ಕೊಳ್ಳೇಗಾಲ ಬಳಿ ಶೀಲ ಶಂಕಿಸಿ ಪತ್ನಿ ಹತ್ಯೆಗೈದ ಪತಿ
ಮೈಸೂರು

ಕೊಳ್ಳೇಗಾಲ ಬಳಿ ಶೀಲ ಶಂಕಿಸಿ ಪತ್ನಿ ಹತ್ಯೆಗೈದ ಪತಿ

April 3, 2022

ಕೊಳ್ಳೇಗಾಲ, ಏ.೧(ಎನ್.ನಾಗೇಂದ್ರ ಸ್ವಾಮಿ)- ಪತಿಯೋರ್ವ ಪತ್ನಿ ಶೀಲ ಶಂಕಿಸಿ ಆಕೆ ಮಲಗಿದ್ದ ವೇಳೆ ಮಕ್ಕಳ ಎದುರೇ ಆಕೆಯನ್ನು ಉಸಿರುಗಟ್ಟಿಸಿ ಹತೈಗೈದಿರುವ ಘಟನೆ ತಾಲೂಕಿನ ಮುಡಿಗುಂಡ ಗ್ರಾಮದ ನಾಯಕರ ಬೀದಿಯಲ್ಲಿ ಶುಕ್ರವಾರ ಮುಂಜಾನೆ ನಡೆದಿದೆ.

ಗ್ರಾಮದ ನಿವಾಸಿ ಕುಮಾರ ಎಂಬಾತನೇ ತನ್ನ ಪತ್ನಿ ಚಿನ್ನಮ್ಮ(೩೦) ಎಂಬಾಕೆಯನ್ನು ಹತ್ಯೆಗೈದವನಾಗಿದ್ದು, ಆತನನ್ನೂ ಬಂಧಿಸಿದ್ದಾರೆ. ಮುಳ್ಳೂರು ಗ್ರಾಮದ ಚಿನ್ನಮ್ಮ ಅವರನ್ನು ಕಳೆದ ೧೦ ವರ್ಷಗಳ ಹಿಂದೆ ಮುಡಿಗುಂಡ ಗ್ರಾಮದ ನಿವಾಸಿ ಕೊಪ್ಪಾಳಿ ನಾಯಕ ಅವರ ಪುತ್ರ ಕುಮಾರ ಎಂಬಾತನೊAದಿಗೆ ವಿವಾಹ ಮಾಡಿಕೊಡಲಾಗಿತ್ತು. ಈ ದಂಪತಿಗೆ ೭ ವರ್ಷದ ದರ್ಶನ ಹಾಗೂ ೪ ವರ್ಷದ ದರ್ಶಿನಿ ಎಂಬ ಇಬ್ಬರು ಮಕ್ಕಳಿದ್ದರು. ಪತ್ನಿ ಯನ್ನು ಚೆನ್ನಾಗಿಯೇ ನೋಡಿಕೊಳ್ಳುತ್ತಿದ್ದ ಕುಮಾರ ಇತ್ತೀಚೆಗೆ ಪತ್ನಿ ಚಿನ್ನಮ್ಮಳ ಶೀಲದ ಬಗ್ಗೆ ಅನುಮಾನಪಟ್ಟು ಆಗಾಗ್ಗೆ ಕುಡಿದು ಬಂದು ಜಗಳ ಮಾಡುತ್ತಿದ್ದ ಎನ್ನಲಾಗಿದೆ.

ಈ ಸಂಬAಧ ಮುಳ್ಳೂರು, ಮುಡಿ ಗುಂಡ ಗ್ರಾಮದ ಯಜಮಾನರ ನೇತೃತ್ವದಲ್ಲಿ ಸುಮಾರು ಐದಾರು ಬಾರಿ ನ್ಯಾಯ ಪಂಚಾಯ್ತಿ ನಡೆದು ಬುದ್ದಿವಾದ ಹೇಳಿದ್ದರು. ಆದರೂ ತನ್ನ ಚಾಳಿ ಬಿಡದ ಕುಮಾರ ತನ್ನ ಪತ್ನಿಗೆ ಮಾನಸಿಕ ಹಾಗೂ ದೈಹಿಕ ಕಿರುಕುಳ ನೀಡು ವುದನ್ನು ಮುಂದುವರೆಸಿದ್ದ. ಇದರಿಂದ ಮನನೊಂದ ಚಿನ್ನಮ್ಮ ಗಂಡನ ಮನೆ ತೊರೆದು ಮಕ್ಕಳೊಂದಿಗೆ ತನ್ನ ತವರು ಮನೆ ಸೇರಿದ್ದಳು ಎನ್ನಲಾಗಿದೆ.

