ಗ್ರಂಥಾಲಯ ಸೌಲಭ್ಯ ಸದ್ಬಳಕೆಗೆ ಸಲಹೆ
ಮೈಸೂರು

ಗ್ರಂಥಾಲಯ ಸೌಲಭ್ಯ ಸದ್ಬಳಕೆಗೆ ಸಲಹೆ

August 13, 2018

ಮೂಗೂರು:  ಗ್ರಾಮದ ಗ್ರಂಥಾಲಯದಲ್ಲಿ ಭಾನುವಾರ ಗ್ರಂಥಪಾಲಕರ ದಿನಾಚರಣೆಯನ್ನು ಆಚರಿಸಲಾಯಿತು.
ಗ್ರಾಮದ ಮುಖಂಡ ಎಂ.ಕೆ. ಸಿದ್ದರಾಜು ಅವರು ಗ್ರಂಥಾಲಯದ ಪಿತಾಮಹ ರಂಗ ನಾಥನ್ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಬಳಿಕ ಮಾತನಾಡಿದ ಅವರು, ಗ್ರಂಥಾಲಯ ಕಟ್ಟಡ ಮುಜರಾಯಿ ಇಲಾಖೆಯ ಕೊಠಡಿ ಯಲ್ಲಿರುವ ಕಾರಣ ಸೂಕ್ತ ಕಟ್ಟಡ ನಿರ್ಮಾಣ ವಾಗಬೇಕಿದೆ. ಗ್ರಂಥಾಲಯ ನಿರ್ಮಾಣಕ್ಕೆ ಗ್ರಾಮ ಪಂಚಾಯಿತಿ ಅವರು ಸರ್ಕಾರಿ ಜಾಗ ನೀಡಬೇಕು ಎಂದು ಮನವಿ ಮಾಡಿದರು.

ಇತ್ತೀಚಿನ ದಿನಗಳಲ್ಲಿ ಎಲ್ಲರಲ್ಲೂ ಪುಸ್ತಕ ಗಳನ್ನು ಓದುವ ಹವ್ಯಾಸ ಕಡಿಮೆ ಆಗುತ್ತಿದೆ. ಈ ನಿಟ್ಟಿನಲ್ಲಿ ಜನರು ಜಾಗೃತಿ ಮೂಡಿಸು ವುದು ಅಗತ್ಯ. ಗ್ರಾಮದ ಜನರು ಗ್ರಂಥಾಲಯದ ಸದುಪಯೋಗ ಪಡೆದುಕೊಳ್ಳಬೇಕು ಎಂದು ಸಲಹೆ ನೀಡಿದರು. ಉಪನ್ಯಾಸಕ ಕುಮಾರಸ್ವಾಮಿ ಮಾತ ನಾಡಿದರು. ಕಾರ್ಯಕ್ರಮದಲ್ಲಿ ಮುಖಂಡರಾದ ರಮೇಶ್‍ನಾಯ್ಕ, ಪುಟ್ಟಮಾದ ನಾಯ್ಕ, ಪತ್ರಕರ್ತ ಸುರೇಶ್, ಗ್ರಂಥಾಲಯ ಮೇಲ್ವಿಚಾರಕ ಎಂ.ರೇವಣ್ಣ ಹಾಜರಿದ್ದರು.

Translate »