ಮೈಸೂರು, ಅ. ೮(ಆರ್‌ಕೆ)-ಲಾಕ್‌ಡೌನ್ ತೆರವು ಗೊಂಡ ನಂತರ ಹೋಟೆಲ್ ಉದ್ಯಮ ಕೊಂಚ ಚೇತರಿಸಿಕೊಂಡಿದ್ದು, ದಸರಾ ಹಿನ್ನೆಲೆಯಲ್ಲಿ ಅಕ್ಟೋ ಬರ್ ೧೦ರಿಂದ ಮೈಸೂರಿನ ಹೋಟೆಲ್‌ಗಳಲ್ಲಿ ಶೇ. ೫೦ರಷ್ಟು ಕೊಠಡಿಗಳು ಈಗಾಗಲೇ ಬುಕ್ ಆಗಿವೆ ಎಂದು ಮೈಸೂರು ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷ ಸಿ. ನಾರಾಯಣಗೌಡ ತಿಳಿಸಿದ್ದಾರೆ.
ಮೈಸೂರು ನಗರದ ೪೧೫ ಹೋಟೆಲ್, ಲಾಡ್ಜ್ ಗಳಲ್ಲಿ ಒಟ್ಟು ೧೦,೦೦೦ ರೂಂಗಳಿದ್ದು, ಆನ್‌ಲೈನ್ ನಲ್ಲಿ, ದೂರವಾಣ ಮೂಲಕ ಅಕ್ಟೋಬರ್ ೧೦ರಿಂದ ೫,೦೦೦ ರೂಂಗಳು ಬುಕ್ ಆಗಿವೆ. ಅದೇ ರೀತಿ ಅಕ್ಟೋಬರ್ ೧೪ರಂದು ಆಯುಧ ಪೂಜಾ, ೧೫ ರಂದು ಜಂಬೂ ಸವಾರಿ ಮೆರವಣ ಗೆ ಹಿನ್ನೆಲೆಯಲ್ಲಿ ಎಲ್ಲಾ ೧೦,೦೦೦ ಕೊಠಡಿಗಳೂ ಭರ್ತಿಯಾಗುವ ನಿರೀಕ್ಷೆ ಇದೆ ಎಂದು ಅವರು ತಿಳಿಸಿದರು.
ಗುರುವಾರ ಮೈಸೂರು ನಗರದಲ್ಲಿ ದೀಪಾಲಂಕಾ ರಕ್ಕೆ ಚಾಲನೆ ದೊರೆತಿರುವುದರಿಂದ ಝಗಮಗಿಸುವ ದಸರಾ ದೀಪಾಲಂಕಾರ ನೋಡಲೆಂದು ಹೊರ ಜಿಲ್ಲೆಗಳಿಂದ ಮಕ್ಕಳೊಂದಿಗೆ ಪ್ರವಾಸಿಗರು ಬರುತ್ತಿದ್ದು, ಅವರಲ್ಲಿ ಬಹುತೇಕರು ಹೋಟೆಲುಗಳಲ್ಲಿ ರಾತ್ರಿ ವೇಳೆ ವಾಸ್ತವ್ಯ ಹೂಡುತ್ತಿದ್ದಾರೆ ಎಂದು ತಿಳಿಸಿದ್ದಾರೆ.
ಅದ್ಧೂರಿಯಾಗಿ ದಸರಾ ನಡೆದಿದ್ದರೆ, ೧೦ ದಿನ ಮೈಸೂರಿನ ಎಲ್ಲಾ ಹೋಟೆಲುಗಳ ರೂಂ ಭರ್ತಿ ಆಗುತ್ತಿದ್ದವು. ಕೊರೊನಾ ಸಂಕಷ್ಟದಿAದ ಉಂಟಾ ಗಿದ್ದ ಆರ್ಥಿಕ ನಷ್ಟ ಸ್ವಲ್ಪ ಮಟ್ಟಿಗೆ ಸುಧಾರಿಸುತ್ತಿತ್ತು. ಆದರೆ ಈ ಬಾರಿಯೂ ಸರಳ ದಸರಾ ಆಚರಿಸುತ್ತಿರುವ ಕಾರಣ, ನಿರೀಕ್ಷಿತ ಸಂಖ್ಯೆಯಲ್ಲಿ ಪ್ರವಾಸಿಗರು ಮೈಸೂರಿಗೆ ಬರುತ್ತಿಲ್ಲ ಎಂದು ನಾರಾಯಣಗೌಡ ತಿಳಿಸಿದರು. ಆದರೆ, ಹೋಟೆಲ್ ಉದ್ಯಮ ಕಳೆದ ಒಂದು ವಾರದಿಂದೀಚೆಗೆ ಚೇತರಿಸಿ ಕೊಳ್ಳುತ್ತಿದ್ದು, ದಸರಾ ಸಂದರ್ಭ ಮತ್ತಷ್ಟು ಸುಧಾರಿಸುವ ನಿರೀಕ್ಷೆ ಇದೆ ಎಂಬ ಭರವಸೆ ಯಲ್ಲಿದ್ದೇವೆ ಎಂದು ಅವರು ತಿಳಿಸಿದರು.