ಕೊರೊನಾ ಸೋಂಕಿಗೆ ಡಿಎಂಕೆ ಶಾಸಕ ಅನ್ಬಳಗನ್ ಸಾವು
ಮೈಸೂರು

ಕೊರೊನಾ ಸೋಂಕಿಗೆ ಡಿಎಂಕೆ ಶಾಸಕ ಅನ್ಬಳಗನ್ ಸಾವು

June 11, 2020

ಚೆನ್ನೈ, ಜೂ.10-ಕೊರೊನಾ ಸೋಂಕಿನಿಂದ ಆಸ್ಪತ್ರೆಗೆ ದಾಖ ಲಾಗಿ ಗಂಭೀರ ಸ್ವರೂಪದಲ್ಲಿದ್ದ ಡಿಎಂಕೆ ಶಾಸಕ ಜೆ.ಅನ್ಬಳಗನ್ ಚಿಕಿತ್ಸೆ ಫಲಕಾರಿಯಾಗದೆ ಬುಧವಾರ ಬೆಳಗ್ಗೆ ನಿಧನರಾಗಿದ್ದಾರೆ.

61 ವರ್ಷದ ಡಿಎಂಕೆ ಶಾಸಕ ಜೆ.ಅನ್ಬಳಗನ್ ಆರೋಗ್ಯ ಸ್ಥಿತಿ ಗಂಭೀರ ವಾಗಿದ್ದು ಆಮ್ಲಜನಕದ ಪ್ರಮಾಣ ಅರ್ಧಕ್ಕೆ ಇಳಿದಿದೆ ಎಂದು ನಿನ್ನೆ ಆಸ್ಪತ್ರೆಯ ವೈದ್ಯರು ತಿಳಿಸಿದ್ದರು.

ನಂತರವೂ ಅವರ ಆರೋಗ್ಯ ಸ್ಥಿತಿ ಯಲ್ಲಿ ಯಾವುದೇ ಸುಧಾರಣೆ ಕಂಡು ಬಂದಿರಲಿಲ್ಲ. ಅವರಿಗೆ ಹೃದ್ರೋಗ, ರಕ್ತದೊತ್ತಡ, ಕಿಡ್ನಿ ಸಮಸ್ಯೆ ಕೂಡ ಇತ್ತು. ಎಲ್ಲವೂ ಒಟ್ಟು ಸೇರಿ ಕೊರೊನಾ ಸೋಂಕು ತಗಲಿದ ನಂತರ ಗಂಭೀರವಾಗಿ ಮೃತಪಟ್ಟಿದ್ದಾರೆ. ಉಸಿ ರಾಟದ ಸಮಸ್ಯೆ ಎಂದು ಹೇಳಿ ಕಳೆದ ಜೂ.2ರಂದು ಚೆನ್ನೈನ ಡಾ.ರೇಲಾ ವೈದ್ಯ ಕೀಯ ಸಂಸ್ಥೆಗೆ ದಾಖಲಾದ ಅನ್ಬಳ ಗನ್ ಅವರಿಗೆ ಪರೀಕ್ಷೆ ಮಾಡಿಸಿದಾಗ ಕೊರೊನಾ ಸೋಂಕು ದೃಢಪಟ್ಟಿತ್ತು.

Translate »