ಸಿಎಫ್‌ಟಿಆರ್‌ಐ ಆವರಣದಲ್ಲಿ ಕೃಷಿಯಲ್ಲಿ ಡ್ರೋಣ್ ಬಳಕೆ ಪ್ರಾತ್ಯಕ್ಷಿಕೆ
ಮೈಸೂರು

ಸಿಎಫ್‌ಟಿಆರ್‌ಐ ಆವರಣದಲ್ಲಿ ಕೃಷಿಯಲ್ಲಿ ಡ್ರೋಣ್ ಬಳಕೆ ಪ್ರಾತ್ಯಕ್ಷಿಕೆ

May 21, 2022

ಕೇಂದ್ರ ಸಚಿವರಾದ ಡಾ.ಜಿತೇಂದ್ರ ಸಿಂಗ್, ಶೋಭಾ ಕರಂದ್ಲಾಜೆ ಅವರಿಂದ ಚಾಲನೆ
ಮೈಸೂರು, ಮೇ ೨೦(ಆರ್‌ಕೆ)- ಬೆಳೆಗೆ ಕ್ರಿಮಿನಾಶಕ ಸಿಂಪಡಣೆ, ಬಿತ್ತನೆ, ಬೆಳೆ ಸಮೀಕ್ಷೆ ಹಾಗೂ ಮರಗಳ ಆರೋಗ್ಯ ನಿರ್ವಹಣೆಗೆ ಡ್ರೋಣ್ ಬಳಕೆ ಬಗ್ಗೆ ಮೈಸೂರಿನ ಸಿಎಫ್‌ಟಿಆರ್‌ಐ ಆವರಣ ದಲ್ಲಿ ಇಂದು ಪ್ರಾತ್ಯಕ್ಷಿಕೆ ನಡೆಸಲಾಯಿತು.

ಸಿಎಫ್‌ಟಿಆರ್‌ಐ, ಲಘು ಉದ್ಯೋಗ ಭಾರತಿ ಹಾಗೂ ಐಎಂಎಸ್ ಫೌಂಡೇಷನ್ ಸಂಯುಕ್ತಾಶ್ರಯದಲ್ಲಿ ಆಯೋಜಿಸಿರುವ ಟೆಕ್ ಭಾರತ್-೨೦೨೨ ಕೃಷಿ, ಆಹಾರ ಮತ್ತು ಆಹಾರ ಸಂಸ್ಕರಣೆ ತಂತ್ರ ಜ್ಞಾನ ಕುರಿತ ಮೇಳದ ಅಂಗವಾಗಿ ಏರ್ಪಡಿಸಿದ್ದ ಡ್ರೋಣ್ ಉಪ ಕರಣಗಳ ಕಾರ್ಯಾಚರಣೆ ಪ್ರಾತ್ಯಕ್ಷಿಕೆಗೆ ರಿಮೋಟ್ ಕಂಟ್ರೋಲ್ ಮೂಲಕ ಕೇಂದ್ರ ವಿಜ್ಞಾನ-ತಂತ್ರಜ್ಞಾನ ಮತ್ತು ಭೂವಿಜ್ಞಾನ ಸಚಿವ ಡಾ.ಜಿತೇಂದ್ರ ಸಿಂಗ್ ಹಾಗೂ ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಚಾಲನೆ ನೀಡಿದರು.
ಬೆಂಗಳೂರಿನ ಸಿಎಸ್‌ಐಆರ್-ನ್ಯಾಷನಲ್ ಏರೋಸ್ಪೇಸ್ ಲ್ಯಾಬೊ ರೇಟರೀಸ್ (ಓಂಐ)ನ ಅನ್ ಮ್ಯಾನ್‌ಡ್ ಏರಿಯಲ್ ವೆಹಿಕಲ್ (Uಂಗಿ) ವಿಭಾಗವು ಅಭಿವೃದ್ಧಿಪಡಿಸಿರುವ ಎರಡು ಅಕ್ವಾಮೆಡ್ ಮತ್ತು ಅಕ್ವಾ ಅಗ್ರಿ ಡ್ರೋಣ್ ಉಪಕರಣಗಳ ಮೂಲಕ ಬೆಳೆಗೆ ಔಷಧ ಸಿಂಪಡಿ ಸಬಹುದಾಗಿದ್ದು, ಬಿತ್ತನೆ ಬೀಜ ಹರಡಲು ಬಳಸಲಾಗು ತ್ತದೆ. ಈ ಡ್ರೋಣ್ ಆಧಾರಿತ ಎಮರ್ಜೆನ್ಸಿ ಮೆಡಿಸಿನ್ ಸಿಂಪಡಣೆ ತಂತ್ರಜ್ಞಾನದಿAದ ಕಡಿಮೆ ಅವಧಿಯಲ್ಲಿ ಅತೀ ಹೆಚ್ಚು ಭೂಮಿಯಲ್ಲಿ ಬೆಳೆದ ಬೆಳೆಗೆ ಕೀಟನಾಶಕ ಸಿಂಪಡಿಸಬಹುದಾಗಿದ್ದು, ವೆಚ್ಚವೂ ಕಡಿಮೆಯಾಗಲಿದೆ. ೨೫ ಕೆಜಿವರೆಗೆ ಭಾರ ಹೊರುವ ಸಾಮರ್ಥ್ಯ ಹೊಂದಿರುವ ಡ್ರೋಣ್ ೧೦೦ ಮೀಟರ್ ಎತ್ತರಕ್ಕೇರಲಿದೆ.

