ಪಿಓಪಿ ಗಣೇಶ ವಿಗ್ರಹ ತಯಾರಿ, ಮಾರಾಟ ತಡೆಗೆ ಡಿಸಿ ಸೂಚನೆ.
ಚಾಮರಾಜನಗರ

ಪಿಓಪಿ ಗಣೇಶ ವಿಗ್ರಹ ತಯಾರಿ, ಮಾರಾಟ ತಡೆಗೆ ಡಿಸಿ ಸೂಚನೆ.

August 13, 2018

ಚಾಮರಾಜನಗರ: ಮುಂಬರುವ ಗಣೇಶ ಚತುರ್ಥಿಯನ್ನು ಪರಿಸರ ಸ್ನೇಹಿ ಯನ್ನಾಗಿ ಆಚರಿಸುವ ದಿಸೆಯಲ್ಲಿ ಜಿಲ್ಲೆಯ ಯಾವುದೇ ಭಾಗದಲ್ಲಿ ಪ್ಲಾಸ್ಟರ್ ಆಫ್ ಪ್ಯಾರಿಸ್ ಹಾಗೂ ಹಾನಿಕಾರಕ ಬಣ್ಣ ಗಳಿಂದ ಗಣೇಶ ವಿಗ್ರಹ ತಯಾರಿ, ವಿತರಣೆ ಹಾಗೂ ಮಾರಾಟ ತಡೆಯಲು ನಗರ ಸ್ಥಳೀಯ ಸಂಸ್ಥೆ ಅಧಿಕಾರಿಗಳು ಕ್ರಮ ವಹಿಸುವಂತೆ ಜಿಲ್ಲಾಧಿಕಾರಿ ಬಿ.ಬಿ. ಕಾವೇರಿ ಸೂಚನೆ ನೀಡಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣ ದಲ್ಲಿಂದು ಪ್ಲಾಸ್ಟರ್ ಆಫ್ ಪ್ಯಾರಿಸ್ ವಿಗ್ರಹ ಗಳ ನಿಷೇಧ ಬಗ್ಗೆ ಕೈಗೊಳ್ಳಬೇಕಿರುವ ಕ್ರಮದ ಹಿನ್ನೆಲೆಯಲ್ಲಿ ಆಯೋಜಿಸ ಲಾಗಿದ್ದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಜಲಮಾಲಿನ್ಯ ತಡೆಗಟ್ಟುವ ಉದ್ದೇಶ ದಿಂದ ಪ್ಲಾಸ್ಟರ್ ಆಫ್ ಪ್ಯಾರಿಸ್‍ನಿಂದ ಮಾಡುವ ವಿಗ್ರಹಗಳನ್ನು ಯಾವುದೇ ಜಲ ಮೂಲಗಳಿಗೆ ವಿಸರ್ಜನೆ ಮಾಡುವುದನ್ನು ನಿರ್ಬಂಧಿಸಿ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯು ಈ ಹಿಂದೆಯೇ ಅಧಿಸೂಚನೆ ಹೊರಡಿಸಿದೆ. ಮಂಡಳಿಯ ಈ ಅಧಿಸೂಚನೆಯನ್ನು ರಾಜ್ಯ ಉಚ್ಚ ನ್ಯಾಯಾಲಯವು ಸಹ ಕ್ರಮಬದ್ಧಗೊಳಿ ಸಿದೆ. ಹೀಗಾಗಿ ಪ್ಲಾಸ್ಟರ್ ಆಫ್ ಪ್ಯಾರಿಸ್ ಹಾಗೂ ಹಾನಿಕಾರಕ ರಾಸಾಯನಿಕ ಬಣ್ಣಗಳಿಂದ ಗಣೇಶ ವಿಗ್ರಹಗಳನ್ನು ತಯಾ ರಿಸುವುದು, ಮಾರಾಟ ಮಾಡುವುದು ಹಾಗೂ ವಿತರಿಸುವುದನ್ನು ನಿಷೇಧಿಸ ಲಾಗಿದೆ ಎಂದರು.

ಜಿಲ್ಲೆಯಲ್ಲೂ ಪ್ಲಾಸ್ಟರ್ ಆಫ್ ಪ್ಯಾರಿಸ್ ಹಾಗೂ ರಾಸಾಯನಿಕ ಬಣ್ಣದ ವಿಗ್ರಹ ಗಳನ್ನು ಮಾರಾಟ ಮಾಡದಂತೆ ತಡೆಯ ಬೇಕು. ತಯಾರಕರು ಹಾಗೂ ವಿತರಕರಿಗೆ ಈ ಬಗ್ಗೆ ತಿಳಿಸಿ ಯಾವುದೇ ಪ್ಲಾಸ್ಟರ್ ಆಫ್ ಪ್ಯಾರಿಸ್‍ನಿಂದ ಗಣೇಶ ವಿಗ್ರಹಗಳನ್ನು ತಯಾ ರಿಸಿ ಮಾರಾಟ ಮಾಡದಂತೆ ಸೂಚಿಸ ಬೇಕು. ತಯಾರಿ, ವಿತರಣೆ ಸ್ಥಳಗಳಿಗೆ ನಗರ ಸ್ಥಳೀಯ ಸಂಸ್ಥೆ ಅಧಿಕಾರಿಗಳು ಭೇಟಿ ಕೊಟ್ಟು ಈಗಿನಿಂದಲೇ ತಡೆಯುವ ಕೆಲಸವನ್ನು ಮಾಡಬೇಕು ಎಂದರು.

