ಆನ್‌ಲೈನ್‌ನಲ್ಲಿ ಖರೀದಿಸುವ ಅವಕಾಶ
ಒಬ್ಬರಿಗೆ ಎರಡು ಕಾರ್ಡ್ ಖರೀದಿ ಮಿತಿ
ಮೈಸೂರು,ಸೆ.೨೮(ಆರ್‌ಕೆ)-ಮೈಸೂರು ಜಿಲ್ಲಾಡಳಿತವು ದಸರಾ ೨೦೨೨ರ ಗೋಲ್ಡ್ ಕಾರ್ಡ್ ಬಿಡುಗಡೆ ಮಾಡಿದೆ. ಆನ್‌ಲೈನ್ ಮೂಲಕ ೪,೯೯೯ ರೂ. ಬೆಲೆಯ ಗೋಲ್ಡ್ ಕಾರ್ಡ್ ಅನ್ನು ತಿತಿತಿ.mಥಿsoಡಿeಜಚಿsಚಿಡಿಚಿ.gov.iಟಿ ವೆಬ್‌ಸೈಟ್‌ನಲ್ಲಿ ಖರೀ ದಿಸಬಹುದಾಗಿದ್ದು, ಒಬ್ಬರು ೨ ಗೋಲ್ಡ್ ಕಾರ್ಡ್ ಮಾತ್ರ ಪಡೆಯಲು ಅವಕಾಶ ವಿದೆ. ಒಮ್ಮೆ ಆನ್‌ಲೈನ್‌ನಲ್ಲಿ ಹಣ ಪಾವತಿಸಿದ ನಂತರ ಪ್ರವಾಸಿಗರು ನಾಳೆ(ಸೆ.೨೯) ಬೆಳಗ್ಗೆ ೧೧ರಿಂದ ಸಂಜೆ ೫.೩೦ ಗಂಟೆವರೆಗೆ ಬುಕ್ ಮಾಡುವಾಗ ಸ್ವೀಕೃತಿಯಾಗುವ ಇ-ಮೇಲ್ ಪ್ರತಿ ಹಾಗೂ ಯಾವುದಾದರೊಂದು ಗುರುತಿನ ಪ್ರೂಫ್ ಹಾಜರು ಪಡಿಸಿ ಮೈಸೂರಿನ ಮಯೂರ ಹೊಯ್ಸಳ ಹೋಟೆಲ್ ಆವರಣದಲ್ಲಿರುವ ಪ್ರವಾ ಸೋದ್ಯಮ ಇಲಾಖೆ ಕಚೇರಿಯಲ್ಲಿ ಗೋಲ್ಡ್ ಕಾರ್ಡ್ಗಳನ್ನು ಪಡೆದುಕೊಳ್ಳಬಹುದು. ಗೋಲ್ಡ್ ಕಾರ್ಡ್ನಲ್ಲಿ ಜಂಬೂಸವಾರಿ ಮೆರವಣಿಗೆ, ಬನ್ನಿಮಂಟಪದ ಪಂಜಿನ ಕವಾಯತು ವೀಕ್ಷಿಸಬಹುದಾಗಿದ್ದು, ಮೈಸೂರು ಅರಮನೆ, ಮೃಗಾಲಯ, ಶ್ರೀ ಚಾಮುಂಡೇಶ್ವರಿ ದೇವಸ್ಥಾನ, ದಸರಾ ಫಲಪುಷ್ಪ ಪ್ರದರ್ಶನ, ವಸ್ತುಪ್ರದರ್ಶನ, ಸೆಂಟ್ ಫಿಲೋಮಿನಾ ಚರ್ಚ್, ರೈಲ್ವೇ ಮ್ಯೂಸಿಯಂ ಹಾಗೂ ಕೃಷ್ಣರಾಜಸಾಗರ (ಕೆಆರ್‌ಎಸ್) ಬೃಂದಾವನಗಳಿಗೆ ಒಮ್ಮೆ ಮಾತ್ರ ಪ್ರವೇಶಾವಕಾಶ ನೀಡಲಾಗುವುದು.