ಕೊರೊನಾ ವಾರಿಯರ್ಸ್‍ಗೆ ಉಪಾಹಾರ ವಿತರಣೆ
ಮೈಸೂರು ಗ್ರಾಮಾಂತರ

ಕೊರೊನಾ ವಾರಿಯರ್ಸ್‍ಗೆ ಉಪಾಹಾರ ವಿತರಣೆ

April 30, 2020

ನಂಜನಗೂಡು, ಏ.26(ರವಿ)- ಜಗ ಜ್ಯೋತಿ ಬಸವೇಶ್ವರ ಜಯಂತಿ ಅಂಗವಾಗಿ ತಾಲೂಕಿನಲ್ಲಿ ಕೊರೊನಾ ನಿಯಂತ್ರಿಸಲು ಹಗಲಿರುಳು ಶ್ರಮಿಸುತ್ತಿರುವ ಕಂದಾಯ, ಪೊಲೀಸ್, ಆರೋಗ್ಯ ಇಲಾಖೆ ಹಾಗೂ ನಗರಸಭೆ ಸಿಬ್ಬಂದಿ ಸೇರಿದಂತೆ 1000ಕ್ಕೂ ಹೆಚ್ಚು ಮಂದಿಗೆ ಭಾನುವಾರ ಬೆಳಿಗ್ಗೆ ಅಖಿಲ ಭಾರತ ವೀರಶೈವ -ಲಿಂಗಾಯತರ ಮಹಾಸಭಾ ನಂಜನಗೂಡು ಘಟಕ ದಿಂದ ಉಪಾಹಾರ ವಿತರಿಸಲಾಯಿತು

ತಾಲೂಕು ಘಟಕದ ಅಧ್ಯಕ್ಷ ದೇವ ನೂರು ಬಿ.ಮಹದೇವಪ್ಪ ಮಾತನಾಡಿ, ಬಸವಣ್ಣರವರು ಹೇಳಿದಂತೆ ಕಾಯಕವೇ ಕೈಲಾಸವೆಂಬಂತೆ ಕೊರೊನಾವನ್ನು ಮುಕ್ತ ಮಾಡಲು ಪ್ರಮುಖ ಇಲಾಖೆಗಳು ಹಗಲಿ ರುಳು ಶ್ರಮಿಸುತ್ತಿವೆ. ಜಯಂತಿ ಅಂಗ ವಾಗಿ ಅವರಿಗೆ ಉಪಾಹಾರ ನೀಡಿದ್ದೇವೆ. ಜಯಂತಿ ಸಂದರ್ಭದಲ್ಲಿ ಕೊರೊನಾ ಮುಕ್ತವಾಗಲಿ ಎಂದು ಹಾರೈಸುತ್ತೇವೆ.

ಇದೇ ಸಂದರ್ಭ ನಗರಸಭಾ ಆಯುಕ್ತ ಕರಿಬಸವಯ್ಯ, ಉಪಾಧ್ಯಕ್ಷ ಚಿನ್ನಸ್ವಾಮಿ, ಉಪಾಧ್ಯಕ್ಷೆ ಮಂಜುಳ ಮಧು, ಪ್ರಧಾನ ಕಾರ್ಯದರ್ಶಿ ಬದವಾಳು ಮಂಜು, ಖಜಾಂಚಿ ಮಾದು, ಸಹ ಕಾರ್ಯ ದರ್ಶಿ ಶಿವಬಸವಪ್ಪ, ನಗರ ಘಟಕದ ಅಧ್ಯಕ್ಷ ಶಿವನಾಗಪ್ಪ, ಪದಾಧಿಕಾರಿಗಳಾದ ಗೌ. ನಾಗಣ್ಣ, ನಂದಿನಿ, ಕೋಮಲ, ಅಭಿ ಇದ್ದರು.

Translate »