ಸಾಂಪ್ರದಾಯಿಕ ದಸರಾ ಆರಂಭ
ಮೈಸೂರು

ಸಾಂಪ್ರದಾಯಿಕ ದಸರಾ ಆರಂಭ

October 8, 2021

ಮೈಸೂರು, ಅ.೭(ಆರ್‌ಕೆ)- ಈ ಸಾಲಿನ ಮೈಸೂರು ದಸರಾ ಮಹೋತ್ಸವವನ್ನು ಹಿರಿಯ ರಾಜಕೀಯ ಮುತ್ಸದ್ದಿ, ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಇಂದು ಉದ್ಘಾಟಿಸಿದರು. ಮೈಸೂರಿನ ಚಾಮುಂಡಿಬೆಟ್ಟದಲ್ಲಿ ನಾಡಿನ ಅಧಿದೇವತೆ ತಾಯಿ ಚಾಮುಂಡೇಶ್ವರಿ ದೇವಿಯ ಉತ್ಸವ ಮೂರ್ತಿಗೆ ಪುಷ್ಪಾರ್ಚನೆ ಮಾಡಿ, ಅಗ್ರಪೂಜೆ ನೆರವೇರಿಸಿ ಬೆಳಗ್ಗೆ ೮.೨೫ ಗಂಟೆ ವೇಳೆಗೆ ಸಲ್ಲುವ ಶುಭ ತುಲಾ ಲಗ್ನದಲ್ಲಿ ೨೦೨೧ರ ನವರಾತ್ರಿ ಉತ್ಸವಕ್ಕೆ ವಿಧ್ಯುಕ್ತ ಚಾಲನೆ ನೀಡಿದರು.

ದಸರಾ ಉದ್ಘಾಟನೆಗೆ ಆಗಮಿಸಿದ ಕೃಷ್ಣರಿಗೆ ಬೆಟ್ಟದಲ್ಲಿ ಪೂರ್ಣಕುಂಭ ಸ್ವಾಗತ ನೀಡಿ, ಗೌರವ ಪೂರ್ವಕ ವಾಗಿ ಬರಮಾಡಿಕೊಂಡ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ. ಸೋಮಶೇಖರ್, ಮೊದಲು ಶ್ರೀ ಚಾಮುಂಡೇಶ್ವರಿ ದರ್ಶನ ಮಾಡಿಸಿ, ನಂತರ ವೇದಿಕೆಗೆ ಕರೆತಂದರು.
ಚಾಮುAಡೇಶ್ವರಿ ಕ್ಷೇತ್ರದ ಶಾಸಕ ಜಿ.ಟಿ.ದೇವೇ ಗೌಡ ಅವರು ಅಧ್ಯಕ್ಷತೆ ವಹಿಸಿದ್ದ ಸಮಾರಂಭದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಪತ್ನಿ ಶ್ರೀಮತಿ ಚೆನ್ನಮ್ಮ ಬೊಮ್ಮಾಯಿ, ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್, ಮೇಯರ್ ಸುನಂದಾ ಪಾಲನೇತ್ರ, ಸಚಿವರಾದ ಆರ್.ಅಶೋಕ್, ವಿ.ಸುನಿಲ್ ಕುಮಾರ್, ಶಶಿಕಲಾ ಜೊಲ್ಲೆ, ಶಿವರಾಂ ಹೆಬ್ಬಾರ್, ನಾರಾಯಣಗೌಡ, ಬಿ.ಸಿ.ಪಾಟೀಲ್, ಭೈರತಿ ಬಸವರಾಜ್, ಡಾ.ಕೆ.ಸುಧಾಕರ್ ಉಪಸ್ಥಿತರಿದ್ದರು.

