ಮೈಸೂರು,ಅ.14(ಆರ್‍ಕೆ)-ಮೈಸೂರು ನಗರದಲ್ಲಿ ಪೇಯಿಂಗ್ ಗೆಸ್ಟ್(ಪಿಜಿ) ನಡೆಸುವವರು ಉದ್ದಿಮೆ ಪರವಾನಗಿ ಪಡೆಯಲು ನೋಂದಾಯಿಸಿಕೊಳ್ಳಿ ಎಂದು ಮೈಸೂರು ಮಹಾನಗರ ಪಾಲಿಕೆ ಕಂದಾಯಾಧಿಕಾರಿಗಳು ಕರೆ ನೀಡಿದ್ದಾರೆ.
ಪಾಲಿಕೆಗೆ ಆದಾಯ ಕಡಿಮೆಯಾಗುತ್ತಿದ್ದು, ಅದರಿಂದ ಮೈಸೂರು ನಗರದ ನಾಗರಿಕರಿಗೆ ಅಗತ್ಯ ಮೂಲ ಸೌಕರ್ಯ ಒದಗಿಸಲು ಆರ್ಥಿಕ ಸಂಪನ್ಮೂಲದ ಕೊರತೆ ಎದುರಾಗುತ್ತಿದೆ ಎಂದು ಪಾಲಿಕೆ ಉಪ ಆಯುಕ್ತ(ಕಂದಾಯ) ಕುಮಾರ ನಾಯಕ ತಿಳಿಸಿದ್ದಾರೆ.
ಈ ಕುರಿತು ‘ಮೈಸೂರು ಮಿತ್ರ’ನೊಂದಿಗೆ ಮಾತ ನಾಡಿದ ಅವರು, ಪೇಯಿಂಗ್ ಗೆಸ್ಟ್ ನಡೆಸುವುದೂ ಒಂದು ಉದ್ದಿಮೆಯಾಗಿದ್ದು, ಅಂತಹವರು ಮೈಸೂರು ಮಹಾನಗರ ಪಾಲಿಕೆಯಿಂದ ಟ್ರೇಡ್ ಲೈಸನ್ಸ್ ಪಡೆಯುವ ಅಗತ್ಯವಿದೆ. ಕಟ್ಟಡ ಮಾಲೀಕರು ಅಥವಾ ಬಾಡಿಗೆ ದಾರರು ಅಗತ್ಯ ದಾಖಲೆಯೊಂದಿಗೆ ಹೆಸರು ನೋಂದಾಯಿಸಿಕೊಳ್ಳಬೇಕೆಂದು ತಿಳಿಸಿದ್ದಾರೆ.
ಅ.31ರೊಳಗಾಗಿ ಪಾಲಿಕೆ ವಲಯ ಕಚೇರಿಗಳಿಗೆ ತೆರಳಿ ಕಂದಾಯ ವಿಭಾಗದಲ್ಲಿ ಹೆಸರು ನೋಂದಾ ಯಿಸಿಕೊಂಡು ನಿಗದಿತ ತೆರಿಗೆ ಪಾವತಿಸಿ ಉದ್ಯಮ ಪರವಾನಗಿ (ಖಿಡಿಚಿಜe ಐiಛಿeಟಿಛಿe) ಪಡೆದು ಕೊಂಡು ಪೇಯಿಂಗ್ ಗೆಸ್ಟ್ ನಡೆಸಬೇಕೆಂದು ತಿಳಿಸಿರುವ ಕುಮಾರ ನಾಯಕ್, ಅನಧಿ ಕೃತವಾಗಿ ಈ ಉದ್ದಿಮೆ ನಡೆಸುವವರ ವಿರುದ್ಧ ಕರ್ನಾಟಕ ಮುನಿಸಿಪಲ್ ಕಾಯ್ದೆ ಯನ್ವಯ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ. ಪಿ.ಜಿ. ನಡೆಸುವ ಬಹುತೇಕ ಮಂದಿ ಕಟ್ಟಡದ ಬಳಿ ಫಲಕ ಅಳವಡಿಸಿಲ್ಲ. ಅನುಮತಿಯನ್ನು ಪಡೆಯದಿ ರುವುದರಿಂದ ಮೈಸೂರು ನಗರದಲ್ಲಿ ಎಷ್ಟು ಪೇಯಿಂಗ್ ಗೆಸ್ಟ್‍ಗಳಿವೆ, ಎಷ್ಟು ಮಂದಿಗೆ ಆಶ್ರಯ ನೀಡಲಾಗಿದೆ ಎಂಬ ನಿಖರ ಮಾಹಿತಿ ಪಾಲಿಕೆಗೆ ಸಿಗುತ್ತಿಲ್ಲ ಹಾಗೂ ಆ ಉದ್ದಿಮೆಯಿಂದ ಆದಾಯವೂ ಬರುತಿಲ್ಲ. ಕೊಠಡಿಗಳನ್ನು ಬಾಡಿಗೆಗೆ ನೀಡಿ ಊಟ-ತಿಂಡಿ ಒದ ಗಿಸಿ ಹಣ ಪಡೆಯುತ್ತಿರುವುದರಿಂದ ಅದನ್ನು ಒಂದು ಉದ್ದಿಮೆ (ಖಿಡಿಚಿಜe) ಎಂದೇ ಪರಿಗಣಿಸಬೇಕಾಗಿದೆ. ಆದ್ದರಿಂದ ಪೇಯಿಂಗ್ ಗೆಸ್ಟ್ ನಡೆಸುವವರು ಕಡ್ಡಾಯವಾಗಿ ಅ.31ರೊಳಗಾಗಿ ಪಾಲಿಕೆ ಕಚೇರಿಯಲ್ಲಿ ಹೆಸರು ನೋಂದಾಯಿಸಿಕೊಂಡು ಟ್ರೇಡ್ ಲೈಸನ್ಸ್ ಪಡೆಯಬೇಕೆಂದು ಅವರು ತಿಳಿಸಿದ್ದಾರೆ.
