ಮುಡಿಹರಕೆ ತೆಗೆಯಲು ಅವಕಾಶ ಕೋರಿಕೆ
ಮೈಸೂರು

ಮುಡಿಹರಕೆ ತೆಗೆಯಲು ಅವಕಾಶ ಕೋರಿಕೆ

June 11, 2020

ಮೈಸೂರು, ಜೂ.10(ಎಸ್‍ಪಿಎನ್)- ನಂಜನಗೂಡು ಶ್ರೀಕಂಠೇಶ್ವರ ದೇವ ಸ್ಥಾನಕ್ಕೆ ಬರುವ ಭಕ್ತಾದಿಗಳಿಗೆ ಮುಡಿ ಹರಕೆ ತೆಗೆಯಲು ಅವಕಾಶ ಮಾಡಿಕೊಡು ವಂತೆ ನಂಜನಗೂಡು ಮುಡಿಕಟ್ಟೆ ನಯ ನಜ ಕ್ಷತ್ರಿಯ ಮಂಡಳಿ ಪದಾಧಿಕಾರಿಗಳು ಜಿಲ್ಲಾಧಿಕಾರಿ ಕಚೇರಿಗೆ ಬುಧವಾರ ಮನವಿ ಸಲ್ಲಿಸಿದರು. ನಂತರ ಮಾಧ್ಯಮಗಳೊಂ ದಿಗೆ ಮಾತನಾಡಿದ ಮಂಡಳಿ ಅಧ್ಯಕ್ಷ ರಾಜಪ್ಪ, ಕೊರೊನಾ ಸೋಂಕು ತಡೆಗಟ್ಟಲು ಮಾ.24ರಿಂದ ಕೇಂದ್ರ ಸರ್ಕಾರ ಲಾಕ್ ಡೌನ್ ಘೋಷಣೆ ಮಾಡಿತು. ಅಂದಿನಿಂ ದಲೇ ಭಕ್ತಾದಿಗಳಿಗೆ ಮುಡಿಹರಕೆ ತೆಗೆಯು ವುದನ್ನು ನಿಲ್ಲಿಸಿದೆವು. ಈಗ ಜೂ.8ರಿಂದ ದೇವಸ್ಥಾನಗಳ ಬಾಗಿಲು ತೆರೆದಿವೆ. ವಿವಿ ಧೆಡೆಯಿಂದ ದೇವಸ್ಥಾನಕ್ಕೆ ಆಗಮಿಸುವ ಭಕ್ತಾದಿಗಳು ಸ್ಥಳೀಯ ಸಲೂನ್‍ಶಾಪ್ ಗಳಿಗೆ ತೆರಳಿ ಮುಡಿಹರಕೆ ತೆಗೆಸುತ್ತಿದ್ದಾರೆ. ಆದರೆ ಈ ವೃತ್ತಿಯನ್ನೇ ನಂಬಿದ, ಬೇರೆಲ್ಲೂ ಕೆಲಸ ಮಾಡದ ನಮಗೆ, ಅಂದರೆ 150 ಮಂದಿ ಸ್ಥಳೀಯ ಕ್ಷೌರಿಕರಿಗೆ ಅನ್ಯಾಯವಾಗುತ್ತದೆ. ಹಾಗಾಗಿ ಲಾಕ್‍ಡೌನ್‍ನಿಂದಾಗಿ ಮುಚ್ಚಿ ರುವ ಮುಡಿಕಟ್ಟೆ ತೆರೆಯಲು ಅವಕಾಶ ಮಾಡಿಕೊಡುವಂತೆ ಜಿಲ್ಲಾಧಿಕಾರಿಗಳಲ್ಲಿ ಮನವಿ ಮಾಡಿದ್ದೇವೆ ಎಂದರು. ಸಂಘದ ಪದಾಧಿಕಾರಿಗಳು, ಸದಸ್ಯರಾದ ಎನ್.ಶ್ರೀನಿ ವಾಸ್, ವಿಷಕಂಠ, ಚಂದ್ರಶೇಖರ್ ಇದ್ದರು.

Translate »