ಸಂಸದ ಪ್ರತಾಪ್ ಸಿಂಹ, ಶಾಸಕರಾದ ಎಸ್.ಎ. ರಾಮದಾಸ್, ಎಲ್.ನಾಗೇಂದ್ರ, ತನ್ವೀರ್‌ಸೇಠ್, ಬಿ. ಹರ್ಷವರ್ಧನ್, ಕೆ.ಮಹದೇವು, ಸಿ.ಎಸ್. ನಿರಂ ಜನ್‌ಕುಮಾರ್, ಅರವಿಂದ ಬೆಲ್ಲದ್, ವಿಧಾನಪರಿಷತ್ ಸದಸ್ಯರಾದ ಎ.ಹೆಚ್.ವಿಶ್ವನಾಥ್, ಕೆ.ಟಿ.ಶ್ರೀಕಂಠೇ ಗೌಡ, ಮುಡಾ ಅಧ್ಯಕ್ಷ ಹೆಚ್.ವಿ.ರಾಜೀವ್, ವಿವಿಧ ನಿಗಮ ಮಂಡಳಿ ಅಧ್ಯಕ್ಷರಾದ ಕೌಟಿಲ್ಯ ರಘು, ಅಪ್ಪಣ್ಣ, ಎನ್.ವಿ.ಫಣ Ãಶ್, ಕಾಪು ಸಿದ್ದಲಿಂಗಸ್ವಾಮಿ, ಹೇಮಂತ್‌ಕುಮಾರ್‌ಗೌಡ,

ಎಲ್.ಆರ್.ಮಹದೇವಸ್ವಾಮಿ, ಎಂ.ಶಿವಣ್ಣ ಸೇರಿದಂತೆ ಹಲವರು ಸಮಾರಂಭದಲ್ಲಿ ಹಾಜರಿದ್ದರು. ನವರಾತ್ರಿ ಉತ್ಸವ ಉದ್ಘಾಟಿಸಿದ ಎಸ್.ಎಂ.ಕೃಷ್ಣ ಅವರನ್ನು ಸರ್ಕಾರದ ವತಿಯಿಂದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ನೆನಪಿನ ಕಾಣ ಕೆ ನೀಡಿ ಆತ್ಮೀಯವಾಗಿ ಅಭಿನಂದಿಸಿದರು. ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಮುಖ್ಯಮಂತ್ರಿಗಳು ಹಾಗೂ ಅವರ ಪತ್ನಿ ಶ್ರೀಮತಿ ಚೆನ್ನಮ್ಮ ಅವರನ್ನು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಅವರು ಸನ್ಮಾನಿಸಿದರು.
ಆ ಮೂಲಕ ೯ ದಿನಗಳ ಕಾಲ ನಡೆಯಲಿರುವ ದಸರಾ ಉತ್ಸವಕ್ಕೆ ಚಾಲನೆ ದೊರೆತಿದ್ದು, ಚಾಮುಂಡೇಶ್ವರಿ ದೇವಿಗೆ ಇಂದು ವಿಶೇಷ ಅಲಂಕಾರ ಮಾಡಲಾಗಿತ್ತು. ದೇವಾಲಯ ವನ್ನು ತಳಿರು ತೋರಣಗಳಿಂದ ಅಲಂಕರಿಸಲಾಗಿತ್ತು. ಆವರಣದಲ್ಲಿ ಬಣ್ಣ ಬಣ್ಣದ ರಂಗೋಲಿ ಹಾಕಿದ್ದು, ಹಬ್ಬದ ವಾತಾವರಣ ಸೃಷ್ಟಿಯಾಗಿತ್ತು. ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್, ಅಡಿಷನಲ್ ಡಿಸಿ ಬಿ.ಎಸ್.ಮಂಜುನಾಥ್, ನಗರ ಪೊಲೀಸ್ ಆಯುಕ್ತ ಡಾ.ಚಂದ್ರಗುಪ್ತ, ಮುಡಾ ಆಯುಕ್ತ ಡಾ.ಡಿ.ಬಿ.ನಟೇಶ್, ಪಾಲಿಕೆ ಆಯುಕ್ತ ಲಕ್ಷಿö್ಮÃಕಾಂತ ರೆಡ್ಡಿ, ತಹಸೀಲ್ದಾರ್ ಕೆ.ಆರ್.ರಕ್ಷಿತ್ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಸಮಾರಂಭ ಸುಗಮವಾಗಿ ನೆರವೇರಲು ಶ್ರಮಿಸಿದರು. ಕೋವಿಡ್-೧೯ ಹಿನ್ನೆಲೆಯಲ್ಲಿ ಸಾರ್ವಜನಿಕರು, ಭಕ್ತರಿಗೆ ಚಾಮುಂಡಿಬೆಟ್ಟಕ್ಕೆ ಪ್ರವೇಶ ನಿಷೇಧಿಸಲಾಗಿತ್ತಾದರೂ, ಸುಮಾರು ೪೦೦ಕ್ಕೂ ಹೆಚ್ಚು ಆಹ್ವಾನಿತರು ದಸರಾ ಉದ್ಘಾಟನೆ ವೇಳೆ ಭಾಗವಹಿಸಿದ್ದರು.

