ಕೆ.ಆರ್. ಆಸ್ಪತ್ರೆಯಲ್ಲಿ ಕೊರೊನಾ ಸೋಂಕಿತರಿಗೆ ಚಿಕಿತ್ಸೆ ನೀಡಲು ತಜ್ಞರ ಸಲಹೆ
ಮೈಸೂರು

ಕೆ.ಆರ್. ಆಸ್ಪತ್ರೆಯಲ್ಲಿ ಕೊರೊನಾ ಸೋಂಕಿತರಿಗೆ ಚಿಕಿತ್ಸೆ ನೀಡಲು ತಜ್ಞರ ಸಲಹೆ

July 16, 2020

ಮೈಸೂರು,ಜು.15(ಆರ್‍ಕೆ)-ಕೆ.ಆರ್.ಆಸ್ಪತ್ರೆಯಲ್ಲೂ ಕೊರೊನಾ ಪಾಸಿಟಿವ್ ಬಂದಿರುವ ವ್ಯಕ್ತಿಗಳಿಗೆ ಚಿಕಿತ್ಸೆ ನೀಡುವಂತೆ ತಜ್ಞರ ತಂಡ ಸಲಹೆ ನೀಡಿದೆ. ಎನ್.ಆರ್.ಕ್ಷೇತ್ರದ ಕೆಲ ಭಾಗಗಳಲ್ಲಿ ಸೋಂಕು ಹೆಚ್ಚಾಗಿ ಹರಡುತ್ತಿದ್ದು, ಸಾವಿನ ಸಂಖ್ಯೆಯೂ ಏರಿಕೆಯಾಗುತ್ತಿ ರುವುದರಿಂದ 3 ದಿನಗಳ ಹಿಂದೆ ಬೆಂಗಳೂರಿ ನಿಂದ ತಜ್ಞ ವೈದ್ಯರ ತಂಡ ಆಗಮಿಸಿ, ಪರಿಶೀಲನೆ ನಡೆಸಿದ ವೇಳೆ ಕೆ.ಆರ್. ಆಸ್ಪತ್ರೆಗೂ ಭೇಟಿ ನೀಡಿ, ಕೋವಿಡ್ ಲಕ್ಷಣಗಳಿರುವ ವ್ಯಕ್ತಿಗಳನ್ನಿರಿಸಿರುವ ಐಪಿಡಿ-ಓಪಿಡಿ ಬ್ಲಾಕ್‍ನಲ್ಲಿ ಪರಿಶೀಲಿಸಿದರು.

ಪ್ರಯೋಗಾಲಯದ ವರದಿ ಬಂದು ಸೋಂಕು ದೃಢಪಟ್ಟಿರುವವರನ್ನು ಜಿಲ್ಲಾ ಕೋವಿಡ್-19 ಆಸ್ಪತ್ರೆಗೆ ಕರೆದೊಯ್ದಾಗ ಅಥವಾ ವರದಿ ಬರುವ ಮುನ್ನವೇ ವ್ಯಕ್ತಿಗಳು ಸಾವನ್ನಪ್ಪುತ್ತಿರುವುದಕ್ಕೆ ಕಾರಣ ಗಳೇನು ಎಂಬುದನ್ನು ತಜ್ಞರು ಅಧ್ಯಯನ ನಡೆ ಸಿದ್ದು, ಪರೀಕ್ಷಾ ಫಲಿತಾಂಶ ಬಂದ ಕೂಡಲೇ ಸೋಂಕಿತರಿಗೆ ತಕ್ಷಣ ಚಿಕಿತ್ಸೆ ದೊರೆಯುವಂತೆ ಕೆ.ಆರ್. ಆಸ್ಪತ್ರೆಯನ್ನೂ ಕೋವಿಡ್ ಆಸ್ಪತ್ರೆ ಎಂದು ಪರಿಗಣಿಸಿ ಪಾಸಿಟಿವ್ ಬಂದಿರುವವರಿಗೆ ಚಿಕಿತ್ಸೆ ನೀಡುವುದು ಸೂಕ್ತ ಎಂದು ಅಭಿಪ್ರಾಯಪಟ್ಟಿದ್ದಾರೆ.

ಜಿಲ್ಲಾಧಿಕಾರಿಗಳಿಗೆ ಈ ಬಗ್ಗೆ ವರದಿ ನೀಡ ಲಾಗಿದೆ. ಕೆ.ಆರ್. ಆಸ್ಪತ್ರೆಯಲ್ಲಿ ಕೋವಿಡ್ ಸೋಂಕು ದೃಢಪಟ್ಟವರನ್ನು ದಾಖಲಿಸಿದಲ್ಲಿ ಇನ್ನಿತರ ಆರೋಗ್ಯ ಸಮಸ್ಯೆಯಿಂದ ಬರುವ ಸಾಮಾನ್ಯ ಬಡ ರೋಗಿ ಗಳಿಗೆ ಚಿಕಿತ್ಸೆ ನೀಡುವುದೆಲ್ಲಿ ಎಂಬ ಸಮಸ್ಯೆ ಉದ್ಭವವಾಗಿ ರುವುದರಿಂದ ಜಿಲ್ಲಾಡಳಿತವು ಈ ಬಗ್ಗೆ ಇನ್ನೂ ಯಾವುದೇ ನಿರ್ಧಾರಕ್ಕೆ ಬಂದಿಲ್ಲ. ಈ ಸಂಬಂಧ ಡಿಸಿ ಅಭಿರಾಮ್ ಜಿ.ಶಂಕರ್ ಅವರು ಮೈಸೂರು ಮೆಡಿಕಲ್ ಕಾಲೇಜು ಮತ್ತು ಸಂಶೋಧನಾ ಸಂಸ್ಥೆ ಡೀನ್ ಅಂಡ್ ಡೈರೆಕ್ಟರ್ ಡಾ.ಸಿ.ಪಿ.ನಂಜರಾಜ್, ಕೆ.ಆರ್.ಆಸ್ಪತ್ರೆ ವೈದ್ಯಕೀಯ ಅಧೀಕ್ಷಕ ಡಾ.ಎನ್. ನಂಜುಂಡಸ್ವಾಮಿ ಅವರೊಂದಿಗೆ ಚರ್ಚಿಸಿದ್ದಾರೆ.

