ಇಂದಿನಿಂದ ಚಿತ್ರಮಂದಿರಗಳ ತೆರೆಯಲು ಅವಕಾಶ
ಮೈಸೂರು

ಇಂದಿನಿಂದ ಚಿತ್ರಮಂದಿರಗಳ ತೆರೆಯಲು ಅವಕಾಶ

October 15, 2020

ಮೈಸೂರು,ಅ.14(ಆರ್‍ಕೆ)- ಕೊರೊನಾ ವೈರಸ್ ಸೋಂಕು ವ್ಯಾಪಕವಾಗಿ ಹರಡು ತ್ತಿದ್ದರೂ, ಅನ್‍ಲಾಕ್ 5.0 ಮಾರ್ಗಸೂಚಿ ಯನ್ವಯ ನಾಳೆ (ಅ.15)ಯಿಂದ ಚಿತ್ರ ಮಂದಿರಗಳ ತೆರೆಯಲು ಅವಕಾಶ ನೀಡ ಲಾಗಿದೆ. ಕೇಂದ್ರ ಸರ್ಕಾರದ ಮಾರ್ಗ ಸೂಚಿಯನ್ವಯ ರಾಜ್ಯ ಸರ್ಕಾರವು ಶೇ.50ರಷ್ಟು ಪ್ರೇಕ್ಷಕರಿಗೆ ಮಾತ್ರ ಮಿತಿ ಗೊಳಿಸಿ ಗುರುವಾರದಿಂದ ಚಿತ್ರಮಂದಿರ ಗಳಲ್ಲಿ ಚಲನಚಿತ್ರ ಪ್ರದರ್ಶನಕ್ಕೆ ಅವಕಾಶ ನೀಡಿರುವುದರಿಂದ ಥಿಯೇಟರ್ ಮಾಲೀ ಕರು ಸಕಲ ಸಿದ್ಧತೆ ನಡೆಸಿದ್ದಾರೆ.

ಒಂದು ಆಸನಕ್ಕೂ ಇನ್ನೊಂದು ಆಸ ನಕ್ಕೂ ನಡುವೆ ಖಾಲಿ ಬಿಡಬೇಕು. ಪ್ರದ ರ್ಶನ ಆರಂಭವಾಗುವ ಮುನ್ನ ಇಡೀ ಚಿತ್ರಮಂದಿರವನ್ನು ಸ್ಯಾನಿಟೈಸ್ ಮಾಡ ಬೇಕು, ಸಿನಿಮಾ ನೋಡಲು ಬರುವ ಪ್ರತಿಯೊಬ್ಬ ಪ್ರೇಕ್ಷಕರಿಗೂ ಥರ್ಮಲ್ ಸ್ಕ್ರೀನಿಂಗ್ ಮಾಡಿ ಮಾಸ್ಕ್ ಧರಿಸುವಂತೆ ನೋಡಿಕೊಳ್ಳುವ ಜೊತೆಗೆ ಸ್ಯಾನಿಟೈಸರ್ ಪೂರೈಸಬೇಕು. ಸಿಬ್ಬಂದಿಯ ರಕ್ಷಣೆಗೂ ಆದ್ಯತೆ ನೀಡಿ, ಗುಣಮಟ್ಟದ ತಿಂಡಿ ಪದಾರ್ಥ ಮಾರಾಟ ಮಾಡುವಂತೆ ನಿಗಾ ವಹಿಸ ಬೇಕೆಂಬುದೂ ಸೇರಿದಂತೆ ಹಲವು ಸೂಚನೆ ಗಳನ್ನು ಪಾಲಿಸಬೇಕೆಂದು ಮಾರ್ಗಸೂಚಿ ಯಲ್ಲಿ ತಿಳಿಸಲಾಗಿದೆ. ಟಿಕೆಟ್ ಕೌಂಟರ್ ಬಳಿ ಭದ್ರತಾ ಸಿಬ್ಬಂದಿ ನಿಯೋಜಿಸಿ ಅಂತರ ಕಾಯ್ದುಕೊಳ್ಳುವಂತೆ ನೋಡಿಕೊಂಡು ಮಾಸ್ಕ್ ಧರಿಸದವರನ್ನು ವಾಪಸ್ ಕಳುಹಿ ಸಬೇಕು. ಸಿನಿಮಾ ಬಿಟ್ಟಾಗ ಜನರು ಗುಂಪಾಗಿ ಸೇರದಂತೆ ನಿಗಾ ವಹಿಸಬೇಕು. ಪ್ರತೀ ಪ್ರದ ರ್ಶನ ಮುಗಿದಾಗಲೂ ಸ್ಯಾನಿಟೈಸ್ ಮಾಡುವು ದನ್ನು ಪಾಲಿಸಬೇಕೆಂದು ಸೂಚಿಸಲಾಗಿದೆ.

