ರಾಷ್ಟçಪತಿಗಳಿಂದ ಚಾ.ನಗರ ಮೆಡಿಕಲ್ ಕಾಲೇಜು ಆಸ್ಪತ್ರೆ ಲೋಕಾರ್ಪಣೆ
ಮೈಸೂರು

ರಾಷ್ಟçಪತಿಗಳಿಂದ ಚಾ.ನಗರ ಮೆಡಿಕಲ್ ಕಾಲೇಜು ಆಸ್ಪತ್ರೆ ಲೋಕಾರ್ಪಣೆ

October 8, 2021

ಚಾಮರಾಜನಗರ, ಅ.೭(ಎಸ್‌ಎಸ್) – ಚಾಮರಾಜನಗರದ ಯಡಬೆಟ್ಟ ಬಳಿ ವೈದ್ಯಕೀಯ ವಿಜ್ಞಾನ ಸಂಸ್ಥೆಯ ೪೫೦ ಹಾಸಿಗೆಗಳ ಬೋಧನಾ ಆಸ್ಪತ್ರೆ (ಸಿಮ್ಸ್) ಯನ್ನು ಗುರುವಾರ ರಾಷ್ಟçಪತಿ ರಾಮನಾಥ ಕೋವಿಂದ್ ಲೋಕಾರ್ಪಣೆಗೊಳಿಸಿದರು.

ಬಳಿಕ ಮಾತನಾಡಿದ ಅವರು, ಜಿಲ್ಲೆ ಯಲ್ಲಿ ಪರಿಶಿಷ್ಟ ಜಾತಿ ಮತ್ತು ಪಂಗಡ ದವರು ಹೆಚ್ಚಿದ್ದಾರೆ. ಸಿಮ್ಸ್ನಲ್ಲಿ ರಾಜ್ಯ ಸರ್ಕಾರವು ಕೈಗೆಟಕುವ ದರದಲ್ಲಿ ಆರೋಗ್ಯ ಸೇವೆ ಲಭ್ಯವಾಗುವಂತೆ ಕ್ರಮ ಕೈಗೊಳ್ಳಬೇಕು. ಸಾರ್ವತ್ರಿಕ ಆರೋಗ್ಯ ಸೇವೆ ಒದಗಿಸುವ ಗುರಿ ತಲುಪಲು ವೈದ್ಯಕೀಯ ಸೇವೆಗಳ ವಿಸ್ತ ರಣೆಯಾಗುತ್ತಿರುವುದು ಉತ್ತಮ ಬೆಳವಣ ಗೆ ಯಾಗಿದೆ. ಭಾರತ ಸರ್ಕಾರವು ಈಗಾ ಗಲೇ ಏಮ್ಸ್ ಸಂಖ್ಯೆಯನ್ನು ೬ ರಿಂದ ೨೨ಕ್ಕೆ ಹೆಚ್ಚಿಸಿದೆ ಎಂದು ಹೇಳಿದರು.ಇಡೀ ದೇಶದಲ್ಲಿ ಆರೋಗ್ಯ ಮೂಲ ಸೌಕರ್ಯವನ್ನು ಸುಧಾರಿಸಲು ಪ್ರತಿ ಜಿಲ್ಲೆ ಯಲ್ಲಿ ಹೊಸ ವೈದ್ಯಕೀಯ ಕಾಲೇಜುಗಳನ್ನು ತೆರೆಯಲಾಗುತ್ತಿದೆ.

ಹೊಸ ಸ್ನಾತಕೋತ್ತರ ಕಾಲೇಜುಗಳು ಸ್ಥಾಪನೆಯಾಗುತ್ತಿವೆ. ಇದರ ಜೊತೆಗೆ, ಈಗಿರುವ ಸ್ನಾತಕೋತ್ತರ ಕೇಂದ್ರಗಳೂ ಉತ್ತಮಗೊಳ್ಳುತ್ತಿವೆ. ಮಾನವ ಸಂಪನ್ಮೂಲವಿಲ್ಲದೆ ಇದರ ಉದ್ದೇಶವನ್ನು ಪೂರೈಸಲು ಸಾಧ್ಯವಿಲ್ಲ. ನಾವು ನಮ್ಮ ಆರೋಗ್ಯ ಸೇವೆಗಳನ್ನು ನಮ್ಮ ದೇಶದ ಮೂಲೆ ಮೂಲೆಗೂ ಕೊಂಡೊಯ್ಯಬೇಕು ಎಂದರು.

