ಪಿಎಫ್‌ಐಐದು ವರ್ಷ ನಿಷೇಧ
ಮೈಸೂರು

ಪಿಎಫ್‌ಐಐದು ವರ್ಷ ನಿಷೇಧ

September 29, 2022

ಭಯೋತ್ಪಾದಕರೊಂದಿಗೆ ಸಂಪರ್ಕದ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಮಹತ್ವದ ಆದೇಶ
ನವದೆಹಲಿ, ಸೆ.೨೮- ದೇಶವಿರೋಧಿ ಚಟುವಟಿಕೆ ಆರೋಪದ ಹಿನ್ನೆಲೆಯಲ್ಲಿ ದೇಶದಾದ್ಯಂತ ಐದು ವರ್ಷಗಳ ಕಾಲ ಪಾಪುö್ಯಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್‌ಐ) ಸಂಘಟನೆಯನ್ನು ನಿಷೇಧ ಮಾಡಿ ಕೇಂದ್ರ ಸರ್ಕಾರ ಆದೇಶ ಹೊರಡಿಸಿದೆ.
ಈ ಕುರಿತು ಕೇಂದ್ರ ಗೃಹ ಇಲಾಖೆ ಆದೇಶ ಹೊರಡಿಸಿದ್ದು, ಪಾಪುö್ಯಲರ್ ಫ್ರಂಟ್ ಆಫ್ ಇಂಡಿಯಾ ಮತ್ತು ಅದರ ಸಹವರ್ತಿಗಳು ಅಥವಾ ಅಂಗಸAಸ್ಥೆಗಳನ್ನು ತತ್‌ಕ್ಷಣದಿಂದಲೇ ಜಾರಿಗೆ ಬರುವಂತೆ ದೇಶದಾದ್ಯಂತ ಐದು ವರ್ಷಗಳ ಕಾಲ ನಿಷೇಧಿಸಲಾಗಿದ್ದು, ಇದು ಕಾನೂನು ಬಾಹಿರ ಸಂಘಟನೆ ಎಂದು ಘೋಷಣೆ ಮಾಡಿದೆ. ಪಿಎಫ್‌ಐ ನಿಷೇಧಕ್ಕೆ ಕೇಂದ್ರ ಸರ್ಕಾರವು
ತನ್ನ ಅಧಿಸೂಚನೆಯಲ್ಲಿ ನೀಡಿರುವ ವಿವರಣೆಯಲ್ಲಿ ಕರ್ನಾಟಕ ಸರ್ಕಾರದ ಶಿಫಾರಸು ಹಾಗೂ ಪ್ರವೀಣ್ ನೆಟ್ಟಾರು ಕೊಲೆಯನ್ನು ಉಲ್ಲೇಖಿಸಲಾಗಿದೆ. ಪಿಎಫ್‌ಐ ಜೊತೆಗಿದ್ದ ನ್ಯಾಷನಲ್ ಕಾನ್ಫೆಡರೇಷನ್ ಆಫ್ ಹ್ಯೂಮನ್ ರೈಟ್ಸ್ ಆರ್ಗನೈಸೇಷನ್, ನ್ಯಾಷನಲ್ ವುಮೆನ್ಸ್ ಫ್ರಂಟ್ ಕೂಡ ಕಾನೂನುಬಾಹಿರ ಸಂಸ್ಥೆ, ಜ್ಯೂನಿಯರ್ ಫ್ರಂಟ್, ಎಂಪವರ್ ಇಂಡಿಯಾ ಫೌಂಡೇಷನ್, ರಿಹಾಬ್ ಫೌಂಡೇಷನ್, ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ, ಆಲ್ ಇಂಡಿಯಾ ಇಮಾಮ್ ಕೌನ್ಸಿಲ್ ಕೂಡ ನಿಷೇಧ ಮಾಡಲಾಗಿದೆ.