ಮಾಲೀಕರ ನಿರಾಸಕ್ತಿ: ಈ ಕುರಿತು `ಮೈಸೂರು ಮಿತ್ರ’ನಿಗೆ ಪ್ರತಿಕ್ರಿಯೆ ನೀಡಿ ರುವ ಮೈಸೂರು ನಗರ ಚಿತ್ರಮಂದಿರ ಮಾಲೀಕರ ಸಂಘದ ಉಪಾಧ್ಯಕ್ಷ ರಾಜಾರಾಂ, ಮಾರ್ಗಸೂಚಿಯನ್ನು ಅನುಸರಿಸಿ ಚಿತ್ರ ಪ್ರದರ್ಶನ ಮಾಡಿದರೆ ಆದಾಯಕ್ಕಿಂತ ಖರ್ಚೇ ಜಾಸ್ತಿಯಾಗುತ್ತದೆ ಎಂದರು.

ಕೇವಲ ಶೇ.50ರಷ್ಟು ಆಸನಗಳಿಗೆ ಮಾತ್ರ ಟಿಕೆಟ್ ಕೊಟ್ಟು ಪ್ರದರ್ಶನ ನಡೆಸಿ ದರೆ, ವಿದ್ಯುತ್ ಶುಲ್ಕ, ಥಿಯೇಟರ್ ನಿರ್ವಹಣೆ, ಸಿಬ್ಬಂದಿ ಸಂಬಳ ಸೇರಿದಂತೆ ಇನ್ನಿತರೆ ವೆಚ್ಚ ಭರಿಸಲು ಸಾಧ್ಯವಾಗು ವುದಿಲ್ಲ. ಜೊತೆಗೆ ಲಾಕ್‍ಡೌನ್ ನಿರ್ಬಂಧ ದಿಂದಾಗಿ ಯಾವುದೇ ಹೊಸ ಸಿನಿಮಾ ತಯಾರಾಗಿ ಬಿಡುಗಡೆಯಾಗಿಲ್ಲ. ಹಳೆ ಸಿನಿಮಾ ಹಾಕಿದರೆ ಜನರು ಬರುವು ದಿಲ್ಲ. ಪರಿಸ್ಥಿತಿ ಹೀಗಿರುವಾಗ ಚಿತ್ರಮಂ ದಿರ ತೆರೆದರೆ ಏನು ಪ್ರಯೋಜನ ಎಂದು ಅವರು ಪ್ರಶ್ನಿಸಿದ್ದಾರೆ.

ಒಂದೆಡೆ ತೆರಿಗೆ, ಮತ್ತೊಂದೆಡೆ ಅತೀ ಹೆಚ್ಚು ವೆಚ್ಚ. ಅದನ್ನು ನಿರ್ವಹಿಸಿ ಕೊಂಡು ಚಿತ್ರ ಪ್ರದರ್ಶನ ಮಾಡುವುದ ಕ್ಕಿಂತ ಸುಮ್ಮನಿರುವುದೇ ಮೇಲು ಎಂದ ರಾಜಾರಾಂ, ಮೈಸೂರಲ್ಲಿ ಬಹುತೇಕ ಚಿತ್ರಮಂದಿರಗಳು ಆರಂಭಗೊಳ್ಳುವುದು ಅನುಮಾನ ಎಂದು ತಿಳಿಸಿದರು.

 

 

Translate »