ಬೆಂಗಳೂರು, ನ.9- ಕೊರೊನಾ ಭೀತಿಯ ನಡುವೆಯೇ ಕಾಲೇಜು ತರ ಗತಿಗಳನ್ನು ಆರಂಭಿಸಲು ರಾಜ್ಯ ಸರ್ಕಾರ ಮುಂದಾಗಿದೆ. ನ.17ರಿಂದ ಪದವಿ ಮತ್ತು ಸ್ನಾತಕೋತ್ತರ ಕಾಲೇಜುಗಳು ಪ್ರಾರಂಭವಾಗಲಿವೆ. ಕಾಲೇಜು ಆರಂ ಭಕ್ಕೆ ಸಂಬಂಧಿಸಿದಂತೆ ಯುಜಿ ಮತ್ತು ಪಿಜಿ ವಿದ್ಯಾರ್ಥಿಗಳಿಗೆ ಯುಜಿಸಿಯು ನಿಗದಿಪಡಿಸಿರುವಂತಹ ಮಾರ್ಗ ಸೂಚಿಗಳನ್ನು ಕರ್ನಾಟಕ ಶಿಕ್ಷಣ ಇಲಾಖೆಯು ಇಂದು ಬಿಡುಗಡೆ ಮಾಡಿದ್ದು, ಇದನ್ನು ಕಡ್ಡಾಯವಾಗಿ ಪಾಲಿಸುವಂತೆ ತಾಕೀತು ಮಾಡಿದೆ.
ಶಿಕ್ಷಣ ಇಲಾಖೆ ಗೈಡ್‍ಲೈನ್ಸ್: ಮಾಸ್ಕ್ ಧರಿಸುವುದು, ಸ್ಯಾನಿಟೈಸರ್ ಬಳಸು ವುದು ಹಾಗೂ ದೈಹಿಕ ಅಂತರ ಕಾಪಾಡಿ ಕೊಳ್ಳುವುದು ಕಡ್ಡಾಯವಾಗಿದೆ. ಕಾಲೇಜು ತರಗತಿಗಳ ಆರಂಭಕ್ಕೆ ಮೂರು ದಿನ ಮುನ್ನವೇ ಪ್ರತಿಯೊಬ್ಬರಿಗೆ ಕೋವಿಡ್ ಟೆಸ್ಟ್ ಅವಶ್ಯಕವಾಗಿದೆ. ಉಪನ್ಯಾಸ ಕರು, ವಿದ್ಯಾರ್ಥಿಗಳು ಹಾಗೂ ಕಾಲೇಜು ಸಿಬ್ಬಂದಿ ಸಮೀಪದ ಆಸ್ಪತ್ರೆಯಲ್ಲಿ ಕೋವಿಡ್ ಪರೀಕ್ಷೆ ಮಾಡಿಸಿ ನೆಗೆಟಿವ್ ರಿಪೋರ್ಟ್ ಹಾಜರುಪಡಿಸಿದರೆ ಮಾತ್ರ ತರಗತಿಗೆ ಹಾಜರಾಗಲು ಅವಕಾಶವಿದೆ. ಸಾಮಾ ಜಿಕ ಅಂತರ
ಕಾಯ್ದುಕೊಳ್ಳುವುದು, ಶುದ್ಧ ಕುಡಿಯುವ ನೀರು ಪೂರೈಕೆ, ಕಾಲೇಜು ಆವರಣವನ್ನು ಸ್ವಚ್ಛವಾಗಿಟ್ಟುಕೊಳ್ಳುವುದು, ಖಾಸಗಿ ವಾಹನ ಮತ್ತು ಬಸ್‍ಗಳನ್ನು ಸತತವಾಗಿ ಸ್ಯಾನಿಟೈಸ್ ಮಾಡುವುದು, ಕೈಗಳನ್ನು ಸೋಪಿನಿಂದ ಆಗಾಗ ತೊಳೆದುಕೊಳ್ಳುವ ವ್ಯವಸ್ಥೆ ಕಲ್ಪಿಸು ವುದು, ವಿದ್ಯಾರ್ಥಿಗಳ ಆರೋಗ್ಯದ ಬಗ್ಗೆ ಗಮನವಿಡಲು ಆರೋಗ್ಯ ಸಮಿತಿ ರಚಿಸುವುದು, ಕಾಲೇಜಿನಲ್ಲಿ ಕಂಡಕಂಡಲ್ಲಿ ಉಗುಳುವುದನ್ನು