ಈ ಮಧ್ಯೆ ಮಾ.೩೧ರಂದು ಮುಳ್ಳೂರಿಗೆ ತೆರಳಿದ್ದ ಕುಮಾರ, ನಾನು ಇನ್ನು ಮುಂದೆ ನನ್ನ ಪತ್ನಿ, ಮಕ್ಕಳನ್ನು ಚೆನ್ನಾಗಿ ನೋಡಿಕೊಳ್ಳು ತ್ತೇನೆ. ನಾಳೆ ಯುಗಾದಿ ಹಬ್ಬವಿದೆ. ಎಲ್ಲವನ್ನೂ ಮರೆತು ನೆಮ್ಮದಿಯಾಗಿ ಒಟ್ಟಾಗಿ ಬಾಳು ತ್ತೇವೆ ಎಂದು ಚಿನ್ನಮ್ಮಳ ಮನೆಯವರ ಮನ ವೊಲಿಸಿ, ಮುಡಿಗುಂಡಕ್ಕೆ ಕರೆದೊಯ್ದಿದ್ದ. ಆದರೂ ಗುರುವಾರ ರಾತ್ರಿ ಮತ್ತೆ ಪತ್ನಿ ಚಿನ್ನಮ್ಮಳ ಜೊತೆ ಜಗಳ ತೆಗೆದು, ಹಲ್ಲೆ ನಡೆಸಿದ ಕುಮಾರ ತನ್ನ ಮಕ್ಕಳ ಎದುರೇ ಆಕೆಯ ಕತ್ತು ಹಿಸುಕಿ ಹತ್ಯೆಗೈದಿದ್ದಾನೆ. ಈ ದೃಶ್ಯ ಕಂಡ ಮಗ ದರ್ಶನ್ ಜೋರಾಗಿ ಕೂಗಿ ಕೊಂಡಾಗ ಕುಮಾರ ಮಗನನ್ನು ಮತ್ತೊಂದು ರೂಂಗೆ ಕೂಡಿ ಹಾಕಿದ್ದಾನೆ ಎನ್ನಲಾಗಿದೆ.

ಶುಕ್ರವಾರ ಮುಂಜಾನೆ ತನ್ನ ಸೋದರ ಮಾವ ಭೈರನಾಯಕನಿಗೆ ಕರೆ ಮಾಡಿದ ಚಿನ್ನಮ್ಮಳ ಪುತ್ರ ದರ್ಶನ್ ನಡೆದ ವಿಚಾರ ವನ್ನೆಲ್ಲಾ ತಿಳಿಸಿ ಬೇಗ ಬರುವಂತೆ ತಿಳಿಸಿ ದ್ದಾನೆ. ವಿಷಯ ತಿಳಿದು ಸ್ಥಳಕ್ಕಾಗಮಿಸು ವಷ್ಟರಲ್ಲಿ ಚಿನ್ನಮ್ಮ ಪ್ರಜ್ಞಾಹೀನಳಾಗಿ ಬಿದ್ದಿದ್ದಳು. ತಕ್ಷಣ ಆಕೆಯನ್ನು ಚಿಕಿತ್ಸೆಗಾಗಿ ಸ್ಥಳೀಯ ಆಸ್ಪತ್ರೆಗೆ ಕರೆದೊಯ್ದರಾದರೂ, ಅಷ್ಟರಲ್ಲಿ ಆಕೆ ಮೃತಪಟ್ಟಿದ್ದಳು. ಈ ಸಂಬAಧ ಮೃತಳ ಸಹೋದರ ಭೈರನಾಯಕ ನನ್ನ ಅಕ್ಕನ ಸಾವಿಗೆ ಕಾರಣನಾದ ಆಕೆಯ ಗಂಡ ಕುಮಾರನನ್ನು ಬಂಧಿಸಿ, ಆತನಿಗೆ ಶಿಕ್ಷೆ ನೀಡುವಂತೆ ಕೊಳ್ಳೇಗಾಲ ಪೊಲೀಸರಿಗೆ ದೂರು ನೀಡಿದ್ದು, ಪ್ರಕರಣ ದಾಖಲಿಸಿಕೊಂಡಿ ರುವ ಪೊಲೀಸರು ಆರೋಪಿಯನ್ನು ಬಂಧಿಸಿ ಮುಂದಿನ ತನಿಖೆ ಕೈಗೊಂಡಿದ್ದಾರೆ.

Translate »