 

ದಸರಾವನ್ನು ಪ್ರವಾಸೋದ್ಯಮ ಪ್ರಚಾರಕ್ಕೆ ಬಳಸಿಕೊಳ್ಳಿ: ಕೃಷ್ಣ
ಮೈಸೂರು, ಅ.೭(ಆರ್‌ಕೆ)- ಮೈಸೂರಿನ ಐತಿಹಾಸಿಕ ದಸರಾ ಮಹೋ ತ್ಸವವನ್ನು ರಾಜ್ಯದ ಪ್ರವಾಸೋದ್ಯಮ ಅಭಿವೃದ್ಧಿ ಪ್ರಚಾರಕ್ಕಾಗಿ ಬಳಸಿಕೊಳ್ಳಿ ಎಂದು ನಾಡಿನ ಹಿರಿಯ ರಾಜಕೀಯ ಮುತ್ಸದ್ದಿ ಹಾಗೂ ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಅವರು ಸಲಹೆ ನೀಡಿದ್ದಾರೆ.

ಚಾಮುಂಡಿಬೆಟ್ಟದಲ್ಲಿ ನವರಾತ್ರಿ ಉತ್ಸವಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ದೇಶ ವಿದೇಶಗಳಿಂದ ದಸರಾ ನೋಡಲು ಪ್ರವಾಸಿಗರು ಬರುತ್ತಾರೆ. ನವರಾತ್ರಿ ಉತ್ಸವವನ್ನೇ ಗುರಿಯಾಗಿಸಿಕೊಂಡು ಮೈಸೂರಲ್ಲಿ ಪ್ಯಾಕೇಜ್ ಟೂರಿಸಂ ಅಭಿವೃದ್ಧಿಪಡಿಸಿ ಹೆಚ್ಚು ಪ್ರಚಾರ ನೀಡಿದಲ್ಲಿ ವಿಶ್ವದಾದ್ಯಂತ ಪ್ರವಾಸಿ ಗರನ್ನು ಆಕರ್ಷಿಸಬಹುದೆಂದು ಅಭಿಪ್ರಾಯಪಟ್ಟರು.

ಪ್ರತಿಯೊಂದು ಧಾರ್ಮಿಕ ಆಚರಣೆಯ ಹಿಂದೆ ಮಹತ್ವದ ಸಂದೇಶವಿರುತ್ತದೆ. ಅದೇ ರೀತಿ ಇಂದಿನ ಮೈಸೂರು ದಸರಾ ಉತ್ಸವ ಕೇವಲ ಧಾರ್ಮಿಕ ಆಚರಣೆ ಎನ್ನುವಂತಿಲ್ಲ. ಇದಕ್ಕೊಂದು ಸಾಂಸ್ಕೃತಿಕ ಮಹತ್ವವಿದೆ. ದಸರಾವನ್ನು ಪ್ರವಾಸೋದ್ಯಮಕ್ಕೆ ಬಳಸಿಕೊಳ್ಳುವ ಅವಕಾಶ ಯಥೇಚ್ಛವಾಗಿರುವುದರಿಂದ ನವರಾತ್ರಿ ಉತ್ಸವ ನೆಪ ಮಾಡಿಕೊಂಡು ನಮ್ಮ ಉತ್ಪನ್ನಗಳಿಗೆ ಒಳ್ಳೆಯ ಮಾರುಕಟ್ಟೆ ರೂಪಿಸಬಹುದು. ಅದರಲ್ಲೂ ಕುಶಲಕರ್ಮಿಗಳಿಗೆ ಇದೊಂದು ಸದವಕಾಶ. ಇಡೀ ಕರ್ನಾಟಕ ರಾಜ್ಯದ ಕುಶಲಕರ್ಮಿಗಳನ್ನು ಗಮನದಲ್ಲಿಟ್ಟುಕೊಂಡು ಈ ಯೋಜನೆ ರೂಪಿಸಬಹುದಾಗಿದೆ ಎಂದ ಅವರು, ಒಮ್ಮೆ ಪ್ರವಾಸಿಗರು ದಸರಾ ನೋಡಲು ರಾಜ್ಯಕ್ಕೆ ಬಂದರೆ ಅವರು ಬೇಲೂರು, ಹಳೇಬೀಡು, ಬಾದಾಮಿ, ಐಹೊಳೆ, ಪಟ್ಟದಕಲ್ಲು, ಹಂಪಿ ಹಾಗೂ ಬಿಜಾಪುರಗಳನ್ನು ನೋಡಿ ಹೋಗುವಂತೆ ಮಾಡಬಹುದು ಎಂದರು.

