ಉತ್ತರಪ್ರದೇಶದಲ್ಲಿ ರೈತರ ಸಾವು; ಎಸ್‍ಯುಸಿಐ(ಸಿ) ಪ್ರತಿಭಟನೆ
ಮೈಸೂರು

ಉತ್ತರಪ್ರದೇಶದಲ್ಲಿ ರೈತರ ಸಾವು; ಎಸ್‍ಯುಸಿಐ(ಸಿ) ಪ್ರತಿಭಟನೆ

October 6, 2021

ಮೈಸೂರು, ಅ.5(ಪಿಎಂ)-ಉತ್ತರ ಪ್ರದೇಶದ ಲಖೀಂಪುರ್ ಖೇರಿಯಲ್ಲಿ ಪ್ರತಿಭಟನಾನಿರತ ರೈತರ ಮೇಲೆ ಕೇಂದ್ರ ಗೃಹ ಖಾತೆ ಸಹಾಯಕ ಸಚಿವ ಅಜಯ್ ಮಿಶ್ರಾ ಅವರ ಬೆಂಗಾವಲು ವಾಹನ ಹರಿದು 8 ಮಂದಿ ರೈತರು ಮೃತಪಟ್ಟಿರುವ ಘಟನೆ ಖಂಡಿಸಿ ಸೋಷಿಯಲಿಸ್ಟ್ ಯೂನಿಟಿ ಸೆಂಟರ್ ಆಫ್ ಇಂಡಿಯಾ ಕಮ್ಯುನಿಸ್ಟ್ (ಎಸ್‍ಯುಸಿಐ) ಪಕ್ಷದ ಮೈಸೂರು ಜಿಲ್ಲಾ ಸಮಿತಿ ವತಿಯಿಂದ ಮಂಗಳವಾರ ಪ್ರತಿಭಟನೆ ನಡೆಸಲಾಯಿತು.
ಮೈಸೂರಿನ ರಾಮಸ್ವಾಮಿ ವೃತ್ತದಲ್ಲಿ ಜಮಾಯಿಸಿದ ಪ್ರತಿಭಟನಾಕಾರರು, ಕೇಂದ್ರ ಸರ್ಕಾರದ ಮೂರು ಕರಾಳ ಕೃಷಿ ಕಾಯ್ದೆ ಗಳ ವಿರುದ್ಧ ದೆಹಲಿಯ ಗಡಿಗಳಲ್ಲಿ ಹರಿ ಯಾಣ, ಉತ್ತರಪ್ರದೇಶ ಪಂಜಾಬ್ ಮೊದಲಾದ ರಾಜ್ಯಗಳ ಲಕ್ಷಾಂತರ ರೈತರು ಕಳೆದ 10 ತಿಂಗಳಿಂದಲೂ ಶಾಂತಿ ಯುತ ಪ್ರತಿಭಟನೆ ನಡೆಸುತ್ತಲೇ ಬಂದಿ ದ್ದಾರೆ. ಆದರೆ ರೈತರ ಪ್ರತಿಭಟನೆಗೆ ಕೇಂದ್ರ ಸರ್ಕಾರ ಕಿಂಚಿತ್ತೂ ಪ್ರತಿಸ್ಪಂದಿಸಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ರೈತರ ಸಾವಿಗೆ ಕಾರಣರಾದ ಸಚಿವ ಅಜಯ್ ಮಿಶ್ರಾರವರು ತಮ್ಮ ಪ್ರಭಾವ ಬಳಸಿ ಸಾಕ್ಷ್ಯಾಧಾರಗಳನ್ನು ತಿರುಚಿ, ಸತ್ಯವನ್ನು ಮರೆಮಾಚುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ಅವರನ್ನು ಕೂಡಲೇ ಸಚಿವ ಸ್ಥಾನದಿಂದ ವಜಾಗೊಳಿಸಬೇಕು. ಜೊತೆಗೆ ರೈತರ ಸಾವಿಗೆ ಕಾರಣರಾದ ಆರೋಪಿಗಳಿಗೆ ಕಾನೂನಿನಂತೆ ಕಠಿಣ ಶಿಕ್ಷೆ ವಿಧಿಸಬೇಕು. ಅಲ್ಲದೆ, ಸಂತ್ರಸ್ತರ ಕುಟುಂಬದವರಿಗೆ ಸೂಕ್ತ ಪರಿಹಾರ ನೀಡಬೇಕೆಂದು ಒತ್ತಾಯಿಸಿದರು.
ಎಸ್‍ಯುಸಿಐ(ಸಿ) ಜಿಲ್ಲಾ ಕಾರ್ಯ ದರ್ಶಿ ಬಿ.ರವಿ, ಎಐಯುಟಿಯುಸಿ ಜಿಲ್ಲಾ ಅಧ್ಯಕ್ಷ ಯಶೋಧರ್, ಕಾರ್ಯದರ್ಶಿ ಚಂದ್ರಶೇಖರ್ ಮೇಟಿ, ವಿವಿಧ ಸಂಘ ಟನೆ ಮುಖಂಡರಾದ ಉಗ್ರನರಸಿಂಹೇ ಗೌಡ, ಸಂಧ್ಯಾ, ಸೀಮಾ, ಮುದ್ದುಕೃಷ್ಣ, ಸುಭಾಷ್, ಟಿ.ಎಸ್.ಸುನೀಲ್, ಆಸಿಯಾ ಬೇಗಂ ಮತ್ತಿತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

Translate »