ಲಿ 12 ದಿನ ರಜೆ ಇರುತ್ತದೆ. ಅಕ್ಟೋಬರ್ 2ರಂದು ಶನಿವಾರ ಗಾಂಧಿ ಜಯಂತಿ, 6ರಂದು ಬುಧವಾರ ಮಹಾ ಲಯ ಅಮಾವಾಸ್ಯೆ, 14 ರಂದು ಗುರುವಾರ ಮಹಾ ನವಮಿ, ಆಯುಧ ಪೂಜೆ, 15ರಂದು ಶುಕ್ರವಾರ ವಿಜಯ ದಶಮಿ, 20ರಂದು ಬುಧ ವಾರ ವಾಲ್ಮೀಕಿ ಜಯಂತಿ, ಈದ್ ಮಿಲಾದ್ ಅಂಗವಾಗಿ ಬ್ಯಾಂಕುಗಳಿಗೆ ಸಾರ್ವತ್ರಿಕ ರಜೆ ಇರುತ್ತದೆ.
ಅಲ್ಲದೆ, ಭಾನುವಾರ ಅಕ್ಟೋಬರ್ 3, 10, 17, 24 ಮತ್ತು 31 ರಂದು ಸಾರ್ವತ್ರಿಕ ರಜೆ ಹಾಗೂ ಅಕ್ಟೋಬರ್ 9ರಂದು 2ನೇ ಶನಿವಾರ ಮತ್ತು 23ರಂದು 4ನೇ ಶನಿ ವಾರವೂ ಬ್ಯಾಂಕುಗಳಿಗೆ ರಜಾ ದಿನಗಳಾಗಿವೆ. ಅದರಲ್ಲಿ ವಿಶೇಷವಾಗಿ ಅಕ್ಟೋಬರ್ 18ರಂದು ಸೋಮವಾರ ತುಲಾ ಸಂಕ್ರಮಣ ಇರುವುದರಿಂದ ಕೊಡಗು ಜಿಲ್ಲೆಯಲ್ಲಿ ಮಾತ್ರ 13 ದಿನ ರಜಾ ದಿನಗಳು ಬರುತ್ತವೆ. ಅದೇ ರೀತಿ ಎಲ್ಲಾ ಸರ್ಕಾರಿ, ಅರೆ ಸರ್ಕಾರಿ ಕಚೇರಿಗಳಿಗೂ ಅಕ್ಟೋಬರ್‍ನಲ್ಲಿ ಒಟ್ಟು 12 ದಿನ ರಜೆ ಇರುತ್ತದೆ. ಒಂದು ತಿಂಗಳಲ್ಲಿ ಈ ರೀತಿ ಹೆಚ್ಚು ದಿನ ರಜೆ ಅಪರೂಪವಾಗಿದ್ದು, ಹಣಕಾಸಿನ ವ್ಯವಹಾರ ನಡೆಸುವವರು ಈ ರಜಾ ದಿನಗಳನ್ನು ಗಮನದಲ್ಲಿರಿಸಿಕೊಂಡು ತಮ್ಮ ಬ್ಯಾಂಕ್ ವಹಿವಾಟು ಜೋಡಿಸಿಕೊಳ್ಳುವಂತೆ ಬ್ಯಾಂಕ್ ಅಧಿಕಾರಿಗಳು ಸಲಹೆ ನೀಡಿದ್ದಾರೆ.

Translate »