ಅನೇಕ ಅಭಿವೃದ್ಧಿ ರಾಷ್ಟçಗಳು ತಮ್ಮ ಆರ್ಥಿಕ ಸಂಪನ್ಮೂಲ ಸಂಗ್ರಹಕ್ಕೆ ಪ್ರವಾಸೋದ್ಯಮ ವನ್ನೇ ಪ್ರಮುಖವಾಗಿಸಿಕೊಂಡಿವೆ. ದಸರಾ ಹಬ್ಬವನ್ನು ಜನರು ಮೊದಲಿನಿಂದಲೂ ಸಡಗರದಿಂದಲೇ ಆಚರಿಸುತ್ತಿದ್ದಾರೆ. ಆದ್ದರಿಂದ ನವರಾತ್ರಿ ಉತ್ಸವವನ್ನು ಗುರಿಯಾಗಿಸಿ ಕೊಂಡು ಇಲ್ಲಿ ಟೂರ್ ಪ್ಯಾಕೇಜ್ ರೂಪಿಸಿದರೆ ವಿಶ್ವದಾದ್ಯಂತ ಪ್ರವಾಸಿಗರನ್ನು ಆಕರ್ಷಿಸಬಹು ದಾಗಿದೆ. ಈ ನಿಟ್ಟಿನಲ್ಲಿ ಸರ್ಕಾರ ರೂಪುರೇಷೆಗಳನ್ನು ತಯಾರಿಸಿ ಮುಂದಿನ ದಿನಗಳಲ್ಲಿ ಅನುಷ್ಠಾನಕ್ಕೆ ತಂದರೆ, ರಾಜ್ಯದ ಹಿತದೃಷ್ಟಿಯಿಂದ ಒಳಿತಾಗಲಿದೆ ಎಂದರು.
ನಾನು ವಿದ್ಯಾರ್ಥಿ ದೆಸೆಯಿಂದಲೂ ಮೈಸೂರು ದಸರಾ ನೋಡುತ್ತಾ ಬಂದಿದ್ದೇನೆ. ಸ್ವಾತಂತ್ರö್ಯ ಪೂರ್ವದಲ್ಲಿ ದಿವಾನ್ ಸರ್.ಎಂ. ವಿಶ್ವೇಶ್ವರಯ್ಯ ಹಾಗೂ ಸರ್. ಮಿರ್ಜಾ ಇಸ್ಮಾಯಿಲ್ ಕಾಲದಿಂದಲೂ ಈ ವೈಭವವನ್ನು ನೋಡಿದ್ದೇನೆ. ಮೈಸೂರು, ಮಂಡ್ಯ, ಚಾಮರಾಜ ನಗರ ಮೊದಲಾದ ಕಡೆ ದಸರಾ ಹಬ್ಬ ಎಂದರೆ ತಮ್ಮ ಮನೆಯಲ್ಲಿ ನಡೆಯುವ ಹಬ್ಬ ಎಂಬ ಸಂಭ್ರಮವಿರುತ್ತಿತ್ತು. ಯಾವ ಜನ್ಮದ ಪುಣ್ಯವೋ ಗೊತ್ತಿಲ್ಲ. ದಸರಾ ಉದ್ಘಾಟನೆ ಮಾಡುವ ಅವಕಾಶ ಈ ಬಾರಿ ನನಗೆ ಸಿಕ್ಕಿದೆ. ಮುಖ್ಯಮಂತ್ರಿಗಳು ಹಾಗೂ ಅವರ ತಂದೆ ಜೊತೆ ಕೆಲಸ ಮಾಡಿದ ಸೌಭಾಗ್ಯ ನನ್ನದಾಗಿದೆ. ನನಗೆ ಅತ್ಯಂತ ಗೌರವಯುತ ವಾಗಿ ದಸರಾ ಉದ್ಘಾಟಿಸುವ ಅವಕಾಶ ಕೊಟ್ಟಿದ್ದಕ್ಕಾಗಿ ಧನ್ಯವಾದಗಳನ್ನು ಸಲ್ಲಿಸುತ್ತೇನೆ.

