ಕೊಳ್ಳೇಗಾಲದ ಇಬ್ಬರ ಸಾವು ಮೃತರ ನಿವಾಸಕ್ಕೆ ಶಾಸಕ ಭೇಟಿ, ಸಾಂತ್ವನ
ಚಾಮರಾಜನಗರ

ಕೊಳ್ಳೇಗಾಲದ ಇಬ್ಬರ ಸಾವು ಮೃತರ ನಿವಾಸಕ್ಕೆ ಶಾಸಕ ಭೇಟಿ, ಸಾಂತ್ವನ

May 5, 2021

ಕೊಳ್ಳೇಗಾಲ,ಮೇ 4(ಎನ್.ನಾಗೇಂದ್ರ) -ಚಾ.ನಗರ ಜಿಲ್ಲಾಸ್ಪತ್ರೆಯಲ್ಲಿ ಆಕ್ಸಿಜನ್ ಕೊರತೆಯಿಂದ ಕೊರೊನಾ ಪೀಡಿತ 24 ಮಂದಿ ಸಾವಿಗೀಡಾದವರ ಪೈಕಿ ಕೊಳ್ಳೇ ಗಾಲ ಕ್ಷೇತ್ರದ ಇಬ್ಬರು ಸೇರಿದ್ದು, ಮೃತರ ನಿವಾಸಕ್ಕೆ ಶಾಸಕ ಎನ್.ಮಹೇಶ್ ಮಂಗಳ ವಾರ ಭೇಟಿ ನೀಡಿದರಲ್ಲದೆ ಕುಟುಂಬಸ್ಥರಿಗೆ ಸಾಂತ್ವನ ಹೇಳಿ, ಆರ್ಥಿಕ ನೆರವು ನೀಡಿದರು.

ತಾಲೂಕಿನ ತಿಮ್ಮರಾಜಿಪುರ ಕೀರ್ತನಾ (ಮಂಜುಳಾ), ಮುಡಿಗುಂಡದ ಶಿವಣ್ಣ ಅವರ ನಿವಾಸಗಳಿಗೆ ಶಾಸಕ ಮಹೇಶ್ ಭೇಟಿ ನೀಡಿ, ಕುಟುಂಬಸ್ಥರ ಜೊತೆ ಚರ್ಚಿಸಿ ಅವರಿಗೆ ಧೈರ್ಯ ತುಂಬಿದರು. ಅಲ್ಲದೆ ಕೀರ್ತನಾ ಕುಟುಂಬಕ್ಕೆ ಕೂಡಲೇ ಸಮಾಜ ಕಲ್ಯಾಣ ಇಲಾಖೆ ನೆರವು ನೀಡ ಬೇಕು ಎಂದು ಒತ್ತಾಯಿಸಿದರು. ಆದಿ ಜಾಂಭವ ನಿಗಮದ ವತಿಯಿಂದ ಸಾಲ, ಸೌಲಭ್ಯ ಕೊಡಿಸಿ ಅವರ ಕುಟುಂಬಕ್ಕೆ ನೆರವು ಕೊಡಿಸುವುದಾಗಿ ಇದೇ ವೇಳೆ ಶಾಸಕರು ಭರವಸೆ ನೀಡಿದರು.

ಶಿವಣ್ಣ ಹಾಗೂ ಕೀರ್ತನಾ ಕುಟುಂಬ ಗಳಿಗೆ ಸರ್ಕಾರ ಪರಿಹಾರ ನೀಡಬೇಕು. ಸಾವು ಒಂದಾಗಲಿ ಅಥವಾ 24 ಆಗಲಿ ಸಾವು, ಸಾವೇ. ಇವರ ಸಾವಿಗೆ ನ್ಯಾಯ ಸಿಗಬೇಕು. ತಪ್ಪಿತಸ್ಥರಿಗೆ ಶಿಕ್ಷೆಯಾಗಬೇಕು. ವಿಚಾರಣಾಧಿಕಾರಿಗಳು ಪ್ರಕರಣವನ್ನು ಅತೀ ಸೂಕ್ಷ್ಮವಾಗಿ ಪರಿಗಣಿಸಿ ಇದಕ್ಕೆ ಕಾರಣವನ್ನು ಬಯಲಿಗೆಳೆದು ಶಿಕ್ಷೆ ಕೊಡಿ ಸಲಿ. ಈ ಘಟನೆಯಲ್ಲಿ ಜಿಲ್ಲಾಧಿಕಾರಿ ಗಳದ್ದೇ ತಪ್ಪಾ? ಇಲ್ಲ ವೈದ್ಯರದ್ದು ತಪ್ಪಿದಿಯಾ ಎಂಬುದರ ಬಗ್ಗೆ ವಿಚಾರಣಾ ಧಿಕಾರಿಗಳು ಮಾಹಿತಿ ಸಂಗ್ರಹಿಸಬೇಕು. ಶಿವಣ್ಣ ಕುಟುಂಬದಸ್ಥರಿಗೂ ಸಹ ಅಗತ್ಯ ನೆರವು ಕೊಡಿಸುವಲ್ಲಿ ಶ್ರಮಿಸುವೆ. ನಿಜಕ್ಕೂ ಈ ಪ್ರಕರಣ ಜಿಲ್ಲಾಸ್ಪತ್ರೆಯಲ್ಲಿನ ದೊಡ್ಡ ದುರಂತ ಎಂದು ವಿಷಾದಿಸಿದರು.

Translate »