ಮೈಸೂರು, ಅ.27(ಆರ್‍ಕೆಬಿ)- ನವ ರಾತ್ರಿ ಆರಂಭದಿಂದ ವಿಜಯದಶಮಿವ ರೆಗೂ ಮೈಸೂರು ದಸರಾ ಯಶಸ್ವಿಯಾಗಿ ನಡೆದು ಸಂಪನ್ನಗೊಂಡಿದ್ದರಿಂದ ಜಿಲ್ಲಾಧಿ ಕಾರಿ ರೋಹಿಣಿ ಸಿಂಧೂರಿ ಅವರು ಕುಟುಂಬ ಸಮೇತ ಚಾಮುಂಡಿಬೆಟ್ಟಕ್ಕೆ ತೆರಳಿ, ಶ್ರೀ ಚಾಮುಂಡೇಶ್ವರಿ ದೇವಿಯ ತೇರು ಎಳೆದು ದೇವಿಗೆ ಭಕ್ತಿ ಸಮರ್ಪಿಸಿದರು.
ಸೋಮವಾರ ಸಂಜೆ ಅರಮನೆ ಅಂಗಳ ದಲ್ಲಿ ಜಂಬೂಸವಾರಿ ಮೆರವಣಿಗೆ ಸಂಪನ್ನಗೊಂಡ ಬಳಿಕ ರಾತ್ರಿ ಚಾಮುಂಡಿ ಬೆಟ್ಟಕ್ಕೆ ಭೇಟಿ ನೀಡಿದ ಅವರು ಪ್ರತಿದಿನ ನಡೆಯುವ ದೇವಿಯ ಉತ್ಸವದಲ್ಲಿ ಕುಟುಂಬ ಸಮೇತ ಭಾಗವಹಿಸಿದ್ದರು. ದೇವಸ್ಥಾನದ ಸುತ್ತ ಒಂದು ಸುತ್ತು ತೇರು ಎಳೆಯುವ ಮೂಲಕ ನಾಡದೇವಿಗೆ ಭಕ್ತಿ ಸಮರ್ಪಿಸಿ ದರು. ಈ ಬಾರಿ ದಸರಾ ಮಹೋತ್ಸವವು ಸರಳ ಹಾಗೂ ಸಾಂಪ್ರದಾಯಿಕವಾಗಿ ಜರುಗಿ ದ್ದಕ್ಕೆ, ಯಾವುದೇ ಅಡ್ಡಿ, ಆತಂಕವಿಲ್ಲದೆ ಯಶಸ್ವಿ ಯಾಗಿದ್ದಕ್ಕೆ ಅವರು ಹರ್ಷಚಿತ್ತರಾಗಿದ್ದರು.