ಮೈಸೂರು, ಅ.೮(ಎಂಕೆ)- ಮೈಸೂರಿನ ಸಾಹುಕಾರ್ ಚೆನ್ನಯ್ಯ ಕುಸ್ತಿ ಅಖಾಡದಲ್ಲಿ ಶುಕ್ರವಾರ ನಡೆದ ದಸರಾ ನಾಡ ಕುಸ್ತಿ ಪಂದ್ಯಾವಳಿ ಅಭಿಮಾನಿಗಳಿಗೆ ರೋಮಾಂಚನ ನೀಡಿತು. ಅಖಾಡದಲ್ಲಿ ತೊಡೆ ತಟ್ಟಿದ ೧೩ ಜೋಡಿ ಕುಸ್ತಿಪಟು ಗಳು ಬಲಾಬಲ ಪ್ರದರ್ಶಿಸಿದರು. ನಂಜನಗೂಡು ಪೈಲ್ವಾನ್ ಕೆಂಪರಾಜು ವಿರುದ್ಧ ಬೆಸ್ತರ ಕಾಳಣ್ಣನವರ ಗರಡಿಯ ಭೈರವ ನಾಯಕ, ಆರ್ಕೆ ನಿತಿನ್ ವಿರುದ್ಧ ಮನು, ಲಿಂಗದೇವರ ಕೊಪ್ಪಲು ಭೀಮನ ವಿರುದ್ಧ ಮೋಹಿತ್ ಗೌಡ, ಲಿಂಗದೇವರ ಕೊಪ್ಪಲು ಮನುಕುಮಾರ್ ವಿರುದ್ಧ ಗವಿರಂಗಪ್ಪ, ರವಿಶಂಕರ್ ವಿರುದ್ಧ ಎಂ.ಡಿ. ಹಂಬAಬಕರ, ಲಿಂಗದೇವರಕೊಪ್ಪಲು ಅಜಿತ್ ಕುಮಾರ್ ವಿರುದ್ಧ ಎಂ.ಬಿ.ಪಾಜೀಲ್, ಬೆಸ್ತರ ಕಾಳಣ್ಣನವರ ಗರಡಿ ಗಂಗರಾಜ ನಾಯಕ ವಿರುದ್ಧ ನಂಜನ ಗೂಡು ಎನ್.ಪಿ.ಪ್ರೀತಮ್. ನಂಜನಗೂಡು ರೇಣುದಾಸ್ ವಿರುದ್ಧ ಇಟ್ಟಿಗೆ ಗೂಡಿನ ಪವನ್, ಪಡುವಾರಹಳ್ಳಿ ಮಯೂರ್ ವಿರುದ್ಧ ಕೆ.ಜಿ.ಕೊಪ್ಪಲು ಮುಖೇಶ್, ಪಡುವಾರಹಳ್ಳಿ ರಾಹುಲ್ ವಿರುದ್ಧ ಇಷ್ಕಿಯನ್ ಗರಡಿಯ ಸೈಯದ್ ಹುಸೇನ್, ಅಶೋಕಪುರಂನ ತಿರುಮಲ ವಿರುದ್ಧ ಗೋವಿಂದರಾಜ್ ವಿಜಯ ಸಾಧಿಸಿದರು.
ಸಮಬಲ: ಕೆ.ಜಿ.ಕೊಪ್ಪಲ ಕಿರಣ್-ಪಾಂಡವಪುರದ ಸುಜೇಂದ್ರ, ವೀರನಗೆರೆ ಸಚಿನ್-ಹೊಸಹಳ್ಳಿ ಸೂರಜ್ ಸಮಬಲ ಸಾಧಿಸಿದರು. ಹಿರಿಯ ಪೈಲ್ವಾನ್‌ಗಳಾದ ಶ್ರೀನಿವಾಸಗೌಡ, ಚಂದ್ರು ಮತ್ತಿತರರು ಉಪಸ್ಥಿತರಿದ್ದರು.
ಮೈಸೂರು