ರಾಜ್ಯದಲ್ಲಿ ಕಟ್ಟೆಚ್ಚರ; ಸೂಕ್ಷö್ಮ ಪ್ರದೇಶಗಳಲ್ಲಿ ಪೊಲೀಸರ ನಿಗಾ: ಪಿಎಫ್‌ಐ ಸೇರಿದಂತೆ ಅದರ ಬೆಂಬಲಿತ ಸಂಘಟನೆಗಳನ್ನು ಕೇಂದ್ರ ಸರ್ಕಾರ ಐದು ವರ್ಷಗಳ ಕಾಲ ನಿಷೇಧಿಸಿದ ಬೆನ್ನಲ್ಲೇ ರಾಜ್ಯದಲ್ಲಿ ಕಟ್ಟೆಚ್ಚರ ವಹಿಸಲಾಗಿದೆ. ಕೊಡಗು, ಮಂಗಳೂರು, ಶಿವಮೊಗ್ಗ, ಬೆಂಗಳೂರು ನಗರದ ಕೆಲವು ಭಾಗ, ಚಿಕ್ಕಮಗಳೂರು, ಮೈಸೂರು ಸೇರಿದಂತೆ ಸೂಕ್ಷ÷್ಮ ಜಿಲ್ಲೆಗಳಲ್ಲಿ ಪೊಲೀಸರು ತೀವ್ರ ನಿಗಾ ವಹಿಸಲಿದ್ದಾರೆ ಎಂದು ಪೊಲೀಸ್ ಮಹಾನಿರ್ದೇಶಕ ಪ್ರವೀಣ್ ಸೂದ್ ಹೇಳಿದ್ದಾರೆ. ಸೂಕ್ಷ÷್ಮ ಪ್ರದೇಶಗಳಲ್ಲಿ ಮುಂಜಾನೆ ಯಿಂದಲೇ ಹೆಚ್ಚಿನ ಪೊಲೀಸ್ ನಿಯೋಜನೆ ಮಾಡಲಾಗಿದೆ. ಅಷ್ಟೇ ಅಲ್ಲ, ರಾಜ್ಯದ ವಿವಿಧೆಡೆ ಸಂಘಟನೆಗಳ ಕಚೇರಿ ಹಾಗೂ ಅದರ ಪದಾಧಿಕಾರಿಗಳ ಬಗ್ಗೆ ಹೆಚ್ಚಿನ ನಿಗಾ ವಹಿಸಲಾಗಿದೆ. ಮುಂದಿನ ದಿನಗಳಲ್ಲಿ ಕರ್ನಾಟಕವೂ ಸೇರಿದಂತೆ ರಾಷ್ಟçದ ವಿವಿಧೆಡೆ ಈ ಸಂಘಟನೆಗಳು ವಿಧ್ವಂಸಕ ಕೃತ್ಯ ನಡೆಸುತ್ತವೆ ಎಂಬ ಎನ್‌ಐಎ ವರದಿ ಆಧಾರದ ಮೇಲೆ ಕೇಂದ್ರ ಸರ್ಕಾರ ತಡರಾತ್ರಿ ಪಿಎಫ್‌ಐ ಸೇರಿದಂತೆ ಅದರ ಬೆಂಬಲಿತ ಸಂಘಟನೆಗಳನ್ನು ಮುಂದಿನ ಐದು ವರ್ಷಗಳ ಕಾಲ ನಿಷೇಧಿಸಿದೆ.

 

