ವಾರ್ಡ್ 48ರಲ್ಲಿ ಪಾಲಿಕೆ ಸದಸ್ಯೆಯಿಂದ ದಿನಸಿ ಕಿಟ್ ವಿತರಣೆ
ಮೈಸೂರು

ವಾರ್ಡ್ 48ರಲ್ಲಿ ಪಾಲಿಕೆ ಸದಸ್ಯೆಯಿಂದ ದಿನಸಿ ಕಿಟ್ ವಿತರಣೆ

April 25, 2020

ಮೈಸೂರು, ಏ.24(ಪಿಎಂ)- ಮೈಸೂರು ಮಹಾನಗರ ಪಾಲಿಕೆ ವಾರ್ಡ್ 48ರ (ಜಯನಗರ) ವ್ಯಾಪ್ತಿಯ ಚಿನ್ನಗಿರಿ ಕೊಪ್ಪ ಲಿನ 600 ಕುಟುಂಬಗಳಿಗೆ ವಾರ್ಡಿನ ಪಾಲಿಕೆ ಸದಸ್ಯೆ ಎಂ.ಎಸ್.ಶೋಭಾ ತಮ್ಮ ಸ್ವಂತ ವೆಚ್ಚದಲ್ಲಿ ದಿನಸಿ ಕಿಟ್‍ಗಳನ್ನು ವಿತ ರಣೆ ಮಾಡಿದರು.

ಮೈಸೂರಿನ ಜಯನಗರದ ಚಿನ್ನಗಿರಿ ಕೊಪ್ಪಲಿನ ಪೈ.ಬಸವಯ್ಯ ಸಮುದಾಯ ಭವನದ ಆವರಣದಲ್ಲಿ ದಿನಸಿ ಕಿಟ್ ಗಳನ್ನು ಶುಕ್ರವಾರ ವಿತರಿಸಿದ ಅವರು, ವಾರ್ಡ್ ವ್ಯಾಪ್ತಿಯಲ್ಲಿ ಲಾಕ್‍ಡೌನ್ ಅವಧಿಯಲ್ಲಿ ನಿರಾಶ್ರಿತರಿಗೆ ನಿರಂತರವಾಗಿ ನಮ್ಮ ತಂಡದ ವತಿಯಿಂದ ದಿನಸಿ ಕಿಟ್ ವಿತರಿಸಲಾಗು ತ್ತಿದೆ. ಈವರೆಗೆ 1200ಕ್ಕೂ ಹೆಚ್ಚು ಕಿಟ್ ಗಳನ್ನು ಬಡಕುಟುಂಬಗಳಿಗೆ ನೀಡಲಾ ಗಿದೆ. ಶುಕ್ರವಾರ ಚಿನ್ನಗಿರಿಕೊಪ್ಪಲಿನ 600 ಬಡ ಕುಟುಂಬಗಳನ್ನು ಗುರುತಿಸಿ ದಿನಸಿ ಕಿಟ್ ವಿತರಣೆ ಮಾಡಲಾಗಿದೆ ಎಂದರು.

5 ಕೆಜಿ ಅಕ್ಕಿ, ತಲಾ 1 ಕೆಜಿ ಬೇಳೆ, ಸಕ್ಕರೆ, ಗೋಧಿ, ಮೈದಾ ಹಿಟ್ಟು, ರವೆ, ಉಪ್ಪು, ಈರುಳ್ಳಿ, ಅರ್ಧ ಲೀ. ಅಡುಗೆ ಎಣ್ಣೆ, ಬಟ್ಟೆ ಸೋಪು, ಮೈ ಸೋಪು, 2 ಅಚ್ಚು ಬೆಲ್ಲ ಒಳಗೊಂಡ ಕಿಟ್‍ಗಳನ್ನು ವಿತರಣೆ ಮಾಡ ಲಾಗಿದೆ ಎಂದು ಅವರು ತಿಳಿಸಿದರು. ಪಾಲಿಕೆ ಸದಸ್ಯೆ ಎಂ.ಎಸ್.ಶೋಭಾ ಅವರ ತಂದೆ ಬಿ.ಎಲ್.ಶಂಕರ್, ಮುಖಂಡರಾದ ಕೀರ್ತಿ, ರವಿಕುಮಾರ್, ಹೇಮಂತ್, ಕೀರ್ತಿ, ಪುಟ್ಟು, ಸಾಗರ್ ಮತ್ತಿತರರಿದ್ದರು.

Translate »