ನನ್ನ ೧೨ನೇ ವರ್ಷದಲ್ಲೇ ನಮ್ಮ ತಂದೆ ಓದಲು ನನ್ನನ್ನು ಮೈಸೂರಿಗೆ ಕಳುಹಿಸಿ ಕೊಟ್ಟರು. ಒಂಟಿಕೊಪ್ಪಲು ಸರ್ಕಾರಿ ಶಾಲೆ, ಮಹಾಜನ, ಯುವರಾಜ, ಮಹಾರಾಜ ಕಾಲೇಜಿನಲ್ಲೇ ಓದಿ ಮೈಸೂರಿನ ಜೊತೆಯಲ್ಲೇ ಬೆಳೆದೆ. ಪ್ರತಿದಿನ ಚಾಮುಂಡಿಬೆಟ್ಟ ನೋಡಿ ಕೈಮುಗಿಯುತ್ತಿದ್ದೆ. ಆಗ ನಮ್ಮ ತಂದೆ ಪ್ರಜಾಪ್ರತಿನಿಧಿ ಸಭೆ ಸದಸ್ಯರಾಗಿದ್ದರು. ಜಗನ್ಮೋಹನ ಅರಮನೆಯಲ್ಲಿ ೧೦ ದಿನಗಳ ಕಾಲ ನಡೆಯುತ್ತಿದ್ದ ಪ್ರಜಾಪ್ರತಿನಿಧಿ ಸಭೆಯ ವೇಳೆ ಸದಸ್ಯರೆಲ್ಲಾ ಪಕ್ಕದ ಬನುಮಯ್ಯ ಕಾಲೇಜಿನಲ್ಲಿ ವಾಸ್ತವ್ಯ ಹೂಡುತ್ತಿದ್ದರು. ಸಂಗೀತ ಕಲಾವಿದರಿಗೂ ಮೈಸೂರಿನ ದಸರಾ ಸಂದರ್ಭದಲ್ಲಿ ಪಾಲ್ಗೊಳ್ಳಲು ಆಸಕ್ತಿ ಇರುತ್ತಿತ್ತು. ಅದಕ್ಕೆ ಮುಖ್ಯಕಾರಣ ಆ ಕಾಲದ ಜನರ ಅಭಿರುಚಿ, ಕಲಾವಿದರಿಗೆ ನೀಡುತ್ತಿದ್ದ ಗೌರವ. ಆ ಪರಂಪರೆಯನ್ನು ನಾಲ್ವಡಿ ಕೃಷ್ಣರಾಜ ಒಡೆಯರ್ ಹಾಗೂ ಜಯಚಾಮರಾಜೇಂದ್ರ ಒಡೆಯರ್ ಅವರು ಯಶಸ್ವಿಯಾಗಿ ಮುಂದುವರೆಸಿಕೊAಡು ಬಂದಿದ್ದರು ಎಂದು ಎಸ್.ಎಂ. ಕೃಷ್ಣ ತಮ್ಮ ಬಾಲ್ಯದ ದಿನಗಳನ್ನು ನೆನೆದರು.

