ಅರಮನೆ ಬೆಳಕಲ್ಲಿ ಝೇಂಕರಿಸಿದ ಜಾನಪದ ಸೊಗಡು
ಮೈಸೂರು

ಅರಮನೆ ಬೆಳಕಲ್ಲಿ ಝೇಂಕರಿಸಿದ ಜಾನಪದ ಸೊಗಡು

October 9, 2021

ಚೆಲ್ಲಿದರು ಮಲ್ಲಿಗೆಯಾ…, ಮಾದೇಶ್ವರ ದಯೆ ಬಾರದೆ…, ತಿಂಗಾಳು ಮುಳುಗಿದವೋ…, ಬಿದಿರು ನಾನಾರಿಗಲ್ಲದವಳು…
ಮೇಯರ್ ಅಸಮಾಧಾನ…

ಮೇಯರ್ ಸುನಂದಾ ಪಾಲನೇತ್ರ ಅವರು ಕಾರ್ಯಕ್ರಮ ವೀಕ್ಷಣೆಗೆ ಬಂದಿದ್ದರು. ಆದರೆ ವೇದಿಕೆ ಮುಂಭಾಗದ ಆಸನಗಳೆಲ್ಲವೂ ಭರ್ತಿ ಯಾಗಿದ್ದವು. ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಹಾಗೂ ಬಿಜೆಪಿ ಮುಖಂಡರು ಮುಂಭಾಗದಲ್ಲಿ ಆಸೀನರಾಗಿ ದ್ದರು. ವೇದಿಕೆ ಮುಂಭಾಗದಲ್ಲೇ ಬಂದರೂ ಯಾರೂ ಗಮನಿಸಲಿಲ್ಲ. ಇದರಿಂದ ಬೇಸರಗೊಂಡ ಮೇಯರ್, ಮಾಧ್ಯಮದವರ ಗ್ಯಾಲರಿಯಲ್ಲಿ ಕುಳಿತು ಕೆಲಕಾಲ ಕಾರ್ಯಕ್ರಮ ವೀಕ್ಷಿಸಿದ ನಂತರ ವೇದಿಕೆ ಹಿಂಭಾಗದಿAದ ತೆರಳಿದರು.

ಮೈಸೂರು, ಅ.೮(ಎಸ್‌ಬಿಡಿ)- ಜಗಮಗಿಸುವ ಮೈಸೂರು ಅರಮನೆ ಅಂಗಳದ ದಸರಾ ಸಾಂಸ್ಕೃತಿಕ ವೇದಿಕೆಯಲ್ಲಿ ಶುಕ್ರವಾರ ಜಾನಪದ ಸೊಗಡು ಝೇಂಕರಿಸಿತು. ಪ್ರಸಿದ್ಧ ಜಾನಪದ ಗಾಯಕರಾದ ಮಳವಳ್ಳಿ ಮಹದೇವಸ್ವಾಮಿ ಹಾಗೂ ಅಪ್ಪಗೆರೆ ತಿಮ್ಮರಾಜು ತಂಡದ ಕಲಾವಿದರು ಪ್ರಸಿದ್ಧ ಜಾನ ಪದ ಗೀತೆಗಳನ್ನು ಮನೋಜ್ಞವಾಗಿ ಪ್ರಸ್ತುತಪಡಿ ಸುವ ಮೂಲಕ ನೆರೆದಿದ್ದ ಕಲಾಸಕ್ತರ ಹೃನ್ಮನ ತಣ ಸುವುದರ ಜೊತೆಗೆ ದಸರಾ ಸಾಂಸ್ಕೃತಿಕ ಕಾರ್ಯಕ್ರಮದ ವೈಭವ ಇಮ್ಮಡಿಗೊಳಿಸಿದರು.