ಪಿಎಫ್‌ಐ ಕಚೇರಿಗಳ ಬಂದ್ ಮಾಡಲು ಆದೇಶ
ಜಿಲ್ಲಾಧಿಕಾರಿಗಳಿಗೆ ಸುತ್ತೋಲೆ
ಬೆಂಗಳೂರು, ಸೆ. ೨೮- ಪಿಎಫ್‌ಐ ಸಂಘಟನೆಯನ್ನು ಕೇಂದ್ರ ಸರ್ಕಾರ ನಿಷೇಧಿಸಿರುವ ಹಿನ್ನೆಲೆಯಲ್ಲಿ ದೇಶಾ ದ್ಯಂತ ಇರುವ ಪಿಎಫ್‌ಐ ಹಾಗೂ ಅದರ ಅಂಗಸAಸ್ಥೆ ಗಳ ಕಚೇರಿಗಳನ್ನು ಸೀಜ್ ಮಾಡುವಂತೆ ಎನ್‌ಐಎ ವರದಿ ನೀಡಿದ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರದ ಸೂಚನೆ ಯಂತೆ ರಾಜ್ಯ ಸರ್ಕಾರವು ಎಲ್ಲಾ ಜಿಲ್ಲಾಧಿಕಾರಿಗಳಿಗೂ ಪಿಎಫ್‌ಐ ಸಂಘಟನೆಗಳ ಕಚೇರಿಗಳನ್ನು ಬಂದ್ ಮಾಡು ವಂತೆ ಸುತ್ತೋಲೆ ರವಾನಿಸಿದೆ. ತಹಸೀಲ್ದಾರ್ ನೇತೃತ್ವ ದಲ್ಲಿ ಪೊಲೀಸ್ ಅಧಿಕಾರಿಗಳ ಸಹಕಾರ ಪಡೆದು ಪಿಎಫ್‌ಐ ಹಾಗೂ ಅದರ ಅಂಗಸAಸ್ಥೆಗಳ ಕಚೇರಿಗಳನ್ನು ಬಂದ್ ಮಾಡಬೇಕು. ಅದಕ್ಕೂ ಮುನ್ನ ಕಚೇರಿಗಳನ್ನು ಸಂಪೂರ್ಣ ವಾಗಿ ಪರಿಶೀಲಿಸಿ ಅಲ್ಲಿರುವ ನಗದು
ಸೇರಿದಂತೆ ಎಲ್ಲಾ ವಸ್ತುಗಳನ್ನು ಜಪ್ತಿ ಮಾಡಿದ ನಂತರ ಕಚೇರಿಗೆ ಬಂದ್ ಮಾಡಬೇಕು ಎಂದು ಸುತ್ತೋಲೆಯಲ್ಲಿ ತಿಳಿಸಲಾಗಿದೆ. ಅದರಂತೆ ಬೆಂಗಳೂರು, ಮಂಗಳೂರು, ಹಾಸನ, ಕೋಲಾರ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ತಹಸೀಲ್ದಾರರ ನೇತೃತ್ವದಲ್ಲಿ ಪಿಎಫ್‌ಐ ಕಚೇರಿಗಳನ್ನು ಸೀಲ್ ಮಾಡಲಾಯಿತು. ತಹಸೀಲ್ದಾರರು ಮತ್ತು ಪೊಲೀಸ್ ಅಧಿಕಾರಿಗಳು ಮಂಗಳೂರಿನ ಪಿಎಫ್‌ಐ ಕಚೇರಿ ಬಂದ್ ಮಾಡಲು ತೆರಳಿದಾಗ ಬೀಗ ಹಾಕಲಾಗಿತ್ತು. ಅಧಿಕಾರಿಗಳು ಬೀಗ ಮುರಿದು ಒಳ ನುಗ್ಗಲು ಮುಂದಾದಾಗ ಪಿಎಫ್‌ಐ ಮುಖ್ಯಸ್ಥನೋರ್ವ ತಾನೇ ಮುಂದೆ ಬಂದು ಕಚೇರಿಯ ಬೀಗ ತೆಗೆದಿದ್ದಾನೆ. ನಂತರ ಅಧಿಕಾರಿಗಳು ಕಚೇರಿಯಲ್ಲಿರುವ ನಗದು ಹಾಗೂ ದಾಖಲೆಗಳನ್ನು ಜಪ್ತಿ ಮಾಡಿ, ಕಚೇರಿಯನ್ನು ಬಂದ್ ಮಾಡಿದರು. ಈ ಸಂಬAಧ ‘ಮೈಸೂರು ಮಿತ್ರ’ನಿಗೆ ಪ್ರತಿಕ್ರಿಯಿಸಿದ ಮೈಸೂರು ಜಿಲ್ಲಾಧಿಕಾರಿ ಡಾ. ಬಗಾದಿ ಗೌತಮ್, ಪಿಎಫ್‌ಐ ಹಾಗೂ ಅದರ ಅಂಗಸAಸ್ಥೆಗಳ ಕಚೇರಿಗಳನ್ನು ಬಂದ್ ಮಾಡುವಂತೆ ದೇಶಾದ್ಯಂತ ಎಲ್ಲಾ ಜಿಲ್ಲಾಧಿಕಾರಿಗಳಿಗೂ ಸೂಚಿಸಲಾಗಿದೆ. ಅದರಂತೆ ನಮಗೂ ಕೂಡ ಸೂಚನೆ ಬಂದಿದ್ದು, ಈ ಬಗ್ಗೆ ಕ್ರಮ ಕೈಗೊಳ್ಳುತ್ತೇವೆ ಎಂದರು.

