ಸಾಕಾನೆ ದಾಳಿಗೆ ಬಲಿಯಾದ ಮಾವುತನ ಕುಟುಂಬಕ್ಕೆ ಮೃಗಾಲಯ ಪ್ರಾಧಿಕಾರದಿಂದ 10 ಲಕ್ಷ ರೂ. ಪರಿಹಾರ
ಮೈಸೂರು

ಸಾಕಾನೆ ದಾಳಿಗೆ ಬಲಿಯಾದ ಮಾವುತನ ಕುಟುಂಬಕ್ಕೆ ಮೃಗಾಲಯ ಪ್ರಾಧಿಕಾರದಿಂದ 10 ಲಕ್ಷ ರೂ. ಪರಿಹಾರ

August 9, 2020

ಮೈಸೂರು, ಆ.8(ಎಂಟಿವೈ)- ಆನೆಯ ಆಕಸ್ಮಿಕ ದಾಳಿಗೆ ತುತ್ತಾಗಿ ಬಲಿಯಾದ ಗುತ್ತಿಗೆ ನೌಕರ ಹರೀಶ್ ಕುಟುಂಬಕ್ಕೆ ಮೃಗಾ ಲಯ ಪ್ರಾಧಿಕಾರದಿಂದ ಶನಿವಾರ 10 ಲಕ್ಷ ರೂ. ಪರಿಹಾರ ವಿತರಿಸಲಾಯಿತು.

ಮೈಸೂರು ಮೃಗಾಲಯದ ಇತಿಹಾಸ ದಲ್ಲಿಯೇ ಮೊದಲ ಬಾರಿಗೆ ಆನೆ ದಾಳಿಗೆ ಮಾವುತ ಬಲಿಯಾದ ಘಟನೆ ಶುಕ್ರವಾರ ನಡೆದಿದೆ. 16 ವರ್ಷಗಳಿಂದ ಗುತ್ತಿಗೆ ಆಧಾರ ಆನೆಗಳ ಪಾಲನೆ ಮಾಡುತ್ತಿದ್ದ ಲಲಿತಾದ್ರಿ ಪುರದ ದಿ.ಸಿದ್ದೇಗೌಡರ ಮಗ ಎಸ್. ಹರೀಶ್(38) ಆನೆ ದಾಳಿಗೆ ಬಲಿಯಾ ದವರು. ಇಂದು ಬೆಳಗ್ಗೆ ಅಂತಿಮ ದರ್ಶನ ಬಳಿಕ ಲಲಿತಾದ್ರಿಪುರದಲ್ಲಿ ಅಂತ್ಯಕ್ರಿಯೆ ನಡೆಸಲಾಗಿದೆ. ಅದಕ್ಕೂ ಮುನ್ನ ಮೈಸೂರು ಮೆಡಿಕಲ್ ಕಾಲೇಜು ಶವಾಗಾರದಲ್ಲಿ ಮರ ಣೋತ್ತರ ಪರೀಕ್ಷೆ ನಡೆಯಿತು.

ಮೃಗಾಲಯದಲ್ಲಿ ಸಿಬ್ಬಂದಿ ಸಹೋ ದ್ಯೋಗಿಯ ಅಂತಿಮ ದರ್ಶನ ಪಡೆದರು. ಈ ವೇಳೆ ಮೃತನ ಕುಟುಂ ಬಕ್ಕೆ ಪರಿಹಾರ ನೀಡ ಬೇಕು, ಪತ್ನಿಗೆ ಅನು ಕಂಪದ ಆಧಾರ ಕೆಲಸ ನೀಡಬೇಕು ಎಂದು ಆಗ್ರ ಹಿಸಿ ಕುಟುಂಬದವರು ಪ್ರತಿಭಟನೆಗೆ ಮುಂದಾ ದರು. ಅಷ್ಟರಲ್ಲೇ ಮೃಗಾ ಲಯ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಬಿ.ಪಿ.ರವಿ ಹಾಗೂ ಮೃಗಾಲಯದ ಕಾರ್ಯ ನಿರ್ವಾಹಕ ನಿರ್ದೇಶಕ ಅಜಿತ್ ಎಂ.ಕುಲ ಕರ್ಣಿ, ಹರೀಶ್ ಕುಟುಂಬಕ್ಕೆ ಪ್ರಾಧಿಕಾರ ದಿಂದ 10 ಲಕ್ಷ ರೂ. ಮೊತ್ತದ ಚೆಕ್ ವಿತರಿ ಸಿದರು. ಪ್ರಾಧಿಕಾರದ ನಿಯಮದಲ್ಲಿ ಅನು ಕಂಪದ ಆಧಾರ ಕೆಲಸ ಕೊಡಲು ಅವಕಾಶ ವಿಲ್ಲ. ಮಾನವೀಯ ನೆಲೆಗಟ್ಟಿನಲ್ಲಿ ಗುತ್ತಿಗೆ ಆಧಾರ ಕೆಲಸ ನೀಡಬಹುದು. ಅದಕ್ಕೆ ಹಿರಿಯ ಅಧಿಕಾರಿಗಳಿಂದ ಹಾಗೂ ಮೃಗಾ ಲಯ ಪ್ರಾಧಿಕಾರದಿಂದ ಅನುಮತಿ ಪಡೆಯಬೇಕಿದೆ ಎಂದು ವಿವರಿಸಿದರು.

ವಿಮಾ ಸೌಲಭ್ಯ: ಕರ್ತವ್ಯದ ವೇಳೆ ಅಚಾ ತುರ್ಯವಾದರೆ ಮೃಗಾಲಯ ಸಿಬ್ಬಂದಿಗೆ ಹಣಕಾಸಿನ ನೆರವು ನೀಡಲು ಅವಕಾಶ ವಾಗುವಂತೆ ಸಿಬ್ಬಂದಿಗಳ ಹೆಸರಿನಲ್ಲೇ ಡಿಸಿಆರ್‍ಜಿ(ಡೆತ್ ಕಮ್ ರಿಟೇರ್ಡ್‍ಮೆಂಟ್ ಗ್ರಾಜುಯಿಟಿ) ಪಾಲಿಸಿ ಮಾಡಿಸಲಾಗಿದೆ. ಇದ ರಿಂದಲೇ ಹರೀಶ್ ಕುಟುಂಬಕ್ಕೆ 4ರಿಂದ 6ಲಕ್ಷ ರೂ.ವರೆಗೂ ಪರಿಹಾರ ಧನ ಬರಲಿದೆ ಹಾಗೂ ವಿಮೆಯಿಂದ 1 ಲಕ್ಷ ರೂ. ಬರಲಿದೆ.

Translate »