ವಿದ್ವಾನ್ ಎ.ವಿ.ಆನಂದರಿಗೆ ರಾಜ್ಯ ಸಂಗೀತ ವಿದ್ವಾನ್ ಪ್ರಶಸ್ತಿ ಪ್ರದಾನ
ಮೈಸೂರು

ವಿದ್ವಾನ್ ಎ.ವಿ.ಆನಂದರಿಗೆ ರಾಜ್ಯ ಸಂಗೀತ ವಿದ್ವಾನ್ ಪ್ರಶಸ್ತಿ ಪ್ರದಾನ

October 8, 2021

ಮೈಸೂರು, ಅ.೭(ಎಸ್‌ಬಿಡಿ)- ದೈವಿಕ, ಪವಿತ್ರ ಸ್ಥಳವಾದ ಮೈಸೂರಿನ ಬಗ್ಗೆ ನನಗೆ ಅಪಾರವಾದ ಗೌರವವಿದೆ ಎಂದು `ರಾಜ್ಯ ಸಂಗೀತ ವಿದ್ವಾನ್ ಪ್ರಶಸ್ತಿ’ ಪುರಸ್ಕೃತ ವಿದ್ವಾನ್ ಎ.ವಿ.ಆನಂದ್ ಅವರು ಅಭಿಪ್ರಾಯಪಟ್ಟರು.

ಅರಮನೆ ಆವರಣದ ದಸರಾ ಸಾಂಸ್ಕೃತಿಕ ವೇದಿಕೆ ಯಲ್ಲಿ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಅವರು, ನಾನು ಮೂಲತಃ ಹಾಸನದವನು, ಈಗ ಬೆಂಗಳೂರಿನಲ್ಲಿ ವಾಸವಾಗಿದ್ದೇನೆ. ಆದರೂ ಮೈಸೂರು ಅಚ್ಚುಮೆಚ್ಚಿನ ಊರು. ಈ ದೈವಿಕ ಪವಿತ್ರ ಕ್ಷೇತ್ರ, ಸಾಂಸ್ಕೃತಿಕ ದೇವಾ ಲಯದ ಬಗ್ಗೆ ಅಪಾರವಾದ ಗೌರವವಿದೆ. ಜಯಚಾಮ ರಾಜ ಒಡೆಯರ್ ಅವರು ನನ್ನ ಕಛೇರಿ ಕೇಳಿ, ಮೆಚ್ಚುಗೆ ವ್ಯಕ್ತಪಡಿಸಿದ್ದರು. ಅವರಿಗೆ ಸಾಂಸ್ಕೃತಿಕ ಚಟುವಟಿಕೆಯ ಜ್ಞಾನವಿತ್ತು. ಮಹಾನ್ ವಿದ್ವಾಂಸರಾಗಿದ್ದ ಅವರು ಕರ್ನಾ ಟಕ, ಹಿಂದೂಸ್ತಾನಿ ಹಾಗೂ ಪಾಶ್ಚಾತ್ಯ ಸಂಗೀತವನ್ನೂ ಅಭ್ಯಾಸ ಮಾಡಿ, ಸಂಗೀತಕ್ಕೆ ಪರಿಮಿತಿ ಇಲ್ಲ ಎಂದು ಸಾರಿ ಹೇಳಿದ್ದರು. ಕನ್ನಡ, ಸಂಸ್ಕೃತ, ಇಂಗ್ಲಿಷ್ ಭಾಷೆಗಳಲ್ಲಿ ಪ್ರಬುದ್ಧತೆ ಗಳಿಸಿದ್ದರು. ಸ್ವತಃ ಅನೇಕ ಕೃತಿಗಳನ್ನು ರಚಿಸಿದ್ದರು ಎಂದು ಸ್ಮರಿಸಿಕೊಂಡರು.

