ಕೇಂದ್ರ ಸ್ಥಾನದಲ್ಲಿರದೆ ಓಡಾಡುತ್ತಿದ್ದ 14 ಅಧಿಕಾರಿ, ನೌಕರರಿಗೆ ಡಿಸಿ ನೋಟಿಸ್
ಚಾಮರಾಜನಗರ

ಕೇಂದ್ರ ಸ್ಥಾನದಲ್ಲಿರದೆ ಓಡಾಡುತ್ತಿದ್ದ 14 ಅಧಿಕಾರಿ, ನೌಕರರಿಗೆ ಡಿಸಿ ನೋಟಿಸ್

May 1, 2020

ಚಾಮರಾಜನಗರ, ಏ.30- ಕೇಂದ್ರ ಸ್ಥಾನದಲ್ಲಿ ವಾಸ್ತವ್ಯ ಹೂಡದೇ ಚಾಮರಾಜನಗರ ತಾಲೂಕಿನ ಬಾಣಹಳ್ಳಿ ಚೆಕ್‍ಪೆÇೀಸ್ಟ್ ಮೂಲಕ ಪ್ರತಿದಿನ ಮೈಸೂರಿಗೆ ಸಂಚರಿಸುತ್ತಿರುವ 14 ಅಧಿಕಾರಿ, ನೌಕರರಿಗೆ ಜಿಲ್ಲಾಧಿಕಾರಿ ಡಾ. ಎಂ.ಆರ್. ರವಿ ಕಾರಣ ಕೇಳಿ ನೋಟಿಸ್ ಜಾರಿ ಮಾಡಿದ್ದಾರೆ.

ನಗರದ ಜಿಲ್ಲಾ ಶಿಕ್ಷಣ ತರಬೇತಿ ಕೇಂದ್ರದ ಪ್ರಾಂಶು ಪಾಲರಾದ ಭಾರತಿ, ಯಳಂದೂರು ತಾಲೂಕಿನ ಶಿಶು ಅಭಿವೃದ್ಧಿ ಅಧಿಕಾರಿ ಸೋಮಶೇಖರ್, ಪ್ರಥಮ ದರ್ಜೆ ಸಹಾಯಕ ಎಂ.ಆರ್. ರವೀಂದ್ರ, ಚಾಮರಾಜ ನಗರದ ಪಂಚಾಯತ್‍ರಾಜ್ ಇಂಜಿನಿಯರಿಂಗ್ ವಿಭಾಗದ ಸಹಾಯಕ ಎಂಜಿನಿಯರ್ ಚಿದಾನಂದ್, ಗುಂಡ್ಲುಪೇಟೆ ತಾಲೂಕಿನ ಖಜಾನೆಯ ಸಹಾಯಕ ನಿರ್ದೇಶಕರಾದ ನಾಗರತ್ನ, ನಗರದ ಜಿಲ್ಲಾ ಶಿಕ್ಷಣ ತರಬೇತಿ ಕೆಂದ್ರದ ಸಹಾಯಕ ಸಾಂಖ್ಯಿಕ ಅಧಿಕಾರಿ ವೆಂಕಟರಾವ್, ಕೆಆರ್‍ಐಡಿಎಲ್ ಸಹಾಯಕ ಕಾರ್ಯಪಾಲಕ ಅಭಿಯಂತರ ಮಹದೇವಸ್ವಾಮಿ, ನಗರದ ತೋಟಗಾರಿಕೆ ಇಲಾಖೆಯ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕ ಎನ್.ಎಸ್. ಫಣೀಂದ್ರ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ವಸತಿ ನಿಲಯ ಮೇಲ್ವಿಚಾರಕ ಅಶ್ವಥ್ ನಾರಾಯಣ್, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಗುಮಾಸ್ತ ರಾಜಣ್ಣ, ಸಹಾಯಕ ಶ್ರೀನಿವಾಸ್, ಪಿಎಲ್‍ಡಿ ಬ್ಯಾಂಕ್ ಗುಮಾಸ್ತ ಶಶಿ, ಚಾಮರಾಜನಗರ ತಾಲೂಕು ಕುದೇರಿನ ಎಸ್‍ಬಿಐ ಶಾಖೆಯ ಅಸೋ ಷಿಯೆಟ್ ಮಂಜುನಾಥ್ ಅವರಿಗೆ ಶೋಕಾಸ್ ನೋಟಿಸ್ ಜಾರಿ ಮಾಡಲಾಗಿದೆ. ಅಲ್ಲದೆ, ಚಾಮ ರಾಜನಗರ ತಾಲೂಕು ಉಪನೋಂದಣಾಧಿಕಾರಿ ರಾಧ, ಕೊಳ್ಳೇಗಾಲ ತಾಲೂಕು ಉಪ ನೋಂದಣಾ ಧಿಕಾರಿ ಪಿ.ಆರ್. ರೇಖಾ, ಹನೂರು ತಾಲೂಕು ಉಪನೋಂದಣಾಧಿಕಾರಿ ನಂದೀಶ್, ಕೊಳ್ಳೇಗಾಲ ಉಪನೋಂದಣಾಧಿಕಾರಿ ಕಚೇರಿಯ ದ್ವಿತೀಯ ದರ್ಜೆ ಸಹಾಯಕಿ ಗೀತಾ ಅವರು ಕೇಂದ್ರ ಸ್ಥಾನದಲ್ಲಿ ವಾಸ್ತವ್ಯ ಹೂಡದೇ ಸ್ವಂತ ಊರಿಗೆ ಪ್ರತಿದಿನ ತೆರಳಲು ಅನುಮತಿ ನೀಡಿರುವ ಜಿಲ್ಲಾ ನೋಂದಣಾಧಿಕಾರಿ ಹಂಸವೇಣಿ ಅವರಿಗೂ ಜಿಲ್ಲಾಧಿಕಾರಿ ನೋಟಿಸ್ ಜಾರಿ ಮಾಡಿದ್ದಾರೆ.