ಮೊದಲಿಗೆ ಮಳವಳ್ಳಿ ಮಹದೇವಸ್ವಾಮಿ ಸಹ ಗಾಯಕರೊಂದಿಗೆ `ಚೆಲ್ಲಿದರು ಮಲ್ಲಿಗೆಯಾ ಬಾಣಾ ಸೂರೇರಿ ಮ್ಯಾಲೆ… ಎಂದು ಹಾಡುವ ಮೂಲಕ ಅಂದಾದ ಚೆಂದಾದ ಮಾಯ್ಕಾರ ಮಾದೇವ ನನ್ನು ಸ್ಮರಿಸಿದರು. ಬಳಿಕ ಜನಮಾನಸದಲ್ಲಿ ಹಚ್ಚಹಸಿರಾಗಿರುವ `ಮಾದೇಶ್ವರ ದಯೆ ಬಾರದೇ ಬರಿದಾದ ಬಾಳಲ್ಲಿ ಬರ ಬಾರದೆ ನೀನಿಲ್ಲದೆ ನನಗೆ ಬದುಕೆಲ್ಲಿದೆ…’ ಹಾಡಿನ ಮೂಲಕ ಭಕ್ತಿಸುಧೆ ಹರಿಸಿದರು. ಈ ವೇಳೆ ತಮ್ಮೊಂದಿಗೆ ಧ್ವನಿಗೂಡಿ ಸಿದ ಈ ಗೀತೆಯ ರಚನೆಕಾರ ಮೈಸೂರಿನ ಶಿಕ್ಷಕ ಆರ್.ರವಿಕುಮಾರ್ ಅವರನ್ನು ಪ್ರೇಕ್ಷಕರಿಗೆ ಪರಿ ಚಯಿಸಿಕೊಟ್ಟರು. `ಕಿನ್ನೂರಿ ನುಡಿಸೋನಾ ದನಿ ಚೆಂದಾವೊ, ಕಿನ್ನೂರಿ ನುಡಿಸೋನಾ ಬೆರಳಿನಂದ ಚೆಂದವೋ.. ಎಲ್ಲೋ ಜೋಗಪ್ಪ ನಿನ್ನರಮನೆ….’ ಪ್ರಸ್ತುತಪಡಿಸಿ, `ಆಡಿದವರ ಮನವ ಬಲ್ಲೆ, ನೀಡಿದವರ ನಿಜವ ಬಲ್ಲೆ ಸಿದ್ದಯ್ಯಾ ಸ್ವಾಮಿ ಬನ್ಯೋ…’ ಹಾಡಿನ ಮೂಲಕ ಮಂಟೇಸ್ವಾಮಿಗೆ ನಮನ ಸಲ್ಲಿಸಿದರು.ರವಿ ಕುಮಾರ್, ಹರೀಶ್, ಜಗದೀಶ್, ಶ್ರುತಿ, ಸುಮಿತ್ರ, ತಗ್ಗಳ್ಳಿ ಮಹದೇವ್, ನಂಜುAಡ ಸ್ವಾಮಿ, ಕಿರುಗುಂದ ಶ್ರೀನಿವಾಸ್, ರಾಚಪ್ಪ ಧ್ವನಿಗೂಡಿಸಿ ದರೆ, ಮಹೇಂದ್ರ, ರಾಜುಬುದ್ದಿ, ಮಾಸ್ಟರ್ ಶ್ರೇಯಸ್ ಹಾಗೂ ಪರಶುರಾಮ್ ವಾದ್ಯ ಸಹಕಾರ ನೀಡಿದರು.

ನಂತರ ಮತ್ತೋರ್ವ ಪ್ರಸಿದ್ಧ ಜಾನಪದ ಕಲಾ ವಿದ ಅಪ್ಪಗೆರೆ ತಿಮ್ಮರಾಜು ಜಾನಪದ ಹಬ್ಬದ ಸಂಭ್ರಮ ಹೆಚ್ಚಿಸಿದರು. `ತಿಂಗಾಳು ಮುಳುಗಿ ದವೋ ರಂಗೋಲಿ ಬೆಳಗಿದವೋ ನಮ್ಮ ತಾಯಿ ಚಾಮುಂಡಿಯಾ ಪೂಜೆಗೆಂದು ಬಾಳೆ ಬಾಗಿ ದವೋ…’ ಗೀತೆ ಮೂಲಕ ತಾಯಿ ಚಾಮುಂಡೇ ಶ್ವರಿಯ ಪೂಜಾ ವೈಭವ ಸಾರಿದರು. ಪೂರ್ವಜರ ಅಮೋಘ ಪರಿಕಲ್ಪನೆಗೆ ಸಾಕ್ಷಿಯಾದ `ನಿಂಬಿಯಾ ಬನಾದ ಮ್ಯಾಗಳ ಚಂದ್ರಾಮ ಚೆಂಡಾಡಿದ…’ ಜಾನಪದ ಹಾಡಿನ ಬಳಿಕ ಶಿಶುನಾಳ ಷರೀಫರ `ಬಿದಿರು ನಾನಾರಿಗಲ್ಲದವಳು…’ ತತ್ವಪದ ಹಾಡಿ ರಂಜಿಸಿದರು. ಕಡೆಯಲ್ಲಿ `ಚೆಲ್ಲಿದರು ಮಲ್ಲಿಗೆಯಾ…’ ಹಾಡಿನೊಂದಿಗೆ ಮಾದೇಶ್ವರನಿಗೆ ನಮಿಸಿ, ಜಾನಪದ ಗಾಯನಕ್ಕೆ ವಿರಾಮ ನೀಡಿದರು.