ದಸರಾ ಉತ್ಸವಕ್ಕೆ ೮೦೦ ವರ್ಷಗಳ ಇತಿಹಾಸವಿದೆ. ವಿಜಯನಗರ ಅರಸರು ದಸರಾವನ್ನು ತಮ್ಮ ಶಕ್ತಿ ಪ್ರದರ್ಶನ, ವಿದೇಶಿಯರ ಭೇಟಿ ಹಾಗೂ ದಿಗ್ವಿಜಯಕ್ಕೆ ಮುಹೂರ್ತ ನಿಗದಿ ಮಾಡಲು ಉಪಯೋಗಿಸಿಕೊಳ್ಳುತ್ತಿದ್ದರು. ವಿಜಯನಗರದ ಶ್ರೀಕೃಷ್ಣ ದೇವರಾಯನ ಕಾಲದಲ್ಲಿ ಹಂಪಿಯಲ್ಲಿ ದಸರಾ ಆಚರಣೆಗಾಗಿ ಮಹಾನವಮಿ ದಿಬ್ಬವನ್ನು ನಿರ್ಮಿಸ ಲಾಗುತ್ತಿತ್ತು. ಅಲ್ಲಿ ನವರಾತ್ರಿಯ ದಿನಗಳಲ್ಲಿ ಕ್ರೀಡೆ, ಸಾಹಸ ಪ್ರದರ್ಶನ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗುತ್ತಿದ್ದವು. ಈ ಪರಂಪರೆಯನ್ನು ಮುಂದುವರೆಸಿ ಕೊಂಡು ಬಂದವರು ಅವರ ಉತ್ತರಾಧಿಕಾರಿಗಳಾಗಿದ್ದ ಮೈಸೂರು ಒಡೆಯರ್ ಸಂತತಿ ಯವರು. ೧೯೧೦ರಲ್ಲಿ ರಾಜ ಒಡೆಯರ್ ಅವರು ಶ್ರೀರಂಗಪಟ್ಟಣದಲ್ಲಿ ದಸರಾವನ್ನು ಪ್ರಾರಂಭ ಮಾಡಿದರು. ಈ ಅಂಬಾರಿಯನ್ನೂ ವಿಜಯನಗರ ಸಂಸ್ಥಾನದಿAದಲೇ ಪಡೆದಿದ್ದರು. ಅದು ಮಹಾರಾಷ್ಟçದ ದೇವಗಿರಿಯಿಂದ ವಿಜಯನಗರಕ್ಕೆ ಹಸ್ತಾಂತರ ವಾಗಿತ್ತು. ಈ ಅಂಬಾರಿಗೆ ೮ ಶತಮಾನಗಳ ಇತಿಹಾಸವಿದೆ. ೭೫೦ ಕೆಜಿ ಸ್ವರ್ಣ ಅಂಬಾರಿಯಲ್ಲಿ ವಿಜಯದಶಮಿಯಂದು ಚಾಮುಂಡೇಶ್ವರಿಯ ಮೆರವಣ ಗೆ ಹೋಗು ತ್ತಿತ್ತು ಎಂದು ನಾಡಹಬ್ಬದ ಇತಿಹಾಸವನ್ನು ಅವರು ಇದೇ ವೇಳೆ ಸ್ಮರಿಸಿದರು.

