ಕಾಮಗಾರಿಯೊಂದರ ವಿಚಾರದಲ್ಲಿ ಕಾಲಹರಣ ಚರ್ಚೆ!
ಮೈಸೂರು

ಕಾಮಗಾರಿಯೊಂದರ ವಿಚಾರದಲ್ಲಿ ಕಾಲಹರಣ ಚರ್ಚೆ!

December 30, 2020

ಮೈಸೂರು,ಡಿ.29(ಎಸ್‍ಬಿಡಿ)- ಕಾಮ ಗಾರಿಯೊಂದರ ಬದಲಾವಣೆಗೆ ವಿರೋಧ ವ್ಯಕ್ತಪಡಿಸಿ ಮೈಸೂರು ನಗರ ಪಾಲಿಕೆ ಕೌನ್ಸಿಲ್ ಸಭೆಯಲ್ಲಿ ಕಾಂಗ್ರೆಸ್ ಸದಸ್ಯರು ಪ್ರತಿಭಟನೆ ನಡೆಸಿದ ಪ್ರಸಂಗ ನಡೆಯಿತು.

ಕೇಂದ್ರ ಸರ್ಕಾರದ 15ನೇ ಹಣಕಾಸು ಆಯೋಗದ ಅನುದಾನದಲ್ಲಿ ಕೈಗೊಳ್ಳುವ ಯೋಜನೆಗಳಿಗೆ ಸಲಹಾ ಸಮಿತಿ ಅನು ಮೋದಿಸಿದ್ದು, ಕೌನ್ಸಿಲ್ ರೀಡ್ ಅಂಡ್ ರೆಕಾರ್ಡ್‍ಗಾಗಿ ಇಂದಿನ ಸಭೆಯಲ್ಲಿ ಕಾರ್ಯ ಸೂಚಿ ಪ್ರಸ್ತಾಪಿಸಲಾಗಿತ್ತು. ಅದರಲ್ಲಿ 1.80 ಕೋಟಿ ರೂ. ಅನುದಾನದಲ್ಲಿ ಸಿವೇಜ್ ಫಾರ್ಮ್‍ಗೆ ಕಾಂಪೌಂಡ್ ನಿರ್ಮಾಣ ಉದ್ದೇ ಶಿತ ಕಾಮಗಾರಿ ಸುದೀರ್ಘ ಚರ್ಚೆ ಹಾಗೂ ಗದ್ದಲಕ್ಕೆ ಕಾರಣವಾಯಿತು.

ಈ ವಿಚಾರವಾಗಿ ಬಿಜೆಪಿ ಸದಸ್ಯ ಬಿ.ವಿ. ಮಂಜುನಾಥ್, 15 ಹಣಕಾಸು ಆಯೋ ಗದ ಅನುದಾನ ಬಳಕೆ ಸಂಬಂಧ ಕೇಂದ್ರ ಸರ್ಕಾರ ನೀಡಿರುವ ಮಾರ್ಗಸೂಚಿಗೆ ವಿರುದ್ಧವಾಗಿ ಕಾಂಪೌಂಡ್ ನಿರ್ಮಾಣ ಕಾಮಗಾರಿ ಯೋಜಿಸಲಾಗಿದೆ. ಅನು ದಾನದ ಶೇ.25ರಷ್ಟನ್ನು ಘನವಸ್ತು ತ್ಯಾಜ್ಯ ನಿರ್ವಹಣೆ ಸಂಬಂಧಿತ ಕೆಲಸಗಳಿಗೆ ಮಾತ್ರ ಬಳಕೆ ಮಾಡಬೇಕು. ಆದರೆ ಆ ಹಣದಲ್ಲಿ ಕಾಂಪೌಂಡ್ ನಿರ್ಮಾಣ ಮಾಡಲು ನಿರ್ಣಯಿಸಿದರೆ ಅದಕ್ಕೆ ಜಿಲ್ಲಾಧಿಕಾರಿಗಳ ಅನುಮೋದನೆ ಸಿಗುವುದಿಲ್ಲ. ಅದು ಸಿವಿಲ್ ಕಾಮಗಾರಿಯೆಂದು ಕಾರ್ಯಯೋಜನೆ ತಿರಸ್ಕøತವಾಗಿ, ಯೋಜನೆಗಳ ಅನುಷ್ಠಾನ ಇನ್ನೂ 6 ತಿಂಗಳು ತಡವಾಗಬಹುದು. ಹಾಗಾಗಿ ರೀಡ್ ಅಂಡ್ ರೆಕಾರ್ಡ್ ಹಂತ ದಲ್ಲೇ ಕಾಮಗಾರಿ ಬದಲಿಸುವುದು ಒಳ್ಳೆ ಯದು. ಈ ನಿಟ್ಟಿನಲ್ಲಿ ಚಾಮುಂಡಿಬೆಟ್ಟ ತಪ್ಪಲಿನ ಸತ್ಯಹರಿಶ್ಚಂದ್ರ ರಸ್ತೆ ಹಾಗೂ ಹೆಬ್ಬಾಳಿನ ಹೈಟೆನ್ಷನ್ ರಸ್ತೆಯಲ್ಲಿ ಜೈವಿಕ ಅನಿಲ(ಬಯೋ ಗ್ಯಾಸ್)ಘಟಕ ಸ್ಥಾಪನೆಗೆ ಯೋಜನೆ ರೂಪಿಸಬೇಕು. ರಾಜ್ಯದಲ್ಲೇ ಮೊದಲಿಗೆ ಈ ಘಟಕ ಸ್ಥಾಪಿಸಿದಂತೆಯೂ ಆಗುತ್ತದೆ ಎಂದು ಒತ್ತಾಯಿಸಿದರು.