ಸಹ ಗಾಯಕರಾಗಿ ಶಿಲ್ಪ ಮತ್ತು ಅಶ್ವಿನಿ, ವಾದ್ಯ ವೃಂದದಲ್ಲಿ ಪುಣ್ಯೇಶ್, ಮಾರುತಿ, ರೋಷನ್ ಸೂರ್ಯ, ಗುರುದತ್ ಸಹಕಾರ ನೀಡಿದರು. ತಮ್ಮ ಅಜ್ಜಿ ಪುಟ್ಟಸಿದ್ದಮ್ಮ ಅವರ ಪ್ರಭಾವ, ಪ್ರೇರಣೆಯಿಂದ ಚಿಕ್ಕವಯಸ್ಸಿನಿಂದಲೇ ಜಾನಪದ ಗಾಯನ ಅಭ್ಯಾಸ ಮಾಡಿ, ಅಕ್ಕ ಸಮ್ಮೇಳನ ಸೇರಿ ದಂತೆ ದೇಶ-ವಿದೇಶಗಳ ಹಲವು ಕಾರ್ಯಕ್ರಮ ಗಳಲ್ಲಿ ಜಾನಪದ ಸೊಗಡು ಪಸರಿಸಿರುವ ಅಪ್ಪ ಗೆರೆ ತಿಮ್ಮರಾಜು, ವೇದಿಕೆಯಲ್ಲಿ ಗಾಯನದೊಂದಿಗೆ ಅಭಿನಯದ ಮೂಲಕ ಸಹಗಾಯಕರು ಹಾಗೂ ವಾದ್ಯವೃಂದದವರ ಉತ್ಸಾಹ ಹೆಚ್ಚಿಸಿದ್ದಲ್ಲದೆ, ಪ್ರೇಕ್ಷಕರನ್ನೂ ಸೆಳೆದಿಟ್ಟುಕೊಂಡಿದ್ದರು.’

ವಯೋಲಿನ್ ವಾದನ: ಶಿವಮೊಗ್ಗದ ಹೊಸ ಹಳ್ಳಿ ಕೆ.ವೆಂಕಟರಾಮು ಅವರ ವಯೋಲಿನ್ ವಾದನ ಪ್ರೇಕ್ಷಕರಿಗೆ ಮುದ ನೀಡಿತು. ಸಹೋದರ ಹೆಚ್.ಕೆ.ಸುಬ್ಬರಾವ್, ಪುತ್ರ ಹೆಚ್.ಕೆ.ರಘುರಾಮ್, ವಿದ್ವಾನ್‌ಗಳಾದ ಆನೂರು ಅನಂತಕೃಷ್ಣಶರ್ಮ, ಗುರುಪ್ರಸಾದ್, ಅರುಣ್‌ಕುಮಾರ್, ತಿರುಮಲೆ ಗೋಪಿ ಶಂಕರ್ ವಾದ್ಯ ಸಹಕಾರದೊಂದಿಗೆ ಹಲವು ಕೃತಿಗಳನ್ನು ಪ್ರಸ್ತುತಪಡಿಸಿದರು.

ಕನ್ನಡ ಡಿಂಡಮ: ಬೆಂಗಳೂರಿನ ವೈ.ಕೆ.ಮುದ್ದು ಕೃಷ್ಣ ಮತ್ತು ತಂಡದ ಕಲಾವಿದರು ಕನ್ನಡ ಅನೇಕ ಕವಿಗಳ ಪ್ರಸಿದ್ಧ ಕವಿತೆಗಳನ್ನು ಸುಶ್ರಾವ್ಯವಾಗಿ ಹಾಡಿ ರಂಜಿಸಿದರು. `ಹಚ್ಚೇವು ಕನ್ನಡದ ದೀಪ ಕರುನಾಡ ದೀಪ…’, `ಬ್ರಹ್ಮ ನಿಂಗೆ ಜೋಡುಸ್ತೀನಿ ಹೆಂಡ ಮುಟ್ಟಿದ್ ಕೈನಾ…’, `ಬಾ ಪಾಲ್ಗುಣ ರವಿ ದರ್ಶನಕ್ಕೆ…’, `ತುಂಬು ತಿಂಗಳಿನ ಮಲ್ಲಿಗೆ ಹಂಬಿನಾ…’ ಹೀಗೆ ವಿಭಿನ್ನ ಹಾಡುಗಳ ಮೂಲಕ ಕರುನಾಡ ಡಿಂಡಿಮ ಬಾರಿಸಿದ್ದು ಅತ್ಯಾಕರ್ಷಕವಾಗಿತ್ತು.

Translate »