ಸ್ಥಳೀಯರ ಅಭಿಪ್ರಾಯ ಆಲಿಸಿ ಕೆಸರೆಯಲ್ಲಿ ಕಸಾಯಿ ಖಾನೆ ನಿರ್ಮಾಣ
ಮೈಸೂರು

ಸ್ಥಳೀಯರ ಅಭಿಪ್ರಾಯ ಆಲಿಸಿ ಕೆಸರೆಯಲ್ಲಿ ಕಸಾಯಿ ಖಾನೆ ನಿರ್ಮಾಣ

December 30, 2020

ಮೈಸೂರು, ಡಿ. 29(ಆರ್‍ಕೆ)- ಸ್ಥಳೀಯ ನಿವಾಸಿಗಳ ಅಭಿಪ್ರಾಯ ಪಡೆದು ಮೈಸೂರಿನ ಕೆಸರೆಯಲ್ಲಿ ಕಸಾಯಿ ಖಾನೆ (ಸ್ಲಾಟರ್ ಹೌಸ್) ಸ್ಥಾಪಿಸಲು ಮೈಸೂರು ಮಹಾನಗರ ಪಾಲಿಕೆ ಕೌನ್ಸಿಲ್ ಸಭೆ ನಿರ್ಧರಿಸಿದೆ.

ಮೇಯರ್ ತಸ್ನೀಂ ಅಧ್ಯಕ್ಷತೆಯಲ್ಲಿ ಇಂದು ನಡೆದ ಕೌನ್ಸಿಲ್ ಸಭೆಯಲ್ಲಿ ಮೈಸೂರು ನಗರದ ಸ್ವಚ್ಛತೆ ಹಾಗೂ ಜನರ ಆರೋಗ್ಯದ ದೃಷ್ಟಿಯಿಂದ ಸುವ್ಯವಸ್ಥಿತ ಕಸಾಯಿ ಖಾನೆ ಅಗತ್ಯವಿದ್ದು, ಈ ಹಿಂದೆ ನಿಗದಿಯಾಗಿರುವಂತೆ ಮೈಸೂರಿನ ಕೆಸರೆಯಲ್ಲಿ ವೈಜ್ಞಾನಿಕವಾಗಿ ಕುರಿ-ಮೇಕೆ ಕೊಯ್ದು ಮಾಂಸ ಮಾರಾಟ ಮಾಡಲು ಪ್ರತ್ಯೇಕ ವ್ಯವಸ್ಥೆ ಯಾಗಬೇಕು ಎಂದು ಮಾಜಿ ಮೇಯರ್‍ಗಳಾದ ಆರಿಫ್ ಹುಸೇನ್ ಮತ್ತು ಅಯೂಬ್ ಖಾನ್ ಒತ್ತಾಯಿಸಿದರು.

ಹಿಂದೆ ಮೈಸೂರು ಚಿಕ್ಕದಾಗಿತ್ತು. ಜನಸಂಖ್ಯೆಗನುಗುಣ ವಾಗಿ ಕಡಿಮೆ ಸಂಖ್ಯೆಯ ಕುರಿ-ಮೇಕೆಗಳನ್ನು ಕತ್ತರಿಸುವ ಸಲುವಾಗಿ ಎನ್.ಆರ್.ಮೊಹಲ್ಲಾದ ಕುರಿಮಂಡಿಯಲ್ಲಿ ಕಸಾಯಿ ಖಾನೆ ನಿರ್ಮಿಸಲಾಗಿತ್ತು. ಈಗ ಮೈಸೂರು ಬೃಹ ದಾಕಾರವಾಗಿ ಬೆಳೆದಿರುವುದರಿಂದ ಅಗತ್ಯಕ್ಕನುಗುಣವಾಗಿ ಪ್ರತೀದಿನ 1,500 ರಿಂದ 2,000 ಕುರಿ-ಮೇಕೆಗಳನ್ನು ಕತ್ತರಿಸಲಾಗುತ್ತಿದೆ. ಈಗಿರುವ ಕಸಾಯಿ ಖಾನೆಯಲ್ಲಿ ಸ್ವಚ್ಛತೆ ಕಾಪಾಡಲಾಗುತ್ತಿಲ್ಲ. ಒಳಚರಂಡಿ ಬಂದ್ ಆಗಿ ಆಗಿಂದಾಗ್ಗೆ ದುರ್ವಾಸನೆಯಿಂದ ಸುತ್ತಲಿನ ನಿವಾಸಿಗಳು ಪರಿತಪಿಸುವಂತಾಗಿದೆ ಎಂದು ಅವರು ತಿಳಿಸಿದರು.

ಸಾವಿರಾರು ಕುರಿ-ಮೇಕೆಗಳನ್ನು ಇರಿಸಿಕೊಳ್ಳಲು ಕಿರಿ ದಾದ ಕಸಾಯಿ ಖಾನೆಯಲ್ಲಿ ಸಮಸ್ಯೆಯಾಗಿದೆ. ಕತ್ತರಿಸಿದ ಮಾಂಸವನ್ನು ಸರಿಯಾಗಿ ಸ್ವಚ್ಛ ಮಾಡಲಾಗದ ಕಾರಣ ಜನರಿಗೆ ಉತ್ತಮ ಮಾಂಸ ಒದಗಿಸಲಾಗುತ್ತಿಲ್ಲವಾದ್ದ ರಿಂದ ವಿಶಾಲ ಹಾಗೂ ಸುಸಜ್ಜಿತ ವ್ಯವಸ್ಥೆ ಅತ್ಯಗತ್ಯವಾಗಿದ್ದು, ನಿಮ್ಮ ಮುಂದಾಳತ್ವದಲ್ಲೇ ಈ ಘಟಕ ಸ್ಥಾಪನೆಯಾಗ ಬೇಕೆಂದು ಅಯೂಬ್ ಖಾನ್ ಮತ್ತು ಆರಿಫ್ ಹುಸೇನ್ ಅವರು ಪ್ರತಾಪ್ ಸಿಂಹ ಅವರನ್ನು ಒತ್ತಾಯಿಸಿದರು.