ನಿಷೇಧಿಸುವುದು ಸೇರಿದಂತೆ ವಿದ್ಯಾರ್ಥಿ ಗಳು ಕಡ್ಡಾಯವಾಗಿ ಆರೋಗ್ಯಸೇತು ಆಪ್ ಅನ್ನು ಇನ್‍ಸ್ಟಾಲ್ ಮಾಡಿಕೊಳ್ಳಬೇಕಾಗು ತ್ತದೆ. ಮತ್ತೊಂದೆಡೆ ಶಿಕ್ಷಣ ಸಂಸ್ಥೆಗಳು ಯುಜಿಸಿ ಹಾಗೂ ಶಿಕ್ಷಣ ಇಲಾಖೆಯ ಮಾರ್ಗ ಸೂಚಿಗಳನ್ನು ಕಡ್ಡಾಯವಾಗಿ ಪಾಲನೆ ಮಾಡಬೇಕು. ತಮ್ಮ ಸಂಸ್ಥೆ ಕೋವಿಡ್ ಪ್ರದೇಶ ದಿಂದ ಸುರಕ್ಷಿತ ಎಂಬುದನ್ನು ಆರೋಗ್ಯ ಇಲಾಖೆ ಹಾಗೂ ಶಿಕ್ಷಣ ಇಲಾಖೆಯಿಂದ ಖಚಿತಪಡಿಸಿಕೊಳ್ಳಬೇಕು. ಕಂಟೋನ್ಮೆಂಟ್ ಝೋನ್ ಹೊರಗೆ ಇರುವ ಕಾಲೇಜು ಮತ್ತು ವಿಶ್ವವಿದ್ಯಾನಿಲಯಗಳನ್ನು ಆರಂಭಿಸಲು ಯಾವುದೇ ಸಮಸ್ಯೆ ಇಲ್ಲ. ಆದರೆ ಕಂಟೋನ್ಮೆಂಟ್ ಝೋನ್ ಒಳಗೆ ಇರುವ ಕಾಲೇಜು ಮತ್ತು ವಿವಿಗಳಿಗೆ ವಿದ್ಯಾರ್ಥಿಗಳು ಹಾಜರಾಗುವಂತಿಲ್ಲ. ಇಂತಹ ಕಾಲೇಜು ಮತ್ತು ವಿವಿಗಳು ಆನ್‍ಲೈನ್ ಮೂಲಕ ತರಗತಿಗಳನ್ನು ನಡೆಸಬಹುದು. ವಿದೇಶಿ ವಿದ್ಯಾರ್ಥಿಗಳಿಗೂ ಆನ್‍ಲೈನ್‍ನಲ್ಲೇ ಪಾಠ ಮುಂದುವರೆಸುವ ಅವಕಾಶ ಕಲ್ಪಿಸಲಾಗಿದೆ. ಹವಾ ನಿಯಂತ್ರಣವನ್ನು ಹೆಚ್ಚಾಗಿ ಬಳಸಲು ನಿರ್ಬಂಧ ವಿಧಿಸಲಾಗಿದೆ. ಕಾಲೇಜು ತರಗತಿ ಒಳಗೆ ಉತ್ತಮ ಬೆಳಕು ಮತ್ತು ಗಾಳಿ ವ್ಯವಸ್ಥೆ ಮಾಡಬೇಕು. ಕ್ಯಾಂಪಸ್‍ನಲ್ಲಿ ಈಜುಕೊಳ ವಿದ್ದರೆ ಅದನ್ನು ಮುಚ್ಚಬೇಕು. ಹೊರ ರಾಜ್ಯ ಅಥವಾ ಜಿಲ್ಲೆಯಿಂದ ಬರುವ ವಿದ್ಯಾರ್ಥಿಗಳಿಗೆ 14 ದಿನ ಕ್ವಾರಂಟೈನ್ ಮುಗಿಸಿದ ನಂತರ ತರಗತಿಗೆ ಪ್ರವೇಶ ಕಲ್ಪಿಸಬೇಕು. ಹೀಗೆ ಅಗತ್ಯ ಎಚ್ಚರಿಕಾ ಕ್ರಮಗಳನ್ನು ಕೈಗೊಳ್ಳುವುದರೊಂದಿಗೆ ಕಾಲೇಜು ಮತ್ತು ವಿಶ್ವವಿದ್ಯಾನಿಲಯಗಳ ತರಗತಿಯನ್ನು ಆರಂಭಿಸಲು ಉನ್ನತ ಶಿಕ್ಷಣ ಇಲಾಖೆ ಸೂಚನೆ ನೀಡಿದೆ.
.