ದಸರಾಗೆ ಹೊಸ ಸ್ವರೂಪ ಕೊಟ್ಟ ಕೀರ್ತಿ ಮೈಸೂರಿನ ದಿವಾನರಿಗೆ ಸಲ್ಲುತ್ತದೆ. ದಿವಾನ್ ರಂಗಾಚಾರ್ಲು ಅವರಿಂದ ಹಿಡಿದು ಸರ್ ಪುಟ್ಟಣ್ಣ ಚೆಟ್ಟಿಯಾರ್ ತನಕ ಎಲ್ಲಾ ದಿವಾನರಿಗೆ ಮೈಸೂರು ಸಂಸ್ಥಾನದ ಪ್ರಗತಿಯನ್ನು ರಾಜ್ಯದ ಜನತೆಯ ಗಮನಕ್ಕೆ ತರಬೇಕೆಂಬ ಹಿರಿದಾಸೆಯಿತ್ತು. ದಸರಾ ಸಂದರ್ಭದಲ್ಲಿ ನಡೆಯುತ್ತಿದ್ದ ಪ್ರಜಾಪ್ರತಿನಿಧಿ ಸಭೆ ಅಧಿವೇಶನ ದಲ್ಲಿ ದಿವಾನರು ಸದಸ್ಯರ ಸಮಸ್ಯೆಗಳಿಗೆ ಸ್ಪಂದಿಸುತ್ತಿದ್ದರು. ಮಹಾರಾಣ ಸನ್ನಿಧಾನದಲ್ಲೂ ಪ್ರಜೆಗಳ ವಿಚಾರವಾಗಿ ಚರ್ಚೆಯಾಗುತ್ತಿತ್ತು ಎಂದ ಅವರು, ತಮ್ಮ ತಂದೆ ಎಸ್.ಸಿ. ಮಲ್ಲಯ್ಯ ಅವರು ನಮ್ಮೂರಿನಲ್ಲಿ ಪರಿಶಿಷ್ಟ ಜಾತಿಗೆ ನಿರ್ಮಿಸಿದ್ದ ವಸತಿ ನಿಲಯಕ್ಕೆ ಮಹಾತ್ಮ ಗಾಂಧೀಜಿ ಅವರು ಭೇಟಿ ನೀಡಿದ್ದರು. ಆ ಸಂದರ್ಭದಲ್ಲಿ ಪರಿಶಿಷ್ಟ ಜನಾಂಗದವರಿಗೆ ನೀಡಿದ್ದ ಸವಲತ್ತುಗಳ ಬಗ್ಗೆ ಮಹಾತ್ಮರು ಶ್ಲಾಘನೆ ಮಾಡಿದ್ದರು ಎಂಬುದನ್ನು ಸ್ಮರಿಸಿಕೊಂಡರು.

 

ಕಷ್ಟ ಕೊಡುವುದಾದರೆ ನನಗೇ ಕೊಡು ತಾಯೇ; ನಾಡಿನ ಜನರ ಕೊರೊನಾ ಸಂಕಷ್ಟದಿದ ಪಾರು ಮಾಡು ಚಾಮುಂಡೇಶ್ವರಿಯಲ್ಲಿ ಸಿಎಂ ಬೊಮ್ಮಾಯಿ ಪ್ರಾರ್ಥನೆ
ಮೈಸೂರು,ಅ.೭(ಆರ್‌ಕೆ)-ಕಷ್ಟ ಕೊಡುವುದಾದರೆ ನನಗೇ ಕೊಡು, ಆದರೆ ನಾಡಿನ ಜನರನ್ನು ಕೋವಿಡ್ ಮಹಾಮಾರಿ ಸಂಕಷ್ಟದಿAದ ಪಾರು ಮಾಡು ತಾಯೇ ಎಂದು ತಾವು ಚಾಮುಂಡೇಶ್ವರಿಯಲ್ಲಿ ಪ್ರಾರ್ಥಿಸಿರುವುದಾಗಿ ಮುಖ್ಯ ಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

ಚಾಮುಂಡಿಬೆಟ್ಟದಲ್ಲಿ ದಸರಾ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಅವರು, ನಾಡದೇವಿಯ ಸೇವೆ ಮಾಡುವ ಅವಕಾಶ ಸಿಕ್ಕಿರುವುದು ನನ್ನ ಪೂರ್ವಜನ್ಮದ ಪುಣ್ಯ. ಕನ್ನಡಿಗರ ಬಾಳನ್ನು ಹಸನು ಮಾಡು ಎಂದು ತಾಯಿ ಚಾಮುಂಡೇಶ್ವರಿ ದೇವಿಯಲ್ಲಿ ಕೇಳಿಕೊಂಡಿ ದ್ದೇನೆ. ಕೋವಿಡ್‌ನಿಂದಾಗಿ ಜನರು ಸಂಕಷ್ಟದಲ್ಲಿದ್ದಾರೆ. ಅವರನ್ನು ಈ ಸಂಕೋಲೆಯಿAದ ಪಾರು ಮಾಡು, ಕಷ್ಟಕೊಡುವುದಾದರೆ ನನಗೇ ಕೊಡು ಎಂದು ಪ್ರಾರ್ಥಿಸಿದ್ದೇನೆ ಎಂದರು.