ಸ್ವಚ್ಛತೆ ದೃಷ್ಟಿಯಿಂದ ನೀವು ಹೇಳಿದ ಸುಸ್ಥಿರ ಟ್ರಸ್ಟ್ ಸಂಸ್ಥೆಗೆ ಕಟ್ಟಡ ತ್ಯಾಜ್ಯ ವಿಲೇವಾರಿ ಯೋಜನೆ ಒಪ್ಪಿಸಲು ನಾವೆಲ್ಲಾ ಒಪ್ಪಿಕೊಂಡ ಮೇಲೆ ಅದೇ ಸ್ವಚ್ಛತೆ ದೃಷ್ಟಿ ಯಿಂದ ಸಂಸದರಾದ ನೀವು ಮುಂದೆ ನಿಂತು ಕೆಸರೆ ಯಲ್ಲಿ ಕಸಾಯಿ ಖಾನೆ ಸ್ಥಾಪಿಸಲು ಅನುವು ಮಾಡಿ ಕೊಡಬೇಕೆಂದು ಅವರು ಕೇಳಿಕೊಂಡರು.

ಜಿಲ್ಲಾ ಪಂಚಾಯಿತಿ ಕಚೇರಿಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಅಧ್ಯಕ್ಷತೆಯಲ್ಲಿ ಸ್ಥಳೀ ಯರು ಭಾರೀ ವಿರೋಧ ವ್ಯಕ್ತಪಡಿಸುತ್ತಿರುವುದರಿಂದ ಕೆಸರೆಯಲ್ಲಿ ಕಸಾಯಿ ಖಾನೆ ಸ್ಥಾಪಿಸುವ ಪ್ರಯತ್ನ ಕೈಬಿಡಿ ಎಂದು ತಾವೇ ಪಾಲಿಕೆ ಆಯುಕ್ತರಿಗೆ ಸೂಚನೆ ನೀಡಿ ದ್ದರಿಂದ ಇಂದು ಆರಿಫ್ ಹುಸೇನ್ ಮತ್ತು ಅಯೂಬ್ ಖಾನ್ ಅವರ ಒತ್ತಾಯದಿಂದ ತೀವ್ರ ಕಸಿವಿಸಿಗೊಂಡ ಪ್ರತಾಪ್ ಸಿಂಹ, ಕಡೆಗೆ ಕೆಸರೆಗೆ ಭೇಟಿ ನೀಡಿ ಅಲ್ಲಿನ ನಿವಾಸಿ ಗಳ ಕುಂದು ಕೊರತೆ ವಿಚಾರಿಸಿ ಅಭಿಪ್ರಾಯ ಪಡೆದು ತೀರ್ಮಾನಿಸೋಣ ಎಂದು ಪ್ರತಿಕ್ರಿಯಿಸಿದರು.

ನೀವೇ ಮುಂದಾಳತ್ವ ವಹಿಸಿ ಜನರಿಗೆ ಮನವರಿಕೆ ಮಾಡಿ ಕೊಟ್ಟು ಪೂರ್ವನಿಗದಿಯಂತೆ ಕೆಸರೆಯಲ್ಲಿ ಕಸಾಯಿ ಖಾನೆ ನಿರ್ಮಿಸಲು ಶಂಕುಸ್ಥಾಪನೆ ಮಾಡಬೇಕೆಂದು ಆರಿಫ್ ಹುಸೇನ್ ಮತ್ತು ಅಯೂಬ್ ಖಾನ್ ಪಟ್ಟು ಹಿಡಿದಾಗ ಬೇರೆ ಮಾರ್ಗವಿಲ್ಲದೆ, ನಾನೇ ಬರುತ್ತೇನೆ. ಜನರ ಅಭಿ ಪ್ರಾಯ ಸಂಗ್ರಹಿಸಿ ಕ್ರಮ ವಹಿಸೋಣ ಎಂದು ಸಂಸದ ಪ್ರತಾಪ್ ಸಿಂಹ ಒಪ್ಪಿಕೊಂಡರು. ತಮ್ಮದೇ ಪಕ್ಷದವರಾದ ಇ. ಮಾರುತಿರಾವ್ ಪವಾರ್ ಅವರ ನೇತೃತ್ವದಲ್ಲಿ ಕೆಸರೆ ಕಸಾಯಿ ಖಾನೆ ಯೋಜನೆಗೆ ಸ್ಥಳೀಯ ನಿವಾಸಿ ಗಳು ಪ್ರತಿಭಟನೆ ಮಾಡಿ ತೀವ್ರ ವಿರೋಧ ವ್ಯಕ್ತಪಡಿಸಿ ದ್ದರಿಂದ ಪ್ರತಾಪ್ ಸಿಂಹ ಅವರು ಸಹ ಅದಕ್ಕೆ ವಿರೋಧ ಮಾಡಿದ್ದರು. ಈಗ ಹೇಗೆ ಈ ವಿಷಯಕ್ಕೆ ತಾತ್ವಿಕ ಅಂತ್ಯ ಹಾಡುತ್ತಾರೆಂಬುದನ್ನು ಕಾದು ನೋಡಬೇಕು.

Translate »