ಪೊಲೀಸ್ ಇಲಾಖೆ ಅಧಿಕಾರಿಗಳು, ತಹಸೀಲ್ದಾರರು ಸಹ ಪ್ಲಾಸ್ಟರ್ ಆಫ್ ಪ್ಯಾರಿಸ್ ನಿಂದ ತಯಾರಿಸಿದ ವಿಗ್ರಹಗಳ ಮಾರಾಟ, ತಯಾರಿ, ವಿತರಣೆ ತಡೆಯುವ ಅಧಿ ಕಾರಿಗಳ ಕಾರ್ಯನಿರ್ವಹಣೆಗೆ ಸಹಕರಿಸ ಬೇಕು. ಕರ್ನಾಟಕ ರಾಜ್ಯ ಮಾಲಿನ್ಯ ನಿಯಂ ತ್ರಣ ಮಂಡಳಿ ಹೊರಡಿಸಿರುವ ಸುತ್ತೋಲೆ, ಅಧಿಸೂಚನೆಗಳಿಗೆ ಸಂಬಂಧಿಸಿದಂತೆ ಕೈಗೊಳ್ಳ ಬೇಕಿರುವ ಎಲ್ಲ ಕೆಲಸಗಳಿಗೆ ಪೂರಕ ವಾಗಿ ಸ್ಪಂದಿಸಬೇಕೆಂದು ಕಾವೇರಿ ತಿಳಿಸಿದರು.

ಇದೇ ವೇಳೆ ಹಾಜರಿದ್ದ ಜಿಲ್ಲೆಯ ಗಣೇಶ ವಿಗ್ರಹ ತಯಾರಕರು ಮಾತನಾಡಿ, ಪ್ಲಾಸ್ಟರ್ ಆಫ್ ಪ್ಯಾರಿಸ್ ಗಣೇಶ ವಿಗ್ರಹ ತಯಾರಿಕೆಯಿಂದ ಸಾಂಪ್ರದಾಯಿಕವಾಗಿ ಜೇಡಿ ಮಣ್ಣಿನಿಂದ ವಿಗ್ರಹ ತಯಾರಿಸುತ್ತಿ ರುವ ತಮ್ಮ ಕಸುಬಿಗೂ ತೊಂದರೆಯಾ ಗಿದೆ. ಇದರಿಂದ ಸಾಕಷ್ಟು ಆರ್ಥಿಕ ಸಂಕಷ್ಟಕ್ಕೆ ಗುರಿಯಾಗುತ್ತಿದ್ದೇವೆ. ಹಬ್ಬದ ಹಿಂದಿನ 3 ದಿನಗಳಲ್ಲಿ ಪ್ಲಾಸ್ಟರ್ ಆಫ್ ಪ್ಯಾರಿಸ್ ನಿಂದ ತಯಾರಿಸಿದ ಗಣೇಶ ವಿಗ್ರಹವನ್ನು ಬೇರೆ ಜಿಲ್ಲೆಗಳಿಂದ ತಂದು ಮಾರಾಟ ಮಾಡಲಾಗುತ್ತಿದೆ. ಇದನ್ನು ತಪ್ಪಿಸಬೇಕು ಎಂದು ಮನವಿ ಮಾಡಿದರು.

ಇದಕ್ಕೆ ಪೂರಕವಾಗಿ ಸ್ಪಂದಿಸಿದ ಜಿಲ್ಲಾ ಧಿಕಾರಿ ಕಾವೇರಿ, ತಯಾರಕರು ಸಹ ಜಿಲ್ಲೆಯ ಯಾವುದೇ ಭಾಗದಲ್ಲಿ ಪ್ಲಾಸ್ಟರ್ ಆಫ್ ಪ್ಯಾರಿಸ್‍ನಿಂದ ವಿಗ್ರಹ ತಯಾರಿಸುವವರು ಇದ್ದರೆ ಮಾಹಿತಿ ನೀಡಬೇಕು. ಅಧಿಕಾರಿ ಗಳನ್ನು ಕಳುಹಿಸಿ ವಿಗ್ರಹ ತಯಾರಿ ಮೊದಲೇ ತಿಳಿವಳಿಕೆ ನೀಡಿ ಕ್ರಮ ವಹಿಸಲು ಸಾಧ್ಯ ವಾಗುತ್ತದೆ ಎಂದರು.

ಹೆಚ್ಚುವರಿ ಜಿಲ್ಲಾಧಿಕಾರಿ ಕೆ.ಎಂ.ಗಾಯತ್ರಿ, ಉಪವಿಭಾಗಾಧಿಕಾರಿ ಫೌಜಿಯಾ ತರನ್ನುಂ, ಜಿಲ್ಲಾ ಪರಿಸರ ಅಧಿಕಾರಿ ರಘುರಾಂ, ಜಿಲ್ಲಾ ನಗರಾಭಿವೃದ್ಧಿ ಕೋಶದ ನಿರ್ದೇಶಕರಾದ ಸುರೇಶ್, ನಗರ ಸ್ಥಳೀಯ ಸಂಸ್ಥೆಗಳ ಆಯುಕ್ತರು, ಮುಖ್ಯಾಧಿಕಾರಿಗಳು, ತಹ ಸೀಲ್ದಾರರು, ಇತರೆ ಅಧಿಕಾರಿಗಳು ಸಭೆ ಯಲ್ಲಿ ಹಾಜರಿದ್ದರು.

Translate »