ಜನರ ಕ್ಷೇಮಾಭಿವೃದ್ಧಿಗೆ ಕೆಲಸ ಮಾಡುವ ಅವಕಾಶ ನೀಡಿರುವ ನಾಡಿನ ಜನತೆಗೆ ನಾನು ಕೋಟಿ ನಮನ ಸಲ್ಲಿಸುತ್ತೇನೆ. ಮೈಸೂರು ದಸರಾ ಮಹೋತ್ಸವ ಇತಿಹಾಸ ಪ್ರಸಿದ್ಧಿ. ಕೊರೊನಾ ಸೋಂಕಿನಿAದಾಗಿ ೨ ವರ್ಷದಿಂದ ಸರಳ ರೀತಿಯಲ್ಲಿ ಆಚರಿಸುತ್ತಿರುವ ನಾಡಹಬ್ಬವನ್ನು ಮುಂದಿನ ವರ್ಷ ವೈಭವೋಪಿತವಾಗಿ ಆಚರಿಸಲು ಅವಕಾಶ ಸಿಗಲಿ ಎಂದು ಪ್ರಾರ್ಥಿಸಿದ್ದೇನೆ. ನಾಡಹಬ್ಬವು ಜನರಲ್ಲಿ ಉತ್ಸಾಹ ತುಂಬುವAತಾಗಬೇಕು. ಮಳೆ, ಬೆಳೆ, ಸುಖ, ಸಮೃದ್ಧಿ ನೆಲೆಗೊಳ್ಳುವಂತಾಗಬೇಕು. ನಾಡು ಸಮೃದ್ಧಿಯಾದರೆ ಜನರ ಬದುಕು ಸಾರ್ಥಕವಾಗುತ್ತದೆ. ಈ ಬಾರಿ ದಸರಾ ಮಹೋತ್ಸವವನ್ನು ಸರಳವಾಗಿ ಆಚರಿಸಬೇಕು. ೫ ಕೋಟಿ ಅನುದಾನ ಕೊಡಿ ಎಂದು ಕೇಳಿದಾಗ ನಾನು ಉದಾರವಾಗಿ ೬ ಕೋಟಿ ರೂ.ಗಳನ್ನು ನೀಡಿದ್ದೇನೆ. ಮುಂದಿನ ವರ್ಷ ಇನ್ನೂ ಅದ್ಧೂರಿಯಾಗಿ ಮಾಡುವಂತಹ ಅವಕಾಶ ಸಿಗಲಿ ಎಂದು ನಾನು ದೇವರಲ್ಲಿ ಪ್ರಾರ್ಥಿಸಿದ್ದೇನೆ.

ಜಲಸಂಪನ್ಮೂಲ ಸಚಿವನಾಗಿದ್ದಾಗ ಕೆಆರ್‌ಎಸ್‌ಗೆ ಬಂದಿದ್ದೆ. ಗೇಟ್‌ನಲ್ಲಿ ಬಿರುಕು ಕಾಣ ಸಿ ಕೊಂಡು ನೀರು ಸೋರುತ್ತಿತ್ತು. ೪೦ ವರ್ಷ ಹಳೆಯದಾದ ಗೇಟ್‌ಗಳಿಂದ ಹೊರಬರುತ್ತಿದ್ದ ನೀರನ್ನು ತಡೆಯಲು ಗೋಣ ಚೀಲ ತೇಪೆ ಹಾಕಲಾಗಿತ್ತು. ತಕ್ಷಣ ನಾನು ತುಂಗಭದ್ರ ಸ್ಟೀಲ್ ಕಂಪನಿಯ ಇಂಜಿನಿಯರ್‌ಗಳನ್ನು ಕರೆತಂದು ೧೬ ಗೇಟ್‌ಗಳನ್ನು ಹೊಸದಾಗಿ ಹಾಕಿಸಿದೆ. ವಿಶ್ವೇಶ್ವರಯ್ಯ ನಾಲೆ ಆಧುನೀಕರಣ ಕಾಮಗಾರಿ ಪ್ರಗತಿಯಲ್ಲಿದೆ ಎಂದರು.

Translate »