ಮೈಸೂರು: ನಗರೀಕರಣದಿಂದ ನಗರದಲ್ಲಿ ಮರಗಳ ಸಂಖ್ಯೆ ಕಡಿಮೆ ಯಾಗುತ್ತಿರುವ ಕಾರಣ ವಾತಾವರಣದಲ್ಲಿ ಏರುಪೇರಾಗುತ್ತಿದೆ ಎಂದು ಅರಣ್ಯ ಇಲಾಖೆಯ ಸಿಸಿಎಫ್ ಕರುಣಾಕರನ್ ಅಭಿಪ್ರಾಯಪಟ್ಟರು.
ವಿಜಯನಗರ ಒಂದನೇ ಹಂತದ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘ ಹಾಗೂ ರೋಟರಿ ಮೈಸೂರು ಉತ್ತರ ಸಹಯೋಗ ದೊಂದಿಗೆ ಶ್ರೀ ಯೋಗಾನರಸಿಂಹಸ್ವಾಮಿ ದೇವಸ್ಥಾನದ ಮುಂದಿನ ಉದ್ಯಾನವನ ದಲ್ಲಿ ಯೋಗ ಮಂಟಪದ ಪ್ರಥಮ ವಾರ್ಷಿ ಕೋತ್ಸವ ಸಮಾರಂಭ ಹಾಗೂ ಗಿಡ ನೆಡುವುದು ಮತ್ತು ಸೊಳ್ಳೆ ನಿರ್ಮೂಲನಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಈ ಹಿನ್ನೆಲೆಯಲ್ಲಿ ಬಡಾವಣೆಯ ಜನರು ಮನೆಗೆರಡರಂತೆ ಗಿಡಗಳನ್ನು ನೆಟ್ಟು, ಪೋಷಿ ಸಲು ಮುಂದಾಗಿರುವುದು ಉತ್ತಮ ಬೆಳವಣಿಗೆ. ಇದಕ್ಕೆ ಅರಣ್ಯ ಇಲಾಖೆಯು ಸಹಕರಿ ಸಲಿದ್ದು, ಈ ಮಾದರಿಯನ್ನು ನಗರದ ಎಲ್ಲಾ ಬಡಾವಣೆಯ ನಾಗರಿಕರು ಅನುಸರಿಸುವಂತೆ ಮನವಿ ಮಾಡಿದರು.
ಇಂದು ಬೆಳಿಗ್ಗೆ 150ಕ್ಕೂ ಹೆಚ್ಚು ಮನೆ ಗಳಲ್ಲಿ ವೈರಸ್ ಹರಡುವ ಮಾರಣಾಂತಿಕ ಸೊಳ್ಳೆ ನಿರ್ಮೂಲನೆ ಮಾಡುವ ಸೊಳ್ಳೆ ಗಳನ್ನು ಮನೆ ಮುಂದಿನ ತೊಟ್ಟಿಗಳಿಗೆ ಬಿಡಲಾಯಿತಲ್ಲದೆ, ಶ್ರೀ ಯೋಗಾನರಸಿಂಹ ಸ್ವಾಮಿ ದೇವಸ್ಥಾನದ ಮುಂದಿನ ಉದ್ಯಾ ನವನದಲ್ಲಿರುವ 8 ನೀರಿನ ತೊಟ್ಟಿಗಳಿಗೂ ಸೊಳ್ಳೆಗಳನ್ನು ಬಿಡಲಾಯಿತು. ನಂತರ ವಿಜಯನಗರ ಒಂದನೇ ಹಂತದ ಜಿಲ್ಲಾ
ಕನ್ನಡ ಸಾಹಿತ್ಯ ಭವನದ ಆವರಣದಲ್ಲಿ ಗಿಡಗಳನ್ನು ನೆಡಲಾಯಿತು.
ಇದೇ ಸಂದರ್ಭದಲ್ಲಿ ವಿಜಯನಗರ ಒಂದನೇ ಹಂತದ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘ ಹಾಗೂ ರೋಟರಿ ಮೈಸೂರು ಉತ್ತರ ಸಂಸ್ಥೆ ಅಧ್ಯಕ್ಷ ಎಂ.ಕೆ.ನಂಜಯ್ಯ, ಸಹಾಯಕ ಗವರ್ನರ್ ಮಲ್ಲರಾಜೇ ಅರಸ್, ಸೊಳ್ಳೆ ನಿರ್ಮೂಲನಾ ತಜ್ಞ ಡಾ. ಸೋಮಶಂಕರೇಗೌಡ, ಮೈಸೂರು ವಿವೇಕಾನಂದ ಯೋಗಶಿಕ್ಷಣ ಮತ್ತು ಸಂಶೋ ಧನಾ ಸಂಸ್ಥೆಯ ಗೌರವಾಧ್ಯಕ್ಷ ಡಾ.ವಿ.ಎನ್. ಗಣೇಶ್ ಕುಮಾರ್, ರೊ.ಡಾ.ಎಸ್.ಎಚ್. ಜಗದೀಶ್, ಸುಧಾಕರಶೆಟ್ಟಿ ಸೇರಿದಂತೆ ಇತರೆ ಬಡಾವಣೆ ನಿವಾಸಿಗಳಿದ್ದರು.