ಮಿಲೇನಿಯಂ ಸರ್ಕಲ್‌ನಲ್ಲಿ ಮಿಂಚುತ್ತಿವೆ ಪ್ರಾಣ , ಪಕ್ಷಿಗಳು
ಮೈಸೂರು

ಮಿಲೇನಿಯಂ ಸರ್ಕಲ್‌ನಲ್ಲಿ ಮಿಂಚುತ್ತಿವೆ ಪ್ರಾಣ , ಪಕ್ಷಿಗಳು

October 9, 2021

ಮೈಸೂರು, ಅ.೮(ವೈಡಿಎಸ್)-ದೀಪಾಲಂಕಾರ ಪ್ರವಾಸಿ ಗರನ್ನು ಸೂಜಿಗಲ್ಲಿನಂತೆ ಸೆಳೆಯುತ್ತಿರುವ ನಗರದ ಪ್ರಮುಖ ವೃತ್ತಗಳಲ್ಲಿ ಬನ್ನಿಮಂಟಪದ ಎಲ್‌ಐಸಿ ವೃತ್ತವೂ ಒಂದು. ಇಲ್ಲಿ ವಿದ್ಯುತ್ ದೀಪಗಳಿಂದ ಆನೆ, ಜಿಂಕೆ, ಕುದುರೆ ಮತ್ತಿತರೆ ಪ್ರಾಣ ಗಳ ಪ್ರತಿಕೃತಿಗಳನ್ನು ಸ್ಥಾಪಿಸಿದ್ದು, ಸಾರ್ವಜನಿಕರನ್ನು ಆಕರ್ಷಿಸುತ್ತಿದೆ. ದಸರಾ ಮಹೋತ್ಸವದಲ್ಲಿ ದೀಪಾಲಂಕಾರ ಪ್ರಮುಖ ಅಕರ್ಷಣೆಯಾಗಿದ್ದು, ಬನ್ನಿಮಂಟಪದ ಎಲ್‌ಐಸಿ ಕಚೇರಿ ಮುಂಭಾಗದ ಟಿ.ಎನ್.ನರಸಿಂಹಮೂರ್ತಿ ವೃತ್ತದಲ್ಲಿ ವಿದ್ಯುತ್ ದೀಪಗಳಿಂದ ಕಿರು ಅರಣ್ಯವನ್ನು ನಿರ್ಮಿಸಿ, ೧೫ಕ್ಕೂ ಹೆಚ್ಚು ವಿವಿಧ ಪ್ರಾಣ ಗಳ ಪ್ರತಿಕೃತಿಗಳನ್ನು ನಿರ್ಮಿಸಿದ್ದು ಪ್ರವಾಸಿಗರು, ಸಾರ್ವಜನಿಕರನ್ನು ತನ್ನತ್ತ ಸೆಳೆಯುತ್ತಿದೆ.

ಇಲ್ಲಿ ರಾಜೇಂದ್ರನಗರದ ಶಾಮಲಾ ಎಂಬುವರು ಇದರ ಉಸ್ತುವಾರಿ ವಹಿಸಿಕೊಂಡು ೨೦ ಜನರೊಂದಿಗೆ ವಿದ್ಯುತ್ ದೀಪದಿಂದ ಆನೆ, ಕುದುರೆ, ಜಿಂಕೆ, ಬಾತುಕೋಳಿ, ಚಿಟ್ಟೆ, ಮೀನು, ಶಿವಲಿಂಗ ವಿಧಾನಸೌಧ, ಮಂಟಪ ಪ್ರತಿಕೃತಿ ನಿರ್ಮಿಸಿದ್ದು, ಯುವಕ-ಯುವತಿಯರು ತಂಡೋಪ ತಂಡವಾಗಿ ಕುಟುಂಬದೊAದಿಗೆ ಆಗಮಿಸಿ ವೀಕ್ಷಿಸುತ್ತಿದ್ದರು.
ಜತೆಗೆ ಕೊರೊನಾ ವ್ಯಾಕ್ಸಿನೇಷನ್ ಕುರಿತ ಪ್ರತಿಕೃತಿ ನಿರ್ಮಿಸಿ ವ್ಯಾಕ್ಸಿನ್ ಕುರಿತು ಜಾಗೃತಿ ಮೂಡಿಸಲಾಗುತ್ತಿದೆ. ಆದರೂ ಜನರು ಅಂತರ ಕಾಯ್ದುಕೊಳ್ಳದೆ ವೀಕ್ಷಿಸುತ್ತಿದ್ದದ್ದು ಕಂಡು ಬಂತು.

ಸಾಮಾಜಿಕ ಅಂತರವಿಲ್ಲ
ದೀಪಾಲAಕಾರ ಆರಂಭವಾಗುತ್ತಿ ದ್ದಂತೆ ಯುವಕ-ಯುವತಿಯರು ಕಲಾಕೃತಿಗಳ ಎದುರು ನಿಂತು ಸಾಮಾಜಿಕ ಅಂತರ ಮರೆತು ಫೋಟೊ ಕ್ಲಿಕ್ಕಿಸಿಕೊಳ್ಳುತ್ತಿದ್ದರು. ಈ ವೇಳೆ ಪೊಲೀಸರು ಸಾಮಾಜಿಕ ಅಂತರ ಕಾಯ್ದುಕೊಳ್ಳಿ ಎಂದು ಎಚ್ಚರಿಸುತ್ತಿದ್ದರೂ ಯಾರೊಬ್ಬರೂ ಪಾಲಿಸುತ್ತಿರಲಿಲ್ಲ.
ಜನದಟ್ಟಣೆ: ಪ್ರತಿಕೃತಿಗಳನ್ನು ವೀಕ್ಷಿಸಲು ಹೆಚ್ಚಿನ ಸಂಖ್ಯೆ ಯಲ್ಲಿ ಜನರು ಆಗಮಿಸಿದ್ದರಿಂದ ಜನದಟ್ಟಣೆ ಹೆಚ್ಚಾಗಿ ಸಂಚಾ ರಕ್ಕೆ ತೊಂದರೆಯಾಗಿತ್ತು. ಈ ವೇಳೆ ಪೊಲೀಸರು, ಜನರನ್ನು ಚದುರಿಸಿ ಸಂಚಾರಕ್ಕೆ ಅನುವು ಮಾಡಿಕೊಟ್ಟರು.

Translate »