ಅದ್ಧೂರಿ ಕೆಂಪೇಗೌಡರ ಜಯಂತಿಗೆ ನಿರ್ಧಾರ
ಮೈಸೂರು

ಅದ್ಧೂರಿ ಕೆಂಪೇಗೌಡರ ಜಯಂತಿಗೆ ನಿರ್ಧಾರ

August 13, 2018

ಬನ್ನೂರು: ‘ತಾಲೂಕಿನ ಎಪಿಎಂಸಿ ಆವರಣದಲ್ಲಿ ಸೆ. 8ರಂದು ನಾಡ ಪ್ರಭು ಕೆಂಪೇಗೌಡರ ಜಯಂತಿಯನ್ನು ಅದ್ಧೂರಿಯಾಗಿ ಆಚರಣೆ ಮಾಡಲಾಗುವುದು’ ಎಂದು ಒಕ್ಕಲಿಗ ಸಂಘದ ಪ್ರಧಾನ ಕಾರ್ಯದರ್ಶಿ ವೈ.ಎಸ್.ರಾಮಸ್ವಾಮಿ ಹೇಳಿದರು.

ಪಟ್ಟಣದ ಸರ್ವಮಂಗಳ ನಂಜೇಗೌಡ ಸಮುದಾಯ ಭವನದಲ್ಲಿ ಭಾನುವಾರ ನಡೆದ ಕೆಂಪೇಗೌಡ ಜಯಂತಿಯ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ಇತ್ತೀಚಿನ ದಿನಗಳಲ್ಲಿ ಒಕ್ಕಲಿಗರು ತಮ್ಮ ಉತ್ಸಾಹವನ್ನು ಕಳೆದುಕೊಳ್ಳುತ್ತಿರುವುದು ವಿಪರ್ಯಾಸ ವಾಗಿದೆ. ಮನುಷ್ಯನಿಗೆ ಉತ್ಸಾಹ ಇದ್ದರೆ ಎಂತಹ ಕೆಲಸವನ್ನೂ ಮಾಡಬಹುದು. ಮೊದಲು ನಾವು ಉತ್ಸಾಹ ಕಂಡುಕೊಳ್ಳ ಬೇಕಿದೆ ಎಂದು ತಿಳಿಸಿದರು.

ಒಕ್ಕಲಿಗ ಜನಾಂಗಕ್ಕೆ ಕೆಂಪೇಗೌಡ ಜಯಂತಿಯ ಮೂಲಕ ಉತ್ತಮ ಸಂದೇಶ ವನ್ನು ರವಾನಿಸುವ ಅಗತ್ಯವಿದೆ ಎಂದ ಅವರು, ಕೆಂಪೇಗೌಡರ ಜಯಂತಿಯಂದು ತಾಲೂಕಿ ನಲ್ಲಿರುವ ಜನಾಂಗದ ಉತ್ತಮ ಕವಿಗಳು, ಸಾಹಿತಿಗಳು, ಚಲನಚಿತ್ರ ನಟರು ಹಾಗೂ ಸಾಧಕರನ್ನು ಆಹ್ವಾನಿಸಿ ಸನ್ಮಾನಿಸಲಾಗು ವುದು ಎಂದರು. ಕೆಂಪೇಗೌಡರ ಜಯಂತಿಗೆ ಮುಖ್ಯಮಂತ್ರಿ ಕುಮಾರಸ್ವಾಮಿ, ಸಚಿವ ಡಿ.ಕೆ.ಶಿವಕುಮಾರ್, ಆದಿ ಚುಂಚನಗಿರಿಯ ನಿರ್ಮಲಾನಂದ ಸ್ವಾಮೀಜಿ ಸೇರಿದಂತೆ ಒಕ್ಕಲಿಗ ಜನಾಂಗದ ಪ್ರಮುಖ ಮುಖಂಡರು ಪಾಲ್ಗೊಳ್ಳುತ್ತಾರೆ ಎಂದು ತಿಳಿಸಿದರು.