೨೦೨೦-೨೧ರಲ್ಲಿ ಆಯುಷ್ಮಾನ್ ಭಾರತ್-ಆರೋಗ್ಯ ಕರ್ನಾಟಕ ಯೋಜನೆಂ ಅನುಷ್ಠಾನದಲ್ಲಿ ಸಿಮ್ಸ್ ಮೂರನೇ ಸ್ಥಾನದಲ್ಲಿದೆ ಎಂದು ರಾಷ್ಟçಪತಿಗಳು ಹರ್ಷ ವ್ಯಕ್ತಪಡಿಸಿದರು.
ಉನ್ನತ ಆರೋಗ್ಯ ಸೇವೆ ಕಲ್ಪಿಸುವಲ್ಲಿ, ಈ ಸಂಸ್ಥೆಯ ವಿದ್ಯಾರ್ಥಿಗಳು ಮತ್ತು ಆಡಳಿತ ವರ್ಗ ನಿರ್ಣಾಯಕ ಪಾತ್ರವನ್ನು ವಹಿಸಬೇಕು. ಇಲ್ಲಿ ತರಬೇತಿ ಪಡೆಯುತ್ತಿರುವ ವೈದ್ಯರು, ದಾದಿಯರು ಮತ್ತು ಅರೆ ವೈದ್ಯಕೀಯ ಸಿಬ್ಬಂದಿ ಹೆಚ್ಚಿನ ಬದ್ಧತೆ ಮತ್ತು ಸಮರ್ಪಣೆಯೊಂದಿಗೆ ಸೇವೆ ಸಲ್ಲಿಸುತ್ತಾರೆ ಮತ್ತು ವೃತ್ತಿಗೆ ಕೀರ್ತಿ ತರುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಕಳೆದ ವರ್ಷದ ಆರಂಭದಿAದಲೂ ವಿಶ್ವದಾದ್ಯಂತ ಕೋವಿಡ್-೧೯ ಸೋಂಕು ವ್ಯಾಪಿಸಿದೆ. ಇದಕ್ಕೆ ಭಾರತವೂ ಹೊರತಲ್ಲ. ಆದರೆ, ಈ ಸೋಂಕಿನ ವಿರುದ್ಧದ ಹೋರಾಟ ಎಲ್ಲಾ ಭಾರತೀಯರನ್ನು ಒಂದುಗೂಡಿಸಿತು. ವೈದ್ಯಕೀಯ ಕ್ಷೇತ್ರದ ಸೇವಾ ಸಮರ್ಪಣೆಯಿಲ್ಲದೇ ಇದು ಸಾಧ್ಯವಾಗುತ್ತಿರಲಿಲ್ಲ. ಕೆಲವರು ಕರ್ತವ್ಯ ನಿರ್ವಹಣೆಯಲ್ಲಿ ತಮ್ಮ ಪ್ರಾಣ ತ್ಯಾಗವನ್ನೂ ಮಾಡಿದ್ದಾರೆ. ರಾಷ್ಟçವು ಅವರಿಗೆ ಎಂದೆAದಿಗೂ ಋಣ ಯಾಗಿರುತ್ತದೆ. ನಮ್ಮ ಕೊರೊನಾ ವಾರಿಯರ್ಸ್ಗಳಾದ ವೈದ್ಯರು, ದಾದಿಯರು, ಅರೆವೈದ್ಯಕೀಯ ಸಿಬ್ಬಂದಿಯ ಸಮರ್ಪಣೆಯನ್ನು ನಾವೆಲ್ಲ ಸ್ಮರಿಸಬೇಕಿದೆ. ಇತಿಹಾಸದಲ್ಲಿಯೇ ಅತಿದೊಡ್ಡ ವ್ಯಾಕ್ಸಿನೇಷನ್ ಅಭಿಯಾನದ ಹಿಂದೆ ಅದೇ ಸಮರ್ಪಣೆ ಕೆಲಸ ಮಾಡುತ್ತಿದೆ. ಭಾರತವು ದೇಶೀಯವಾಗಿ ಕೋವಿಡ್ ಲಸಿಕೆಗಳನ್ನು ತಯಾರಿಸಿದ್ದು ಮಾತ್ರವಲ್ಲದೆ ಲಸಿಕೆಗಳನ್ನು ನಿರ್ವಹಿಸುವಲ್ಲಿ ವಿಶ್ವ ದಾಖಲೆ ನಿರ್ಮಿಸಿದೆ ಎಂದು ತಿಳಿಸಿದರು.

