ಸಂಬಳವಿಲ್ಲದೆ ಕಂಗಾಲಾಗಿರುವ ಕಲಾ ಮಂದಿರ ದಿನಗೂಲಿ ನೌಕರರು
ಮೈಸೂರು

ಸಂಬಳವಿಲ್ಲದೆ ಕಂಗಾಲಾಗಿರುವ ಕಲಾ ಮಂದಿರ ದಿನಗೂಲಿ ನೌಕರರು

August 9, 2020

ಮೈಸೂರು, ಆ.8(ಆರ್‍ಕೆ)-ಕೊರೊನಾ ಸಂಕಷ್ಟದ ನಡುವೆ ಮೈಸೂರಿನ ಕರ್ನಾಟಕ ಕಲಾ ಮಂದಿರದ ದಿನಗೂಲಿ ನೌಕರರು ಸಂಬಳವಿಲ್ಲದೆ ಕಂಗಾಲಾಗಿದ್ದಾರೆ. ಅನು ದಾನದ ಕೊರತೆಯಿಂದಾಗಿ ಕಳೆದ 3 ತಿಂಗಳಿಂದ ತಮಗೆ ಸಂಬಳ ನೀಡದಿರುವ ಕಾರಣ ಜೀವನೋ ಪಾಯಕ್ಕೆ ಪರದಾಡುತ್ತಿದ್ದೇವೆ ಎಂದು ಕಲಾ ಮಂದಿರ ದಿನಗೂಲಿ ನೌಕರರು ತಮ್ಮ ಅಳಲು ತೋಡಿ ಕೊಂಡಿದ್ದಾರೆ.

ಮೇಲ್ವಿಚಾರಕ ರಮೇಶ್, ಟಪಾಲು ನಿರ್ವಹಿಸುವ ಮಹದೇವು, ಸ್ವಚ್ಛತಾ ಸಿಬ್ಬಂದಿ ಗೋಪಾಲ್, ವಿದ್ಯುತ್ ಕೆಲಸ ನಿರ್ವಹಿಸುವ ಫಯಾಜ್ ಜೊತೆಗೆ ಹೊರ ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿರುವ ಮಹದೇವು, ವಳ್ಳಿಯಮ್ಮ, ಶಂಕರ, ಸತ್ಯ, ಪಳನಿ, ಚಂದ್ರು, ಶಂಕರ, ಸತೀಶ್, ಮಹಾದೇವಿ, ದಶï್ನ, ರಾಜು, ರಂಜನ್, ಬಸವರಾಜು ಹಾಗೂ ಅನಿಲ್ ಅವರಿಗೆ ಸಂಬಳ ಪಾವತಿಯಲ್ಲಿ ವಿಳಂಬವಾಗಿದೆ. ಕನ್ನಡ ಮತ್ತು ಸಂಸ್ಕøತಿ ಇಲಾಖೆಯಡಿ ಬರುವ ಕಲಾ ಮಂದಿರದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ತಮಗೆ ಕಳೆದ 3 ತಿಂಗಳಿಂದ ವೇತನ ಸಿಗದಿರುವುದರಿಂದ ತೀವ್ರ ತೊಂದರೆ ಅನುಭವಿಸು ತ್ತಿದ್ದೇವೆ ಎಂದು ನೌಕರರು `ಮೈಸೂರು ಮಿತ್ರ’ನೊಂದಿಗೆ ತಮ್ಮ ಅಳಲು ತೋಡಿಕೊಂಡಿದ್ದಾರೆ.

Translate »