ಬಾರ್ ಅಂಡ್ ರೆಸ್ಟೋರೆಂಟ್ ಬಂದ್‍ಗೆ ಸಿಂಧುವಳ್ಳಿ ಜನರ ಆಗ್ರಹ
ಮೈಸೂರು

ಬಾರ್ ಅಂಡ್ ರೆಸ್ಟೋರೆಂಟ್ ಬಂದ್‍ಗೆ ಸಿಂಧುವಳ್ಳಿ ಜನರ ಆಗ್ರಹ

July 16, 2020

ಮೈಸೂರು, ಜು.15(ಎಂಟಿವೈ)- ತಾಲೂಕಿನ ಸಿಂಧುವಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಸ್ಥಳೀಯರ ವಿರೋಧÀದ ನಡುವೆಯೂ ಅಬಕಾರಿ ಅಧಿಕಾರಿಗಳು ಸಿಎಲï-2 (ಮದ್ಯ ಮಾರಾಟ ಕೇಂದ್ರ) ತೆರೆಯುವ ಮೂಲಕ ಜಿಲ್ಲಾಧಿಕಾರಿಗಳ ಆದೇಶವನ್ನು ಉಲ್ಲಂ ಘಿಸಿz್ದÁರೆ ಎಂದು ಸಿಂಧÀುವಳ್ಳಿ ಗ್ರಾಪಂ ಮಾಜಿ ಉಪಾಧÀ್ಯP್ಷÀ ಉಮಾಪತಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಆರೋಪಿಸಿದರು.

ಮೈಸೂರು ತಾಲೂಕಿನ ಜಯಪುರ ಹೋಬಳಿಗೆ ಸೇರುವ ಸಿಂಧುವಳ್ಳಿ ಗ್ರಾಮ 5 ಸಾವಿರಕ್ಕೂ ಹೆಚ್ಚು ಜನಸಂಖ್ಯೆ ಹೊಂದಿದೆ. ವರ್ಷಗಳ ಹಿಂದೆ ಮದ್ಯವ್ಯಸನದಿಂದ ಕೆಲವರು ಮೃತಪಟ್ಟರು. ಆಗ ಗ್ರಾಮಸ್ಥರೆಲ್ಲ ಸೇರಿ ಗ್ರಾಮದಲ್ಲಿ ಮದ್ಯದಂಗಡಿಯೇ ಇರಬಾರ ದೆಂದು ತೀರ್ಮಾನಿಸಿದರು. ಆದರೂ ಕಳೆದ ಕೆಲವು ವರ್ಷಗಳ ಹಿಂದೆ ಇಲ್ಲಿ ಸಿಎಲï-7 (ಬಾರ್ ಮತ್ತು ರೆಸ್ಟೋರೆಂಟï) ತೆರೆಯಲು ಹುನ್ನಾರ ನಡೆದಿತ್ತು. ಗ್ರಾಮಸ್ಥರ ವಿರೋಧÀದಿಂದ ಅಧರ್Àಕ್ಕೆ ನಿಂತಿತು. ಆದರೆ ಈಗ ಮದ್ಯದಂಗಡಿ ತೆರೆಯಲಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದÀರು.

ಅಬಕಾರಿ ಉಪ ಆಯುಕ್ತರು, ತಿ.ನರಸೀಪುರ ತಾಲೂಕಿನ ಸೋಸಲೆ ಗ್ರಾಮದಲ್ಲಿದ್ದ ಸಿಎಲï-2 ಸನ್ನದನ್ನು ಸಿಂಧುವಳ್ಳಿಗೆ ವರ್ಗಾಯಿಸಿ ದ್ದಾರೆ. ಬಾರ್ ಆರಂಭಗೊಳ್ಳುತ್ತಿರುವ ಸ್ಥಳ ದಲಿತರ ಸ್ಮಶಾನಕ್ಕೆ ಮೀಸಲಾಗಿದ್ದ ಜಾಗಕ್ಕೆ ಹೊಂದಿಕೊಂಡಿದೆ. ಇದರಿಂದ ಪರಿಶಿಷ್ಟ ಜಾತಿ, ಪಂಗಡದವರ ಧಾರ್ಮಿಕ ಭಾವನೆಗಳಿಗೆ ಧಕ್ಕೆಯಾಗುತ್ತದೆ. ಅಲ್ಲದೆ ಈ ಸ್ಥಳವನ್ನು ವಸತಿ ಉz್ದÉೀಶಕ್ಕಷ್ಟೇ ಬಳಸಬೇಕೆಂದು ಜಿಲ್ಲಾಧಿಕಾರಿ ಆದೇಶಿಸಿದ್ದರು. ಅಲ್ಲಿ ಮದ್ಯದಂಗಡಿ ನಿರ್ಮಿಸಿ ನಿಯಮ ಉಲ್ಲಂಘಿಸಲಾಗಿದೆ ಎಂದು ಆರೋಪಿಸಿದರು.

ಸಾರ್ವಜನಿಕರ ಹಿತಾಸಕ್ತಿಗಾಗಿ ಇಲ್ಲಿ ಮದ್ಯ ಮಾರಾಟ ನಿಲ್ಲಿಸಬೇಕು. ಪಂಚಾಯತ್ ಇಲಾಖೆ ಅಧಿಕಾರಿಗಳು ಇವರಿಗೆ ಈ ಸಂಬಂಧÀ ನೋಟಿಸ್ ನೀಡಿz್ದÁರೆ. ಕೂಡಲೇ ಮದ್ಯ ಮಾರಾಟ ಸ್ಥಗಿತ ಗೊಳಿಸಬೇಕು ಎಂದು ಆಗ್ರಹಿಸಿದರು. ಗ್ರಾಮಸ್ಥರಾದ ದೇವಣ್ಣ, ಶಿವಣ್ಣ, ಕುಮಾರ್ ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

Translate »