ಕೆ.ಆರ್. ಆಸ್ಪತ್ರೆಯನ್ನು ಕೋವಿಡ್ ಆಸ್ಪತ್ರೆಯ ನ್ನಾಗಿ ಬಳಸಿಕೊಂಡಲ್ಲಿ ಪ್ರತೀ ದಿನ ಇನ್ನಿತರೆ ಆರೋಗ್ಯ ಸಮಸ್ಯೆಯಿಂದ ಬರುವ ನೂರಾರು ಮಂದಿ ರೋಗಿ ಗಳಿಗೆ ತೊಂದರೆಯಾಗಲಿದೆ, ಅಪಘಾತ ಗಾಯಾಳು ಗಳು, ಹಾವು, ನಾಯಿ ಕಚ್ಚಿದವರು, ಡಯಾ ಬಿಟೀಸ್, ಗ್ಯಾಂಗ್ರಿನ್, ಮೂಳೆ ರೋಗಗಳು, ಐಎಲ್‍ಐ ಸಾರಿ ಪ್ರಕರಣಗಳು, ವಿಷ ಕುಡಿದವರು, ಸುಟ್ಟ ಗಾಯಗಳಾದವರಿಗೆ ಚಿಕಿತ್ಸೆ ನೀಡಲು ತೊಂದರೆ ಯಾಗಲಿದೆ ಎಂಬ ವಿಷಯವನ್ನು ಡಾ. ಸಿ.ಪಿ.ನಂಜರಾಜ್ ಅವರು ಜಿಲ್ಲಾಧಿಕಾರಿಗಳ ಗಮನಕ್ಕೆ ತಂದಿದ್ದಾರೆ.

ತಾಲೂಕು ಮತ್ತು ಜಿಲ್ಲಾ ಮಟ್ಟದ ಆಸ್ಪತ್ರೆ ಗಳಲ್ಲಿ ಸ್ನೇಕ್‍ಬೈಟ್, ಗ್ಯಾಂಗ್ರಿನ್, ಡಯಾಬಿಟಿಕ್, ವಿಷ ಸೇವಿಸಿದ ಪ್ರಕರಣಗಳಿಗೆ ಚಿಕಿತ್ಸೆ ನೀಡಿ ಅಲ್ಲಿಗೆ ಬರುವ ರೋಗಿಗಳನ್ನು ಕೆ.ಆರ್. ಆಸ್ಪತ್ರೆಗೆ ಶಿಫಾರಸು ಮಾಡದಂತೆ ಸೂಚನೆ ನೀಡಬೇಕು. ಸಾರ್ವಜನಿಕರಿಗೂ ಕೆ.ಆರ್.ಆಸ್ಪತ್ರೆಗೆ ಬರಬೇಡಿ ಎಂದು ತಿಳುವಳಿಕೆ ನೀಡಬೇಕು ಹಾಗೂ ಎಲ್ಲಾ ಖಾಸಗಿ ಆಸ್ಪತ್ರೆಗಳಲ್ಲೂ ರೋಗಿಗಳನ್ನು ದಾಖಲಿ ಸಿಕೊಂಡು ಚಿಕಿತ್ಸೆ ನೀಡಿದರೆ ಮಾತ್ರ ಕೆ.ಆರ್. ಆಸ್ಪತ್ರೆಯನ್ನು ಕೋವಿಡ್ ಪಾಸಿಟಿವ್ ಬಂದಿರುವ ವರಿಗೆ ಚಿಕಿತ್ಸೆ ನೀಡಲು ಬಳಸಬಹುದು ಎಂದು ಡಾ.ಸಿ.ಪಿ. ನಂಜರಾಜ್ ಅಭಿಪ್ರಾಯಿಸಿದ್ದಾರೆ.

ಒಂದು ವೇಳೆ ಕೋವಿಡ್ ಆಸ್ಪತ್ರೆಯನ್ನಾಗಿ ಮಾಡಿ ದಲ್ಲಿ ಸುಮಾರು 1000 ಮಂದಿಯನ್ನು ದಾಖಲಿ ಸಬಹುದಾದರೂ, ಕೆ.ಆರ್. ಆಸ್ಪತ್ರೆಗೆ ನಿತ್ಯ ಬರುವ ಹೊರ ರೋಗಿಗಳು ಹಾಗೂ ಈಗಾಗಲೇ ದಾಖ ಲಾಗಿರುವವರಿಗೆ ವೈದ್ಯಕೀಯ ಸೇವೆಯನ್ನು ಸಂಪೂರ್ಣ ಬಂದ್ ಮಾಡಬೇಕಾಗಿರುವುದ ರಿಂದ ಬಡವರು ಹಾಗೂ ಸಾಮಾನ್ಯ ವರ್ಗದ ಜನರಿಗೆ ತೀವ್ರ ತೊಂದರೆ ಉಂಟಾಗಲಿದೆ

Translate »