ಇಂದು 15 ಸಾವಿರ ಬಡವರಿಗೆ ಆಹಾರ ಕಿಟ್ ವಿತರಣೆ
ಮಂಡ್ಯ

ಇಂದು 15 ಸಾವಿರ ಬಡವರಿಗೆ ಆಹಾರ ಕಿಟ್ ವಿತರಣೆ

May 5, 2021

ಶ್ರೀರಂಗಪಟ್ಟಣ, ಮೇ 4(ವಿನಯ್ ಕಾರೇಕುರ)- ಶ್ರೀರಂಗಪಟ್ಟಣದ ಕ್ಷೇತ್ರದ 15 ಸಾವಿರಕ್ಕೂ ಹೆಚ್ಚು ಪಕ್ಷಾತೀತವಾಗಿ ಕಡು ಬಡವರಿಗೆ ದಿನಸಿ, ತರಕಾರಿ, ಮಾಸ್ಕ್ ಹಾಗೂ ಸ್ಯಾನಿಟೈಸರ್ ಅನ್ನು ಮಾಜಿ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ಅವರಿಂದ ನಾಳೆ (ಮೇ5) ವಿತರಿಸ ಲಾಗುವುದು ಎಂದು ಶಾಸಕ ರವೀಂದ್ರ ಶ್ರೀಕಂಠಯ್ಯ ಹೇಳಿದರು.

ಪಟ್ಟಣದ ಶಾಸಕ ಕಚೇರಿಯಲ್ಲಿ ಮಾತ ನಾಡಿದ ಶಾಸಕರು ನಾಳೆ(ಮೇ.5) ಶ್ರೀರಂಗ ಪಟ್ಟಣ ಕ್ಷೇತ್ರದ ಯಾವುದೇ ಜಮೀನು ಇಲ್ಲದ ಬಿಪಿಎಲ್ ಕಾರ್ಡನ್ನೇ ನಂಬಿ ಕೊಂಡಿರುವ ಕಡು ಬಡತನದ ಸುಮಾರು 15 ಸಾವಿರ ಕುಟುಂಬ ಗಳಿಗೆ ವೈಯ ಕ್ತಿಕವಾಗಿ 5 ಕೆಜಿ ಅಕ್ಕಿ ಹಾಗೂ 15ಕೆಜಿ ತರಕಾರಿ ಜೊತೆಗೆ ಮಾಸ್ಕ್ ಹಾಗೂ ಸ್ಯಾನಿಟೈಸರ್‍ಗಳನ್ನು ಉಚಿತವಾಗಿ ನೀಡುತ್ತಿದ್ದು, ಕಾರ್ಯಕ್ರಮಕ್ಕೆ ಮಾಜಿ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ನಾಳೆ(ಮೇ.5) ಪಟ್ಟಣದ ರಂಗನಾಥಸ್ವಾಮಿ ದೇವಸ್ಥಾನದ ಆವರಣದಲ್ಲಿ ಚಾಲನೆ ನೀಡಲಿದ್ದಾರೆ.

ತಾಲೂಕಿನ 21 ಗ್ರಾಮ ಪಂಚಾಯ್ತಿಯ ಅಧಿಕಾರಿಗಳು ಹಾಗೂ ಕೆಲ ಆಯ್ದ ಜನಪ್ರತಿನಿಧಿಗಳು ಮಾತ್ರ ನಾಳೆ ನಡೆ ಯುವ ವಿತರಣಾ ಕಾರ್ಯಕ್ರಮಕ್ಕೆ ಬಂದು ಆಯಾ ಗ್ರಾಮ ಪಂಚಾಯ್ತಿಗಳಿಗೆ ನಿಗದಿ ಪಡಿಸಿರುವ ದಿನಸಿ ಕಿಟ್ ಅನ್ನು ಪಡೆಯಬೇಕು, ಆಯಾ ಅಧಿಕಾರಿಗಳು ಅವರವರ ಗ್ರಾಮಗಳಲ್ಲಿರುವ ಕಡು ಬಡ ಕುಟುಂಬಗಳ ಮನೆಗೆ ಈ ದಿನಸಿ ಕಿಟ್ ಅನ್ನು ವಿತರಣೆ ಮಾಡಬೇಕು ಎಂದರು.

ಶ್ರೀರಂಗಪಟ್ಟಣ ತಾಲೂಕಿನ ಸಾರ್ವ ಜನಿಕ ಆಸ್ಪತ್ರೆಯಲ್ಲಿ ಕಾರ್ಯ ನಿರ್ವಹಿ ಸುತ್ತಿರುವ ದಾದಿಯರಿಗೂ ನಾಳೆ ನಡೆ ಯುವ ಕಾರ್ಯಕ್ರಮದಲ್ಲಿ ವೈಯಕ್ತಿಕವಾಗಿ ಅವರಿಗೆಲ್ಲಾ ಸಿಎಫ್‍ಟಿಆರ್‍ಐನಿಂದ ಪೌಷ್ಠಿಕಾಂಶ ಹೊಂದಿರುವ ಆಹಾರ ಹಾಗೂ ವೈಯಕ್ತಿಕ ಸಹಾಯ ಮಾಡಿ ಸನ್ಮಾನಿಸುವ ಕಾರ್ಯಕ್ರಮ ಹಮ್ಮಿ ಕೊಳ್ಳಲಾಗಿದೆ ಎಂದರು. ಈ ವೇಳೆ ಪುರಸಭೆ ಉಪಾದ್ಯಕ್ಷ ಎಸಿಸಿ ಪ್ರಕಾಶ್, ಮುಖಂಡರುಗಳದ ನೆಲಮನೆ ದಯಾನಂದ್, ಶ್ರೀನಿವಾಸ ಅಗ್ರಹಾರ ರಾಮ ಕೃಷ್ಣ, ಬಾಬುರಾಯನಕೋಪ್ಪಲು ತಿಲಕ್ ಕುಮಾರ್, ಹರ್ಷ, ಭಾಸ್ಕರ್, ನಂದನ್ ಸೇರಿದಂತೆ ಇತರರು ಇದ್ದರು.

Translate »