ಇದಕ್ಕೆ ಪೂರಕವಾಗಿ ಮಾತನಾಡಿದ ಜೆಡಿಎಸ್ ಸದಸ್ಯೆ ಪ್ರೇಮಾ ಶಂಕರೇಗೌಡ, ಈಗಾಗಲೇ ತುಂಬಾ ವಿಳಂಬವಾಗಿದೆ. ಪ್ರಸ್ತಾ ವನೆ ವಾಪಸ್ಸಾದರೆ ಇನ್ನೂ ತೊಂದರೆ ಯಾಗುತ್ತದೆ. ಹಾಗಾಗಿ ಮಾರ್ಗಸೂಚಿ ಯನ್ವಯ ಸೂಕ್ತ ಕಾಮಗಾರಿಯನ್ನು ಪ್ರಸ್ತಾಪಿ ಸಬೇಕು. ಕಾಂಪೌಂಡ್ ನಿರ್ಮಾಣ ಬದ ಲಾಗಿ ಬಯೋಗ್ಯಾಸ್ ಘಟಕ ಕಾಮಗಾರಿಯೇ ಸೂಕ್ತ ಎಂದು ಅಭಿಪ್ರಾಯಿಸಿದರು.

ಎಂ.ಯು.ಸುಬ್ಬಯ್ಯ, ರಮೇಶ್, ಎಸ್‍ಬಿಎಂ ಮಂಜು ಸೇರಿದಂತೆ ಬಿಜೆಪಿ ಹಾಗೂ ಜೆಡಿಎಸ್‍ನ ಹಲವು ಸದಸ್ಯರು ಬಯೋ ಗ್ಯಾಸ್ ಘಟಕ ಕಾಮಗಾರಿ ಸೇರ್ಪ ಡೆಗೆ ಆಗ್ರಹಿಸಿದರು. ಆದರೆ ಮಾಜಿ ಮೇಯರ್‍ಗಳಾದ ಪುಷ್ಪಲತಾ ಜಗ ನ್ನಾಥ್, ಅಯೂಬ್‍ಖಾನ್, ಆರಿಫ್ ಹುಸೇನ್ ಸೇರಿದಂತೆ ಕಾಂಗ್ರೆಸ್‍ನ ಬಹುತೇಕ ಸದ ಸ್ಯರು ಕಾಮಗಾರಿ ಬದಲಾವಣೆ ಪ್ರಸ್ತಾಪಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದರು.

ಇದರ ನಡುವೆ ಮೇಯರ್ ತಸ್ನೀಂ ಮಾತನಾಡಿ, ಮಾರ್ಗಸೂಚಿಯಂತೆ ಕಾಂಪೌಂಡ್ ನಿರ್ಮಾಣ ಕಾಮಗಾರಿ ಗಿಂತ ಬಯೋ ಗ್ಯಾಸ್ ಘಟಕ ಸೂಕ್ತ. ಸ್ವಚ್ಛ ಸರ್ವೇಕ್ಷಣೆಯಲ್ಲಿ 50 ಅಂಕ ಇರುವುದ ರಿಂದ ಅನುಕೂಲವಾಗುತ್ತದೆ. ಮುಂದಿನ ಬಜೆಟ್‍ನಲ್ಲಿ ಕಾಂಪೌಂಡ್ ನಿರ್ಮಾಣಕ್ಕೆ ಸಮರ್ಪಕ ಅನುದಾನ ಮೀಸಲಿಡೋಣ ಎಂದು ಬಯೋ ಗ್ಯಾಸ್ ಘಟಕ ಕಾಮ ಗಾರಿ ಸೇರ್ಪಡೆಗೆ ನಿರ್ಣಯ ಪ್ರಕಟಿಸಿದರು.

