ಮೈಸೂರು,ಡಿ.29(ಆರ್‍ಕೆ)- ಸೂಯೇಜ್ ಫಾರಂನಲ್ಲಿ ಬೆಟ್ಟದಂತಿರುವ ಕಸದ ರಾಶಿ ತೆರವುಗೊಳಿಸಲು ಪ್ರಯತ್ನಿಸಿ ಎಂದು ಸಂಸದ ಪ್ರತಾಪ್ ಸಿಂಹ ಅವರು ಪಾಲಿಕೆ ಸದಸ್ಯರಿಗೆ ಸಲಹೆ ನೀಡಿದ್ದಾರೆ.
ಪಾಲಿಕೆ ಕೌನ್ಸಿಲ್ ಸಭೆಯಲ್ಲಿ ಮಾತನಾ ಡಿದ ಅವರು, ಈ ಹಿಂದೆ ಜಿಲ್ಲಾ ಉಸ್ತು ವಾರಿ ಸಚಿವರಾಗಿದ್ದ ವಿ.ಸೋಮಣ್ಣ ಅವರ ಸಲಹೆಯಂತೆ ಕಸದ ರಾಶಿ ತೆರವುಗೊಳಿ ಸುವ ಸಲುವಾಗಿ ಡಿಸಿ ನೇತೃತ್ವದ ಅಧಿಕಾರಿ ಗಳ ತಂಡವು ಉತ್ತರ ಪ್ರದೇಶದ ಪ್ಲಾಂಟ್‍ಗೆ ಭೇಟಿ ನೀಡಿ ಮಾಹಿತಿ ಪಡೆದು ಬಂದಿತ್ತು. ತದನಂತರ ಆ ಬಗ್ಗೆ ಯಾವುದೇ ಪ್ರಕ್ರಿಯೆ ನಡೆಯಲಿಲ್ಲ ಎಂದರು. ಲಕ್ಷಾಂತರ ಟನ್ ಗಟ್ಟಲೆ ಕಸ ಸಂಗ್ರಹವಾಗಿರುವುದರಿಂದ ಸುತ್ತಲಿನ ನಿವಾಸಿಗಳಿಗೆ ತೀವ್ರ ತೊಂದರೆ ಯಾಗಿದೆ. ಶಾಲಾ ಮಕ್ಕಳು ದುರ್ವಾ ಸನೆಯಿಂದ ಮೂರ್ಚೆ ಹೋಗುತ್ತಿದ್ದಾರೆ. ಮೈಸೂರು ನಗರದ ಘನತ್ಯಾಜ್ಯವನ್ನೆಲ್ಲಾ ಒಂದೆಡೆ ಸುರಿದರೆ, ಅಲ್ಲಿ ವಾಸಿಸುವವರು ಮನುಷ್ಯರಲ್ಲವೇ? ಎಂದು ಅವರು ಪ್ರಶ್ನಿಸಿ ದರು. ಈಗಲಾದರೂ ಒಳ್ಳೆಯ ಕಂಪನಿಗೆ ಕಸ ಸಂಸ್ಕರಣೆ ಹಾಗೂ ವಿಲೇವಾರಿಯನ್ನು ವಹಿಸಿ, ಬೆಟ್ಟದಂತೆ ಇರುವ ರಾಶಿ ರಾಶಿ ಕಸ ತೆರವುಗೊಳಿಸದಿದ್ದರೆ, ಅಲ್ಲಿನ ವಾತಾ ವರಣ ಮತ್ತಷ್ಟು ಹಾಳಾಗಿ ಜನರು ಅನಾ ರೋಗ್ಯದಿಂದ ಬಳಲುತ್ತಾರೆ ಎಂದರು.
ತಾವು ಸಂಸದನಾದ ಮೇಲೆ ಮೈಸೂರಿಗೆ ತಂದ ಹಲವು ಅಭಿವೃದ್ಧಿ ಯೋಜನೆಗಳ ಬಗ್ಗೆ ಸುಮಾರು ಅರ್ಧ ಗಂಟೆ ಕಾಲ ಸುದೀರ್ಘವಾಗಿ ವಿವರಿಸಿದ ಸಂಸದರು, ಕೇಂದ್ರ ಸರ್ಕಾರ ತಮಗೆ ಕೇಳಿದ ಯೋಜನೆ ಗಳನ್ನೆಲ್ಲಾ ಮಂಜೂರು ಮಾಡಿಕೊಟ್ಟು ಅನುದಾನ ನೀಡಿದ್ದನ್ನು ಪಾಲಿಕೆ ಸದಸ್ಯ ರಿಗೆ ಮನವರಿಕೆ ಮಾಡಿಕೊಟ್ಟರು.