ಮದ್ಯದಂಗಡಿಗೆ ಕನ್ನ ಹಾಕಿದ್ದ ಯುವಕನ ಬಂಧನ
ಮೈಸೂರು ಗ್ರಾಮಾಂತರ

ಮದ್ಯದಂಗಡಿಗೆ ಕನ್ನ ಹಾಕಿದ್ದ ಯುವಕನ ಬಂಧನ

April 6, 2020

ಬೆಟ್ಟದಪುರ, ಏ.5- ಮದ್ಯದಂಗಡಿ ಹಿಂಬದಿ ಗೋಡೆ ಕೊರೆದು ಸುಮಾರು 60 ಸಾವಿರ ಮೌಲ್ಯದ ಮದ್ಯ ಕಳವು ಮಾಡಿದ್ದ ಆರೋಪಿಯನ್ನು ಬೆಟ್ಟದಪುರ ಠಾಣಾ ಪೊಲೀಸರು ಬಂಧಿಸಿದ್ದಾರೆ.

ಸಮೀಪದ ಚಪ್ಪರದಹಳ್ಳಿ ಗ್ರಾಮದ ಬಸವರಾಜು(20) ಬಂಧಿತ ಆರೋಪಿ. ಏ.2ರಂದು ಬೆಟ್ಟದಪುರದ ಚಾಮುಂಡೇಶ್ವರಿ ವೈನ್ ಶಾಪ್‍ನ ಹಿಂಬದಿಯ ಗೋಡೆ ಕೊರೆದು 60 ಸಾವಿರ ಮೌಲ್ಯದ ಮದ್ಯ ಕಳ್ಳತನ ಮಾಡಲಾಗಿತ್ತು. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿದ್ದ ಬೆಟ್ಟದ ಪುರ ಠಾಣೆ ಎಸ್‍ಐ ಲೋಕೇಶ್ ಹಾಗೂ ಸಿಬ್ಬಂದಿ ಪಿರಿಯಾಪಟ್ಟಣ ವೃತ್ತ ನಿರೀಕ್ಷಕ ಬಿ.ಆರ್.ಪ್ರದೀಪ್ ಮಾರ್ಗದರ್ಶನದಲ್ಲಿ ಶೋಧ ಕಾರ್ಯ ನಡೆಸಿ ಆರೋಪಿ ಬಸವರಾಜು ಬಂಧಿಸಿ, ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು. ಸದ್ಯ ಆರೋಪಿ ಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸ ಲಾಗಿದೆ. ಕಾರ್ಯಾಚರಣೆಯಲ್ಲಿ ಎಎಸ್‍ಐ ನಟರಾಜು ಸಿಬ್ಬಂದಿ ಪ್ರಸನ್ನ ಕುಮಾರ್, ಗಣೇಶ್, ರಮೇಶ್, ಸ್ವಾಮಿ, ಬಸವರಾಜು, ದಿಲೀಪ್‍ಕುಮಾರ್ ಮಂಜು ಭಾಗವಹಿಸಿದ್ದರು.

Translate »