ಮೈಸೂರು ಮರ್ಚೆಂಟ್ಸ್ ಕೋ-ಆಪರೇಟಿವ್ ಬ್ಯಾಂಕ್‍ಗೆ 5.76 ಕೋಟಿ ರೂ. ಲಾಭ
ಮೈಸೂರು

ಮೈಸೂರು ಮರ್ಚೆಂಟ್ಸ್ ಕೋ-ಆಪರೇಟಿವ್ ಬ್ಯಾಂಕ್‍ಗೆ 5.76 ಕೋಟಿ ರೂ. ಲಾಭ

December 31, 2020

ಮೈಸೂರು, ಡಿ.30- ಮೈಸೂರು ಮರ್ಚೆಂಟ್ಸ್ ಕೋ-ಆಪರೇಟಿವ್ ಬ್ಯಾಂಕ್ ಈ ಸಾಲಿನಲ್ಲಿ 5,76,80,441 ರೂ. ನಿವ್ವಳ ಲಾಭ ಗಳಿಸಿದೆ ಎಂದು ಬ್ಯಾಂಕ್‍ನ ಅಧ್ಯಕ್ಷ ಆರ್.ಆನಂದ್ ತಿಳಿಸಿದ್ದಾರೆ.

ಇತ್ತೀಚೆಗೆ ಬ್ಯಾಂಕ್ ಸಭಾಂಗಣದಲ್ಲಿ ನಡೆದ ಸರ್ವ ಸದಸ್ಯರ ವಾರ್ಷಿಕ ವರ್ಚು ಯಲ್ ಮಹಾಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಈ ಸಾಲಿನಲ್ಲಿ 10,88,34,377 ರೂ. ಲಾಭ ಬಂದಿದ್ದು, ಅದರಲ್ಲಿ 5,11,53,936 ರೂ. ಆದಾಯ ತೆರಿಗೆ ಪಾವತಿಸಲಾಗಿದೆ. 2020ರ ಮಾರ್ಚ್ 31ರ ಅಂತ್ಯಕ್ಕೆ ಬ್ಯಾಂಕ್ 387.14 ಕೋಟಿ ರೂ. ಠೇವಣಿ ಹೊಂದಿದ್ದು, 289.53 ಕೋಟಿ ರೂ. ಸಾಲ ನೀಡಲಾಗಿದೆ. ಬ್ಯಾಂಕ್‍ನ ಒಟ್ಟಾರೆ ವ್ಯವಹಾರ 676.68 ಕೋಟಿ ರೂ. ಗಳಾಗಿದೆ ಎಂದು ತಿಳಿಸಿದರು.
ಬ್ಯಾಂಕ್‍ನ ಕೇಂದ್ರ, ಬಂಡೀಪಾಳ್ಯ ಮತ್ತು ಹೆಬ್ಬಾಳ್ ಶಾಖೆಗಳು ಕೂಡ ಲಾಭ ಗಳಿಕೆ ಯಲ್ಲಿ ಕಳೆದ ಸಾಲಿಗಿಂತ ಉತ್ತಮವಾಗಿದೆ ಎಂದ ಅವರು, ಸದಸ್ಯರಿಗೆ ಶೇ.25ರಷ್ಟು ಡಿವಿಡೆಂಡ್ ಘೋಷಿಸಿದರು. ಆದರೆ, ರಿಸರ್ವ್ ಬ್ಯಾಂಕ್ ಸೂಚನೆಯಂತೆ ಸದ್ಯಕ್ಕೆ ಡಿವಿಡೆಂಡ್ ನೀಡಲಾಗುವುದಿಲ್ಲ. ಮುಂದಿನ ದಿನಗಳಲ್ಲಿ ಅನುಮತಿ ಸಿಕ್ಕಿದ ನಂತರ ಎಲ್ಲ ರಿಗೂ ಡಿವಿಡೆಂಡ್ ನೀಡಲಾಗುವುದು ಎಂದರು. ಸಭೆಯಲ್ಲಿ ಉಪಾಧ್ಯಕ್ಷ ಆರ್.ಪಿ. ಕೃಷ್ಣಮೂರ್ತಿ, ನಿರ್ದೇಶಕರಾದ ಸಿ.ವಿ. ಸೋಮಶೇಖರ್, ಬಿ.ಆರ್.ನಂದೀಶ್, ಬಿ.ಕೋದಂಡರಾಮ, ಕೆ.ಪ್ರೇಮ್‍ಕುಮಾರ್, ಎ.ಪ್ರಭುಪ್ರಸಾದ್, ಎಂ.ಎನ್.ಮಹೇಶ್, ಎನ್. ಸುಧಾ, ಸಿ.ಎಸ್.ಗಂಗಾಂಬಿಕೆ, ಎನ್.ಕಣ್ಣನ್, ಎನ್.ರಾಘವ, ಎಸ್.ರಾಚಪ್ಪಾಜಿ, ಪ್ರಧಾನ ವ್ಯವಸ್ಥಾಪಕ ಶ್ರೀಧರ್ ಬಿ.ಕುಲಕರ್ಣಿ ಇದ್ದರು.

Translate »