ತಾಲೂಕು ಪಂಚಾಯಿತಿ ಅಧ್ಯಕ್ಷ ಚೆಲುವ ರಾಜ್ ಮಾತನಾಡಿ, ಒಕ್ಕಲಿಗರ ಸಂಖ್ಯೆ ತಾಲೂಕಿನಲ್ಲಿ ಅಧಿಕವಾಗಿದ್ದರೂ, ಯಾವುದೇ ಕಾರ್ಯಕ್ರಮ ಮಾಡುತ್ತೇವೆ ಎಂದರೆ ಭಾಗ ವಹಿಸುವವರ ಸಂಖ್ಯೆ ಮಾತ್ರ ಕಡಿಮೆ ಆಗುತ್ತಿದೆ. ಇದು ರಾಜಕೀಯ ಕಾರ್ಯಕ್ರಮವಲ್ಲ. ಒಕ್ಕಲಿಗ ಜನಾಂಗದ ಕಾರ್ಯಕ್ರಮ ಇದಕ್ಕೆ ರಾಜಕೀಯ ಬೆರೆಸುವುದು ಬೇಡ ಎಂದರು.

ಅಂದು ಕೆಂಪೇಗೌಡರ ಜಯಂತಿ ಯನ್ನು ಅದ್ಧೂರಿಯಾಗಿ ಆಚರಿಸಲಾಗು ವುದು. ಈ ಸಂಬಂಧ 2 ಸಮಿತಿಗಳನ್ನು ಮಾಡಲಾಗಿದ್ದು, ಮುಂದಿನ ಸಮಿತಿ ರಚನೆಯ ವೇಳೆ ಹೋಬಳಿಯವರಿಗೆ ಹೆಚ್ಚಿನ ಅವಕಾಶವನ್ನು ನೀಡಲಾಗುವುದು. ಕಾರ್ಯ ಕ್ರಮದ ಯಶಸ್ವಿಗೆ ಎಲ್ಲರೂ ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.

ಸಭೆಯಲ್ಲಿ ತಾಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಚಾಮೇಗೌಡ, ಎಪಿಎಂಸಿ ಅಧ್ಯಕ್ಷ ವೆಂಕಟೇಶ್, ರೋಟರಿ ಅಧ್ಯಕ್ಷ ರಾಮಚಂದ್ರು, ಬನ್ನೂರು ಪುರಸಭೆಯ ಉಪಾಧ್ಯಕ್ಷ ರಾಮ ಲಿಂಗೇಗೌಡ, ಮಾಜಿ ಉಪಾಧ್ಯಕ್ಷ ಬಿ.ಸಿ.ಪಾರ್ಥ ಸಾರಥಿ, ಜೆಡಿಎಸ್ ಹೋಬಳಿ ಯುವ ಘಟಕದ ಅಧ್ಯಕ್ಷ ಕೊಡಗ ಹಳ್ಳಿ ಕೆ.ಪಿ.ಶಿವಕುಮಾರ್, ಮುಖಂಡರಾದ ಕೆಂಪೇಗೌಡ, ಪ್ರಭಾಕರ್, ರಾಜು, ರಾಜೇಶ್, ಚಾಮೇಗೌಡ, ಜಯರಾಂ, ರಾಜ್‍ಗೋಪಾಲ್, ವಜ್ರೇಗೌಡ, ಸ್ವಾಮಿನಾಥ್, ತಾಲೂಕು ಶಿಕ್ಷಕ ಸಂಘದ ಅಧ್ಯಕ್ಷ ಸುಬ್ರಹ್ಮಣ್ಯ ಸೇರಿ ದಂತೆ ಕಾರ್ಯಕ್ರಮ ಸಮಿತಿಯ ಸದಸ್ಯರು, ಪದಾಧಿಕಾರಿಗಳು ಹಾಜರಿದ್ದರು.

Translate »