ದೇಶಾದ್ಯಂತ 24 ಗಂಟೆಗಳಲ್ಲಿ 9,985 ಮಂದಿಗೆ ಕೊರೊನಾ ಸೋಂಕಿತರ ಸಂಖ್ಯೆ 2.76 ಲಕ್ಷಕ್ಕೆ ಏರಿಕೆ
ಮೈಸೂರು

ದೇಶಾದ್ಯಂತ 24 ಗಂಟೆಗಳಲ್ಲಿ 9,985 ಮಂದಿಗೆ ಕೊರೊನಾ ಸೋಂಕಿತರ ಸಂಖ್ಯೆ 2.76 ಲಕ್ಷಕ್ಕೆ ಏರಿಕೆ

June 11, 2020

ನವದೆಹಲಿ: ದೇಶದಲ್ಲಿ ಕೊರೊನಾ ವೈರಸ್ ಆರ್ಭಟ ಮುಂದುವರೆ ದಿದ್ದು, ಕಳೆದ 24 ಗಂಟೆಗಳಲ್ಲಿ 9,985 ಮಂದಿಯಲ್ಲಿ ಹೊಸ ದಾಗಿ ಸೋಂಕು ಪತ್ತೆಯಾಗಿದೆ. ಇದರೊಂದಿಗೆ ದೇಶದಲ್ಲಿ ಒಟ್ಟಾರೆ ಸೋಂಕಿತರ ಸಂಖ್ಯೆ 2,76,583ಕ್ಕೆ ಏರಿಕೆಯಾಗಿದೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಬುಧವಾರ ಮಾಹಿತಿ ನೀಡಿದೆ.

ಈ ನಡುವೆ ದೇಶದಲ್ಲಿ ನಿನ್ನೆ ಒಂದೇ ದಿನ 279 ಮಂದಿ ಮಹಾಮಾರಿಗೆ ಬಲಿ ಯಾಗಿದ್ದು, ಸಾವಿನ ಸಂಖ್ಯೆ ಕೂಡ 7,745ಕ್ಕೆ ಏರಿಕೆಯಾಗಿದೆ. ಇನ್ನು 276583 ಮಂದಿ ಪೈಕಿ 1,35,206 ಮಂದಿ ಸೋಂಕಿನಿಂದ ಗುಣಮುಖರಾಗಿ ಬಿಡುಗಡೆಗೊಂಡಿದ್ದು, ಇನ್ನೂ ದೇಶದಲ್ಲಿ 1,35,206 ಮಂದಿ ಸೋಂಕಿ ನಿಂದ ಬಳಲುತ್ತಿದ್ದಾರೆ. ಮಹಾರಾಷ್ಟ್ರ ರಾಜ್ಯ ದಲ್ಲಿ ನಿನ್ನೆ ಒಂದೇ ದಿನ 2251 ಮಂದಿ ಯಲ್ಲಿ ಸೋಂಕು ಪತ್ತೆಯಾಗಿದ್ದು, ರಾಜ್ಯ ದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 90787ಕ್ಕೆ ತಲುಪಿದೆ. ಉಳಿದಂತೆ ತಮಿಳುನಾಡಿನಲ್ಲಿ 1685, ದೆಹಲಿಯಲ್ಲಿ 1007 ಹೊಸ ಪ್ರಕ ರಣಗಳು ದಾಖಲಾಗಿವೆ.

Translate »