ಕುವೆಂಪುಗೆ `ಭಾರತ ರತ್ನ’ಕ್ಕೆ ಆಗ್ರಹ
ಮೈಸೂರು

ಕುವೆಂಪುಗೆ `ಭಾರತ ರತ್ನ’ಕ್ಕೆ ಆಗ್ರಹ

December 30, 2020

ಮೈಸೂರು, ಡಿ.29- ರಾಷ್ಟ್ರಕವಿ ಕುವೆಂಪು ಅವರಿಗೆ `ಭಾರತ ರತ್ನ’ ಪುರಸ್ಕಾರ ಸಲ್ಲಬೇಕೆಂದು ಮಾಜಿ ಮೇಯರ್ ಸಂದೇಶ್ ಸ್ವಾಮಿ ಆಶಿಸಿದ್ದಾರೆ.

ರಾಷ್ಟ್ರಕವಿ ಕುವೆಂಪು ಅವರ ಸಾಹಿತ್ಯ, ಶೈಕ್ಷಣಿಕ ಸೇವೆ ಅಗಾಧ ವಾದದ್ದು. ನಾಡು, ದೇಶದಲ್ಲಷ್ಟೇ ಅಲ್ಲ ವಿಶ್ವದೆಲ್ಲೆಡೆ ಕುವೆಂಪು ಅವರ ಸಾಧನೆ ಪಸರಿಸಿದೆ. `ಶ್ರೀ ರಾಮಾಯಣ ದರ್ಶನಂ’ ಮಹಾಕಾವ್ಯದ ಮೂಲಕ ಪರಂಪರೆಯ ಕೀರ್ತಿ ಹೆಚ್ಚಿಸಿದ್ದಾರೆ. `ಮಲೆಗಳಲ್ಲಿ ಮದುಮಗಳು’ ಇನ್ನಿತರ ಕಾದಂಬರಿಗಳ ಮೂಲಕ ಸಮಾಜಕ್ಕೆ ಮಹತ್ವದ ಸಂದೇಶ ಸಾರಿದ್ದಾರೆ. ಕುವೆಂಪು ಅವರ `ಜೈ ಭಾರತ ಜನನಿಯ ತನುಜಾತೆ…’ ಗೀತೆಯನ್ನು ನಾಡಗೀತೆ ಯಾಗಿ ಗೌರವಿಸುತ್ತಿದ್ದೇವೆ. ಜ್ಞಾನಪೀಠ, ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಸೇರಿದಂತೆ ಹಲವು ಪ್ರಶಸ್ತಿ, ಪುರಸ್ಕಾರಗಳು ಸಂದಿವೆ. ಅಂತೆಯೇ `ಭಾರತ ರತ್ನ’ ಪುರಸ್ಕಾರವೂ ಸಲ್ಲಬೇಕು. ನಾಡಿನ ಹೆಮ್ಮೆಯಾಗಿರುವ ಕುವೆಂಪು ಅವರಿಗೆ `ಭಾರತ ರತ್ನ’ ನೀಡುವಂತೆ ರಾಜ್ಯ ಸರ್ಕಾರ, ಕೇಂದ್ರಕ್ಕೆ ಶಿಫಾರಸು ಮಾಡಬೇಕೆಂದು ಪತ್ರಿಕಾ ಪ್ರಕಟಣೆಯಲ್ಲಿ ಆಗ್ರಹಿಸಿದ್ದಾರೆ.
\

 

 

Translate »