ಇದರಿಂದ ಮತ್ತಷ್ಟು ಆಕ್ರೋಶಿತರಾದ ಕಾಂಗ್ರೆಸ್ ಸದಸ್ಯರು ಮೇಯರ್ ಪೀಠ ದೆದುರು ಜಮಾಯಿಸಿ, ಪ್ರತಿಭಟನೆ ನಡೆಸಿ ದರು. `ಬೇಕೆ ಬೇಕು ನ್ಯಾಯ ಬೇಕು’ ಘೋಷಣೆ ಕೂಗಿದರು. ಇದರ ನಡುವೆಯೂ ಅನೇಕ ಕಾರ್ಯಸೂಚಿಗಳಿಗೆ ಕೌನ್ಸಿಲ್ ಒಪ್ಪಿಗೆ ಪಡೆದ ಮೇಯರ್, ಗದ್ದಲ ಹೆಚ್ಚಾಗಿದ್ದ ರಿಂದ 15 ನಿಮಿಷ ಸಭೆ ಮುಂದೂಡಿದರು.

ಸಭೆ ಪುನಾರಂಭವಾದಾಗ ಕೌನ್ಸಿಲ್ ಕಾರ್ಯದರ್ಶಿ ರಂಗಸ್ವಾಮಿ ಸ್ಪಷ್ಟನೆ ನೀಡಿ ದರು. ಪಾಲಿಕೆ ಆಯುಕ್ತ ಗುರುದತ್ ಹೆಗಡೆ ಮಾತನಾಡಿ, 15ನೇ ಹಣಕಾಸು ಆಯೋ ಗದ ಅನುದಾನ ಬಳಕೆ ಯೋಜನೆಯನ್ನು ಜಿಲ್ಲಾಧಿಕಾರಿಗಳ ಅನುಮೋದನೆಗೆ ಕಳು ಹಿಸಲಾಗಿದೆ. ಹಾಗಾಗಿ ಉದ್ದೇಶಿತ ಕಾಂಪೌಂಡ್ ನಿರ್ಮಾಣ ಕಾಮಗಾರಿ ಬದಲಿಸುವುದು ಸರಿಯಾಗುವುದಿಲ್ಲ. ಬಯೋ ಗ್ಯಾಸ್ ಘಟಕ ಯೋಜನೆಗೆ ಹೊಸದಾಗಿ ವಿಷಯ ಮಂಡಿಸುವುದು ಸೂಕ್ತ ಎಂದು ಅಭಿಪ್ರಾಯಿಸಿದರು.

ಕಡೆಗೆ ಮೇಯರ್ ತಸ್ನೀಂ ಅವರು ಮಾತನಾಡಿ, ಕಾಂಪೌಂಡ್ ಕಾಮಗಾರಿ ಯಿಂದಾಗಿ 15ನೇ ಹಣಕಾಸು ಆಯೋ ಗದ ಅನುದಾನ ಯೋಜನೆ ಜಿಲ್ಲಾಧಿ ಕಾರಿಗಳಿಂದ ತಿರಸ್ಕøತವಾಗಿ ವಾಪಸ್ಸು ಬಂದರೆ ಅದಕ್ಕೆ ಆಯುಕ್ತರು, ಎಸ್‍ಇ, ಇಇ ಹಾಗೂ ಕಾಂಗ್ರೆಸ್ ಸದಸ್ಯರೇ ಹೊಣೆ ಗಾರರು. ಅವಕಾಶವಿಲ್ಲದಿದ್ದರೆ ಕಾಂಪೌಂಡ್ ಕಾಮಗಾರಿ ಮಾತ್ರ ತಡೆ ಹಿಡಿದು, ಉಳಿದ ಯೋಜನೆಗೆ ಅನು ಮೋದನೆ ಸಿಗುವಂತೆ ನಿರ್ವಹಿಸಬೇಕು. ಈ ಕಾಮಗಾರಿ ತಿರಸ್ಕøತವಾದರೆ ಬಯೋ ಗ್ಯಾಸ್ ಘಟಕ ನಿರ್ಮಾಣಕ್ಕೆ ಅನುಮೋ ದಿಸಬೇಕೆಂದು ನಿರ್ಣಯ ಪ್ರಕಟಿಸಿದರು.

\

 

Translate »