ಮೈಸೂರು, ಅ.14(ಆರ್‍ಕೆಬಿ)- ಕೃಷ್ಣ ರಾಜ ಕ್ಷೇತ್ರದಲ್ಲಿ ಹಲವು ವರ್ಷಗಳಿಂದ ಬಾಡಿಗೆ ಮನೆಯಲ್ಲಿಯೇ ವಾಸವಿದ್ದು, `ಸ್ವಂತ ಸೂರು’ ಕನಸು ಕಾಣುತ್ತಿರುವ ಬಡ ಜನರಿಗಾಗಿ ಶಾಸಕ ಎಸ್.ಎ.ರಾಮದಾಸ್ ಬುಧವಾರ ಆಯೋಜಿಸಿದ್ದ `ಕೆ.ಆರ್.ಕ್ಷೇತ್ರ -ಹೌಸಿಂಗ್ ಫಾರ್ ಆಲ್’ ಕಾರ್ಯಕ್ರಮವನ್ನು ಮಂಗಳಮುಖಿ ಪ್ರಣತಿ ಪ್ರಕಾಶ್, ಹಿರಿಯ ನಾಗರಿಕರಾದ ಲಕ್ಷ್ಮಮ್ಮ, ಹೂವಿನ ವ್ಯಾಪಾರಿ ಗಾಯತ್ರಿದೇವಿ ಉದ್ಘಾಟನೆ ನೆರವೇರಿಸಿದರು.
ಮೈಸೂರಿನ ಉತ್ತರಾದಿ ಮಠದ ರಸ್ತೆಯಲ್ಲಿ ರುವ ಕೆ.ಆರ್.ಕ್ಷೇತ್ರ ಆಶ್ರಯ ಕಚೇರಿ ಆವರಣ ದಲ್ಲಿ ಪಿಎಂಎವೈ-ಆಫೋರ್ಡಬಲ್ ಹೌಸಿಂಗ್ ಮತ್ತು ಆಶ್ರಯ ವಸತಿ ಯೋಜನೆ ಗಳಡಿ ನಡೆದ ಕಾರ್ಯಕ್ರಮದಲ್ಲಿ ಮನೆಯ ಮಾಡೆಲ್ ಅನ್ನು ವಿಶೇಷಚೇತನ ಯುವಕ ಗುರುದೀಪ್ ಅನಾವರಣಗೊಳಿಸಿ ಮಾತನಾಡಿದ ಅವರು, ಪ್ರಾಣಿಗಳನ್ನು ಹಿಂಸಿಸಬೇಡಿ, ಅವು ಗಳನ್ನು ಪ್ರೀತಿಯಿಂದ ಕಾಪಾಡೋಣ. ಕಾರ್ಯಕ್ರಮಕ್ಕೆ ಆಹ್ವಾನಿಸಿ ಚಾಲನೆ ಕೊಡಿ ಸಿದ್ದು ನನ್ನ ಸೌಭಾಗ್ಯ ಎಂದು ನುಡಿದರು.
ಈ ಸಂದರ್ಭ ಮಾತನಾಡಿದ ಶಾಸಕ ಎಸ್.ಎ.ರಾಮದಾಸ್, `ಬಾಡಿಗೆ ಮನೆಯಲ್ಲಿ ಹುಟ್ಟಿದ್ದೇನೆ.. ಬಾಡಿಗೆ ಮನೆಯಲ್ಲೇ ಸಾಯ ಬೇಕೆ?’ ಎಂಬ ವೃದ್ಧ ಮಹಿಳೆಯ ಪ್ರಶ್ನೆ ಕೇಳಿ ಬೇಸರವಾಗಿತ್ತು. ಹಾಗಾಗಿ ಇಂದು ಆ ಅಜ್ಜಿಯಿಂದಲೇ ಸ್ವಂತ ಸೂರು ಯೋಜ ನೆಗೆ ಚಾಲನೆ ಕೊಡಿಸಿದ್ದೇನೆ. ಯಾರು ಗುಡಿ ಸಲಲ್ಲಿ, ಶಿಥಿಲಗೊಂಡ ಮನೆಗಳಲ್ಲಿ ವಾಸಿ ಸುತ್ತಿದ್ದಾರೋ ಅವರಿಗಾಗಿಯೇ ಈ ಯೋಜನೆ ರೂಪಿಸಿದ್ದೇವೆ. ಪ್ರಧಾನಮಂತ್ರಿ ಆವಾಸ್ ಯೋಜನೆ ಮತ್ತು ರಾಜ್ಯ ಸರ್ಕಾರದ ಯೋಜನೆಗಳಡಿ ಈ ಮನೆಗಳನ್ನು ನೀಡಲಾಗು ತ್ತದೆ. ಸದ್ಯ ಬಾಡಿಗೆ ಮನೆಯಲ್ಲಿರುವ ಎಲ್ಲ ರಿಗೂ 2022ರ ಆ.15ರೊಳಗೆ ಸ್ವಂತ ಸೂರು ಒದಗಿಸಲಿದ್ದೇವೆ ಎಂದು ಹೇಳಿದರು.