ದೇಶದ ಅಭಿವೃದ್ಧಿಗೆ ಆರೋಗ್ಯ ಮತ್ತು ಶಿಕ್ಷಣ ಮುಖ್ಯ. ೪೫೦ ಹಾಸಿಗೆಗಳ ಆಸ್ಪತ್ರೆಯ ಉದ್ಘಾಟನೆಯೊಂದಿಗೆ, ಪ್ರಾಯೋಗಿಕ ಅನುಭವ ಮತ್ತು ಬೆಳೆಯುತ್ತಿರುವ ಪ್ರತಿಭೆಗಳಿಗೆ ತರಬೇತಿ ನೀಡಲು ಇದು ಹೆಚ್ಚಿನ ಅವಕಾಶಗಳನ್ನು ಒದಗಿಸುತ್ತದೆ. ಅತ್ಯಾಧುನಿಕ ಸೌಲಭ್ಯ ಇರುವ ಈ ಆಸ್ಪತ್ರೆ ಸಾಕಷ್ಟು ಮೂಲಸೌಕರ್ಯ ಮತ್ತು ಕಾರ್ಡಿಯಾಲಜಿ, ನರವಿಜ್ಞಾನ ಮುಂತಾದ ಸೂಪರ್ ಸ್ಪೆಷಾಲಿಟಿ ವಿಭಾಗಗಳನ್ನು ಹೊಂದಿದೆ. ಈ ಪ್ರದೇಶದ ಜನರಿಗೆ ಉತ್ತಮ ಆರೋಗ್ಯ ಸೇವೆಗಳನ್ನು ಒದಗಿಸುತ್ತದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.

ರಾಜ್ಯಪಾಲ ಥಾವರ್‌ಚಂದ್ ಗೆಹ್ಲೋಟ್ ಮಾತನಾಡಿ, ಚಾಮರಾಜನಗರ ವೈದ್ಯಕೀಯ ಕಾಲೇಜು ಸ್ಥಾಪನೆಯಾಗಿ ೫ ವರ್ಷಗಳಲ್ಲಿ ಉತ್ತಮ ಸೇವೆ ನೀಡುತ್ತಿದೆ. ರೋಗಿಗಳಿಗೆ ಉತ್ತಮ ಮತ್ತು ಉಚಿತ ಆರೋಗ್ಯ ಸೇವೆಯನ್ನು ಈ ಆಸ್ಪತ್ರೆ ನೀಡುತ್ತಿದೆ. ಸುಸಜ್ಜಿತ ಪ್ರಯೋಗಾಲಯ, ಓಪಿಡಿ, ಕಾರ್ಡಿಯಾಲಜಿ, ನ್ಯೂರಾಲಜಿ, ಮತ್ತಿತರ ಚಿಕಿತ್ಸೆ ನೀಡುತ್ತಿರುವುದು ಹೆಮ್ಮೆಯ ವಿಷಯ. ಮೊದಲನೇ ಅಲೆಯಲ್ಲಿ ಬಹುದಿನಗಳವರೆಗೆ ಶೂನ್ಯ ಪ್ರಕರಣಗಳು ವರದಿಯಾಗಿದ್ದ ಜಿಲ್ಲೆ ಚಾಮರಾಜನಗರ. ಈ ಜಿಲ್ಲೆಯಲ್ಲಿ ಬಡವರು, ಬುಡಕಟ್ಟು ಜನರು ಹೆಚ್ಚಿದ್ದಾರೆ. ಈ ಆಸ್ಪತ್ರೆ ಆ ಜನರಿಗೆ ಉತ್ತಮ ಆರೋಗ್ಯ ಸೇವೆ ನೀಡಲಿ ಎಂದು ಆಶಿಸಿದರು.

ವೇದಿಕೆಯಲ್ಲಿ ರಾಷ್ಟçದ ಪ್ರಥಮ ಮಹಿಳೆ ಸವಿತಾ ರಾಮನಾಥ ಕೋವಿಂದ್, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್, ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಉಪಸ್ಥಿತರಿದ್ದರು. ಸಿಮ್ಸ್ ಡೀನ್ ಹಾಗೂ ನಿರ್ದೇಶಕ ಡಾ.ಜಿ.ಎಂ.ಸAಜೀವ್ ಸ್ವಾಗತಿಸಿದರು.

Translate »