ಬೆಳೆಯ ಎತ್ತರಕ್ಕೆ ತಕ್ಕಂತೆ ರಿಮೋಟ್ ಮೂಲಕ ನಿಯಂತ್ರಿಸಬಹು ದಾಗಿರುವುದರಿಂದ ಗಿಡದ ಪ್ರತೀ ಎಲೆಗೂ ಕೀಟನಾಶಕ ಹರಡು ತ್ತದೆ. ಬ್ಯಾಟರಿ ಚಾಲಿತ ಹಾಗೂ ಇಂಧನ ಚಾಲಿತ ಡ್ರೋಣ್‌ಗಳನ್ನು ಅಭಿವೃದ್ಧಿ ಪಡಿಸಿದ್ದು, ಅವುಗಳ ಬಳಕೆ ಬಗ್ಗೆ ಆಸಕ್ತ ರೈತರಿಗೆ ತರಬೇತಿ ನೀಡಲಾಗುತ್ತದೆ ಎಂದು ಸಿಎಸ್‌ಐಆರ್ ಎನ್‌ಎಪಿ ತಂತ್ರಜ್ಞ ಡಾ. ಸತ್ಯನಾರಾಯಣ ಮೂರ್ತಿ ತಿಳಿಸಿದ್ದಾರೆ.

ಡ್ರೋಣ್ ಆಪರೇಟರ್ ಕೆ.ಟಿ.ವಿಕಾಸ ಮಾತನಾಡಿ, ೫ ಎಕರೆ ಭೂಮಿಗೆ ಕೇವಲ ೨೦ ನಿಮಿಷ ದಲ್ಲಿ ಔಷಧಿ, ಕೀಟನಾಶಕ, ಕಳೆನಾಶಕ ವನ್ನು ಸಿಂಪಡಿಸಬಹುದು, ಅದರಿಂದ ರೈತರಿಗೆ ಹಣ, ಸಮಯ ಉಳಿಯುತ್ತದೆ ಎಂದರು. ಗ್ರಾಮೀಣ ಪ್ರದೇಶದ ಯುವಕರಿಗೆ ತರಬೇತಿ ನೀಡಿ ಡ್ರೋಣ್ ಬಳಕೆ ಮಾಡಲು ಸಜ್ಜುಗೊಳಿಸುತ್ತಿದ್ದು, ಇದರಿಂದ ಉದ್ಯೋಗ ಸೃಷ್ಟಿಯಾಗುತ್ತದೆ ಎಂದು ವಿಎಯು ಮುಖ್ಯಸ್ಥ ವಿನಯ್ ತಿಳಿಸಿದರು.

ಅನಿಲ ರೂಪದ ರಾಸಾಯನಿಕ ಗೊಬ್ಬರ ಸಿಂಪಡಿಸಿ ಬಿತ್ತನೆ ಬೀಜ ಹಾಕಲು ಡ್ರೋಣ್ ಉಪಕರಣ ಸಹಕಾರಿಯಾಗಲಿದ್ದು, ೪ರಿಂದ ೪.೫ ಲಕ್ಷ ರೂ. ಬೆಲೆಗೆ ಸಿಗುವ ಡ್ರೋಣ್‌ನಿಂದ ರೈತರಿಗೆ ಅನುಕೂಲವಾಗಲಿದೆ. ಜಮ್ಮು-ಕಾಶ್ಮೀರದಲ್ಲಿ ಡ್ರೋಣ್ ಉಪಕರಣ ಬಳಸಿ ರೈತರು ಹೆಚ್ಚು ಆದಾಯ ಗಳಿಸುತ್ತಿದ್ದಾರೆ. ಮಧ್ಯಮ ಮತ್ತು ಬೃಹತ್ ಹಿಡುವಳಿ ರೈತರಿಗೆ ಡ್ರೋಣ್ ವರದಾನವಾಗಿದ್ದು, ಕೃಷಿ ಕಾರ್ಮಿಕರ ಕೊರತೆಯಿಂದ ಬೇಸಾಯ ತ್ರಾಸದಾಯಕವಾಗಿರುವ ಇಂದಿನ ದಿನಗಳಲ್ಲಿ ರೈತರಿಗೆ ಈ ಉಪ ಕರಣ ಸಹಕಾರಿಯಾಗಿದೆ.

ಮೈಸೂರಿನ ಸಿಎಫ್‌ಟಿಆರ್‌ಐನಲ್ಲಿ ಶುಕ್ರವಾರ ಡ್ರೋಣ್ ಆಪರೇಷನ್ ಕುರಿತ ಪ್ರಾತ್ಯಕ್ಷಿಕೆಗೆ ಕೇಂದ್ರ ಕೃಷಿ ಮತ್ತು ರೈತ ಕಲ್ಯಾಣ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಡಾ. ಜಿತೇಂದ್ರ ಸಿಂಗ್ ಅವರು ಚಾಲನೆ ನೀಡಿದರು.

Translate »