ಕಂದಾಯ ನಿವೇಶನ: ಮೈಸೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿರುವ ರೆವಿನ್ಯೂ ಬಡಾವಣೆ ನಿವೇಶನ ಹಾಗೂ ಮನೆ ಮಾಲೀಕರು ಸ್ವಯಂ ನಿರ್ಧರಣೆ ತೆರಿಗೆ ನಮೂನೆ ಗಳನ್ನು ಭರ್ತಿ ಮಾಡಿ ತೆರಿಗೆ ಪಾವತಿಸಬೇಕೆಂದೂ ಪಾಲಿಕೆ ಕಂದಾಯ ಉಪ ಆಯುಕ್ತ ತಿಳಿಸಿದ್ದಾರೆ.
ಪಾಲಿಕೆಯಿಂದ ರೆವಿನ್ಯೂ ಬಡಾವಣೆಗಳಿಗೂ ರಸ್ತೆ, ನೀರು, ಒಳಚರಂಡಿ, ಸ್ವಚ್ಛತೆಯಂತಹ ಮೂಲಭೂತ ಸೌಕರ್ಯ ಒದಗಿಸುತ್ತಿರುವುದರಿಂದ ಅಲ್ಲಿನ ನಿವೇಶನ ಮತ್ತು ಕಟ್ಟಡ ಮಾಲೀಕರು ಆಸ್ತಿ ತೆರಿಗೆ ಪಾವತಿಸಿ ರಶೀದಿ ಪಡೆದಲ್ಲಿ ಅದು ಆಸ್ತಿಯ ಅಧಿಕೃತ ದಾಖಲೆಯಾಗುತ್ತವೆ. ಒಂದು ವೇಳೆ ಸರ್ಕಾರ ‘ಅಕ್ರಮ-ಸಕ್ರಮ’ ಯೋಜನೆಯನ್ನು ಜಾರಿಗೊಳಿಸಿದರೆ, ಈ ತೆರಿಗೆ ಪಾವತಿಸಿರುವ ರಶೀದಿಯು ಅಧಿಕೃತ ದಾಖಲೆಯಾಗಲಿದೆ ಎಂದು ತಿಳಿಸಿದರು.
ಆದ್ದರಿಂದ ರೆವಿನ್ಯೂ ಬಡಾವಣೆ ನಿವೇಶನ ಹಾಗೂ ಮನೆ ಮಾಲೀಕರು ಪಾಲಿಕೆ ವಲಯ ಕಚೇರಿಗಳಿಗೆ ತೆರಳಿ ಎಸ್‍ಎಎಸ್ ಫಾರಂ ಅನ್ನು ಭರ್ತಿ ಮಾಡಿಕೊಟ್ಟರೆ, ಆನ್‍ಲೈನ್ ನಲ್ಲಿ ಜನರೇಟ್ ಆಗಿ ತೆರಿಗೆ ಪಾವತಿಸಿಕೊಳ್ಳಲು ಸಿಬ್ಬಂದಿ ನೆರವಾಗುತ್ತಾರೆ. ಅ.31ರೊಳಗಾಗಿ ಆಸ್ತಿ ತೆರಿಗೆ ಪಾವತಿಸಿ ದಾಖಲೆಗಳನ್ನು ಪಡೆಯುವಂತೆ ಅವರು ತಿಳಿಸಿದ್ದಾರೆ.