ಕುಶಾಲನಗರ, ಏ.೧- ಉತ್ತರ ಕೊಡಗಿನ ಸೋಮವಾರಪೇಟೆ ವಲಯದ ಜೇನುಕೊಲ್ಲು ಬೆಟ್ಟ ಮೀಸಲು ಅರಣ್ಯ ಪ್ರದೇಶದಲ್ಲಿ ಜಿಂಕೆ ಬೇಟೆಯಾಡಿದ ಇಬ್ಬರು ಆರೋಪಿಗಳನ್ನು ಗುರುವಾರ ಅರಣ್ಯ ಇಲಾಖೆ ಸಿಬ್ಬಂದಿ ಬಂಧಿಸಿದ್ದಾರೆ.
ತಾಲೂಕಿನ ಹೊಸಹಳ್ಳಿ ಗ್ರಾಮದ ಕಾವೇರಪ್ಪ ಆಲಿಯಾಸ್ ತಮ್ಮು, ಎಂ.ಟಿ.ಹರೀಶ್ ಬಂಧಿತರಾಗಿದ್ದು, ಇವರಿಂದ ಜಿಂಕೆ ಚರ್ಮ, ಹತ್ತು ಕೆಜಿ ಮಾಂಸ, ಎರಡು ಒಂಟಿನಳಿಕೆ ಕೋವಿ ಹಾಗೂ ಆಟೋ ರಿಕ್ಷಾವನ್ನು ವಶಪಡಿಸಿಕೊಳ್ಳಲಾಗಿದೆ. ಪ್ರಕರಣಕ್ಕೆ ಸಂಬAಧಿಸಿದ ಡಿ.ಇ.ಪ್ರವೀಣ್, ಕೆ.ಆರ್.ಕೃಷ್ಣಪ್ಪ, ಪ್ರೀತು ಆಲಿಯಾಸ್ ಪ್ರೇಮನಾಥ್, ಮೋನಿಸ್ ಆಲಿಯಾಸ್ ಮೋನಿ ಸೇರಿದಂತೆ ನಾಲ್ವರು ಆರೋಪಿ ಗಳು ಪರಾರಿಯಾಗಿದ್ದು, ಅವರ ಪತ್ತೆಗೆ ಅಧಿಕಾರಿಗಳು ಕ್ರಮ ಕೈಗೊಂಡಿದ್ದಾರೆ.
ಸೋಮವಾರಪೇಟೆ ಉಪ ವಿಭಾಗ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ನೆಹರೂ ಮಾರ್ಗ ದರ್ಶನದಲ್ಲಿ ವಲಯ ಅರಣ್ಯಾಧಿಕಾರಿ ಶಮಾ ಮತ್ತು ಹೆಬ್ಬಾಲೆ ವಲಯದ ಉಪ ವಲಯ ಅರಣ್ಯಾ ಧಿಕಾರಿ ಎಂ.ಕೆ. ಭರತ್ ನೇತೃತ್ವದ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಜಿಂಕೆ ಬೇಟೆಯಾಡಿದ ಆರೋಪಿಗಳನ್ನು ಮಾಲು ಸಮೇತ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬಂಧಿತ ಆರೋಪಿಗಳ ವಿರುದ್ಧ ವನ್ಯಜೀವಿ ಸಂರಕ್ಷಣಾ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಿ ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿದೆ.
ಕಾರ್ಯಾ ಚರಣೆಯಲ್ಲಿ ಅರಣ್ಯ ರಕ್ಷಕರಾದ ಎಂ.ಕೆ. ಮನು, ರಾಜಣ್ಣ, ಭೀಮಣ್ಣ, ಲೋಕೇಶ್, ಕಾವಲುಗಾರ ರಾದ ರಾಜಪ್ಪ, ದಿವಾಕರ್, ಸಿಬ್ಬಂದಿ ಗಳಾದ ದೀಕ್ಷಿತ್, ಹರ್ಷಿತ್, ರಕ್ಷಿತ್ ಪಾಲ್ಗೊಂಡಿದ್ದರು.