ಚೌಡಯ್ಯರ ಒಡನಾಟ: ಮೈಸೂರು ಸಂಸ್ಥಾನದಲ್ಲಿ ಟಿ.ಚೌಡಯ್ಯ(ಪಿಟೀಲು ಚೌಡಯ್ಯ) ಅವರು ಆಸ್ಥಾನ್ ವಿದ್ವಾನ್ ಆಗಿದ್ದರು. ಮಹಾನ್ ಸಾಧಕರಾದ ಅವ ರೊಂದಿಗೆ ಕಛೇರಿ ನಡೆಸುವ ಸೌಭಾಗ್ಯ ನನಗೆ ೧೧ನೇ ವಯಸ್ಸಿನಲ್ಲೇ ಸಿಕ್ಕಿತ್ತು. ಅವರು ಭಾರತ ಮಾತ್ರವಲ್ಲ ಜಗತ್ತಿನಲ್ಲೇ ಪ್ರಸಿದ್ಧರಾಗಿದ್ದರು. ಅವರೊಂದಿಗೆ ನೂರಾರು ಕಛೇರಿಗಳಲ್ಲಿ ಭಾಗವಹಿಸಿದ್ದೇನೆ. ೧೯೭೫ ರಿಂದ ೧೯೯೫ರವರೆಗೆ ಮೈಸೂರಿನಲ್ಲಿ ಸಾಕಷ್ಟು ಕಾರ್ಯ ಕ್ರಮ ನೀಡಿದ್ದೇನೆ. ಲಯ ಕ್ಷೇತ್ರದ ನನ್ನ ಅಲ್ಪ ಸಾಧನೆ ಯನ್ನು ಗುರುತಿಸಿ, ಪುರಸ್ಕರಿಸಿರುವ ಈ ಕ್ಷಣವನ್ನು ಎಂದಿಗೂ ಮರೆಯಲಾಗದು. ಈ ವೈಭವಯುತ ಪಾರಂ ಪರಿಕ ಕಾರ್ಯಕ್ರಮದಲ್ಲಿ ಈ ಗೌರವ ಸಿಕ್ಕಿರುವುದು ತಾಯಿ ಚಾಮುಂಡೇಶ್ವರಿ ಕೃಪೆ, ಆಶೀರ್ವಾದದಿಂದ ಎಂದು ಭಾವಿಸಿದ್ದೇನೆ. ಈ ಪ್ರಶಸ್ತಿಗೆ ನನ್ನ ಗುರುಗಳು, ತಂದೆ-ತಾಯಿ, ಕುಟುಂಬದವರು ಕಾರಣ Ãಭೂತರು. ಪ್ರಶಸ್ತಿ ನೀಡಿ ಗೌರವಿಸಿದ ಸರ್ಕಾರ ಹಾಗೂ ಎಲ್ಲ ರಿಗೂ ಕೃತಜ್ಞತೆ ತಿಳಿಸುತ್ತೇನೆ ಎಂದರು. ಮೃದಂಗ ವಾದಕ ಎ.ವೆಂಕೋಬಚಾರ್ಯ ಅವರ ಪುತ್ರರಾಗಿ ೧೯೩೬ ಏಪ್ರಿಲ್ ೧೬ರಂದು ಹಾಸನದಲ್ಲಿ ಜನಿಸಿದ ಎ.ವಿ.ಆನಂದ್ ಅವರು, ಬಾಲ್ಯದಲ್ಲಿಯೇ ಲಯದ ಬಗ್ಗೆ ವಿಶೇಷ ಆಸಕ್ತಿ ಹೊಂದಿದ್ದರು. ಮರ‍್ನಾಲ್ಕು ತಲೆಮಾರಿನ ವಿದ್ವಾನ್‌ಗಳಿಗೆ ಮೃದಂಗ ಸಹಕಾರ ನೀಡಿದ್ದಾರೆ. ಆಕಾಶವಾಣ ಯ `ಎ’ ಗ್ರೇಡ್ ಕಲಾವಿದರಾಗಿದ್ದ ಇವರಿಗೆ ಕರ್ನಾಟಕ ಕಲಾಶ್ರೀ, ಲಯಭೂಷಣ, ಲಯ ಕಲಾ ನಿಪುಣ ಹೀಗೆ ಹತ್ತಾರು ಪ್ರಶಸ್ತಿ ಗಳು ಸಂದಿವೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಚಾಮರಾಜನಗರ ದಲ್ಲಿ ರಾಷ್ಟçಪತಿ ರಾಮನಾಥ ಕೋವಿಂದ್ ಅವರ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ರಿಂದ ಮೈಸೂರಿನಲ್ಲಿ ನಡೆದ ದಸರಾ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಗೈರು ಹಾಜರಾಗಿದ್ದರು.

Translate »