ಕೋವಿಡ್-19ರ ಮುಂಜಾಗ್ರತಾ ಕ್ರಮಗಳ ಹಿನ್ನೆಲೆಯಲ್ಲಿ ಜಿಲ್ಲಾ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು ಹಾಗೂ ಸಿಬ್ಬಂದಿ ಕೇಂದ್ರಸ್ಥಾನ ದಲ್ಲಿಯೇ ವಾಸ್ತವ್ಯ ಹೂಡಿ ಕರ್ತವ್ಯ ನಿರ್ವಹಿಸಲು ಸೂಚಿಸಲಾಗಿದೆ. ಆದರೂ ಇಂತಹ ತುರ್ತು ಸಂದರ್ಭದಲ್ಲಿ ಕೇಂದ್ರಸ್ಥಾನದಲ್ಲಿ ವಾಸ್ತವ್ಯ ಹೂಡದೇ ಬಾಣಹಳ್ಳಿ ಚೆಕ್‍ಪೆÇೀಸ್ಟ್ ಮೂಲಕ ಚಾಮ ರಾಜನಗರ-ಮೈಸೂರು ನಡುವೆ ಸಂಚರಿಸುತ್ತಿರುವುದು ಕಂಡುಬಂದಿದೆ. ಆದೇಶ ಉಲ್ಲಂಘಿಸಿರುವ ಹಿನ್ನೆಲೆ ಯಲ್ಲಿ ಕಾರಣ ಕೇಳಿ ಸಂಬಂಧಪಟ್ಟ 14 ಅಧಿಕಾರಿ, ನೌಕರರಿಗೆ ನೋಟಿಸ್ ಜಾರಿ ಮಾಡಿರುವ ಜಿಲ್ಲಾಧಿ ಕಾರಿ ಡಾ. ಎಂ.ಆರ್. ರವಿ ಅವರು, ನೋಟಿಸ್ ತಲುಪಿದ 24 ಗಂಟೆಯೊಳಗೆ ವಿವರಣೆ ನೀಡುವಂತೆ ಸೂಚಿಸಿದ್ದಾರೆ. ಇಲ್ಲವಾದಲ್ಲಿ ಶಿಸ್ತಿನ ಕ್ರಮ ಕೈಗೊಳ್ಳ ಲಾಗುವುದೆಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.

Translate »