ಬಾಡಿಗೆ ಮನೆ ನಿವಾಸಿಗಳಲ್ಲಿ ಸ್ಮಾರ್ಟ್ ಫೋನ್ ಇದ್ದರೆ ಆನ್‍ಲೈನ್‍ನಲ್ಲಿ ಅರ್ಜಿ ಹಾಕಬಹುದು. ಸ್ಮಾರ್ಟ್‍ಫೋನ್ ಇಲ್ಲದ ವರು ಆಶ್ರಯ ಸಮಿತಿ ಕಚೇರಿಯಲ್ಲಿ ಸಾಮಾಜಿಕ ಅಂತರ ಕಾಯ್ದುಕೊಂಡು ಅರ್ಜಿ ಸಲ್ಲಿಸಬಹುದು. ಈ ಯೋಜನೆ ಗಾಗಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಶೇ.75ರಷ್ಟು ಅಂದರೆ 175 ಕೋಟಿ ರೂ. ಸಾಲ ನೀಡಲಿದೆ. ಮನೆ ಪಡೆದವರು ಪ್ರತಿ ತಿಂಗಳ ಬಾಡಿಗೆಯನ್ನೇ ಬ್ಯಾಂಕಿಗೆ ಇಎಂಐ ರೀತಿ ಕಟ್ಟಬಹುದಾಗಿದೆ ಎಂದರು.
ಕೃಷ್ಣರಾಜ ಕ್ಷೇತ್ರದ ನಿವಾಸಿಗಳೆಲ್ಲರೂ www.krashraya.com ನಲ್ಲಿ ಅರ್ಜಿ ಸಲ್ಲಿಸಬಹುದು. ಅ.29ರವರೆಗೆ ಅಂದರೆ 15 ದಿನಗಳ ಕಾಲ ನಿಮ್ಮ ಮನೆಗಳಿಗೇ ನಮ್ಮ ಬೂತ್ ಮಟ್ಟದ ತಂಡ ಭೇಟಿ ನೀಡಿ ನಿಮ್ಮಿಂ ದಲೇ ಆನ್‍ಲೈನ್‍ನಲ್ಲಿ ಅರ್ಜಿ ಅಪ್‍ಲೋಡ್ ಮಾಡಿಕೊಡುವ ಕೆಲಸ ಮಾಡಲಿದೆ. ಕೃಷ್ಣ ರಾಜ ಕ್ಷೇತ್ರವನ್ನು `ಮಾದರಿ ಕ್ಷೇತ್ರ’ವಾ ಗಿ ಸಲು ಎಲ್ಲರ ಸಹಕಾರ ಅಗತ್ಯ ಎಂದು ಸಾರ್ವಜನಿಕರ ಸಹಕಾರ ಕೋರಿದರು. ಪಾಲಿಕೆ ಸದಸ್ಯ ಬಿ.ವಿ.ಮಂಜುನಾಥ್, ಆಶ್ರಯ ಸಮಿತಿ ಉಪಾಧ್ಯಕ್ಷೆ ವಿದ್ಯಾಅರಸ್, ಸದಸ್ಯರಾದ ಹೇಮಂತಕುಮಾರ್, ಹನ್ಸ್ ರಾಜ್ ಜೈನ್, ಗೌರಿ, ಹೆಚ್ಚುವರಿ ಆಯುಕ್ತ ಶಶಿಕುಮಾರ್, ಟೌನ್ ಪ್ಲಾನಿಂಗ್ ನಿರ್ದೇಶಕ ಜಯಸಿಂಹ ಇನ್ನಿತರರು ಉಪಸ್ಥಿತರಿದ್ದರು.