 

ದೇಶ ವಿರೋಧಿ ಕುಕೃತ್ಯ
ನಡೆಸುವವರಿಗೆ ಇದು ಸಂದೇಶ

ಬೆಂಗಳೂರು: ಪಿಎಫ್‌ಐ ಸಂಘಟನೆ ಮೇಲಿಂದ ಮೇಲೆ ದೇಶದಲ್ಲಿ ವಿಧ್ವಂಸಕ ಕೃತ್ಯ ಗಳನ್ನು ನಡೆಸುತ್ತಾ ಬಂದಿದೆ. ತನ್ನ ಹಲವಾರು ರೂಪಾಂತರಗಳ ಫಲ ಶ್ರುತಿಯೇ ಪಿಎಫ್‌ಐ, ಪಿ.ಎಫ್.ಐ ಮತ್ತದರ ಸಂಘ ಸಂಸ್ಥೆಗಳು ನಿಷೇ ಧಿತ ಸಿಮಿ ಸಂಘಟನೆಯ ಮುಂದುವರೆದ ಅವತಾರ ಗಳಾಗಿದ್ದವು. ದೇಶದಲ್ಲಿ ಹಲವಾರು ವಿಧ್ವಂಸಕ ಚಟು ವಟಿಕೆಯಲ್ಲಿ ಪಾಲ್ಗೊಂಡ ಬಗ್ಗೆ ಅನೇಕ ಸಾಕ್ಷಾ÷್ಯಧಾರಗಳು ಲಭಿಸಿದ್ದವು. ಈಗ ಆ ಸಂಘಟನೆಗಳನ್ನು ನಿಷೇಧಿಸುವ ಮೂಲಕ ಪ್ರಧಾನಿ ನರೇಂದ್ರ ಮೋದಿ ಹಾಗೂ ಗೃಹ ಮಂತ್ರಿ ಅಮಿತ್ ಶಾ ಅವರು ಸೂಕ್ತ ನಿರ್ಧಾರ ಕೈಗೊಂಡಿದ್ದಾರೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕೇಂದ್ರದ ನಿರ್ಧಾರವನ್ನು ಸ್ವಾಗತಿಸಿದ್ದಾರೆ.

 

ಆರೆಸ್ಸೆಸ್ ಮೇಲೂ ಕ್ರಮ ಕೈಗೊಳ್ಳಿ

ಬೆಂಗಳೂರು: ಸಮಾಜದಲ್ಲಿ ಅಶಾಂತಿ ಉಂಟು ಮಾಡುವವರ ವಿರುದ್ಧ ಕ್ರಮ ಕೈಗೊಂಡರೆ ನಮ್ಮ ವಿರೋಧ ಇಲ್ಲ. ಯಾವುದೇ ಸಂಘಟನೆ ಯಾದರೂ ನಿಷೇಧಿಸಬೇಕು. ಆರೆಸ್ಸೆಸ್‌ನವರೂ ಸಮಾಜದಲ್ಲಿ ಶಾಂತಿ ಹಾಳು ಮಾಡುತ್ತಿದ್ದಾರೆ. ಅವರ ಮೇಲೂ ಕ್ರಮ ತೆಗೆದುಕೊಳ್ಳಬೇಕು ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಒತ್ತಾಯಿಸಿದ್ದಾರೆ. ಯಾರು ಸಮಾಜಕ್ಕೆ ಕಂಟಕಪ್ರಾಯರಾಗಿದ್ದಾರೋ ಅವರ ವಿರುದ್ಧ ಕ್ರಮ ತೆಗೆದುಕೊಂಡರೆ ನಮ್ಮ ಅಭ್ಯಂತರವಿಲ್ಲ. ಶಾಂತಿ ಹಾಳು ಮಾಡುತ್ತಿದ್ದವರ ಮೇಲೆ ಕ್ರಮ ಜರುಗಿಸಲಿ. ನಾನು ಆಗಲೂ ಹೇಳುತ್ತಿದ್ದೆ. ಈಗಲೂ ಹೇಳುತ್ತಿದ್ದೇನೆ. ದ್ವೇಷದ ರಾಜಕಾರಣ ಮಾಡಿದರೆ ಕ್ರಮ ಜರುಗಿಸಲಿ ಎಂದರು.

Translate »