ಹಣಕಾಸು ಯೋಜನೆಯ ಅನುದಾನ ಪ್ರತಿ ವಾರ್ಡ್‍ಗೂ ಸಮಾನ ಹಂಚಿಕೆಗೆ ನಿರ್ಣಯ
ಮಂಡ್ಯ

ಹಣಕಾಸು ಯೋಜನೆಯ ಅನುದಾನ ಪ್ರತಿ ವಾರ್ಡ್‍ಗೂ ಸಮಾನ ಹಂಚಿಕೆಗೆ ನಿರ್ಣಯ

July 21, 2021

ಮಂಡ್ಯ, ಜು.20(ಮೋಹನ್‍ರಾಜ್)- ಎಸ್‍ಸಿಪಿ ಹಾಗೂ ಟಿಎಸ್‍ಪಿ, 14, 15ನೇ ಹಣಕಾಸು ಯೋಜನೆಯ ಅನುದಾನ ವನ್ನು ನಗರದ ಎಲ್ಲ 35 ವಾರ್ಡುಗಳಿಗೂ ಸಮವಾಗಿ ಹಂಚಿಕೆ ಮಾಡಲು ನಗರಸಭೆ ಸಾಮಾನ್ಯ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಯಿತು.

ನಗರಸಭೆಯ ಧರಣಪ್ಪ ಸಭಾಂಗಣದಲ್ಲಿ ಅಧ್ಯಕ್ಷ ಎಚ್.ಎಸ್.ಮಂಜು ಅಧ್ಯಕ್ಷತೆಯಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಎಸ್‍ಸಿಪಿ ಹಾಗೂ ಟಿಎಸ್‍ಪಿ ಅನುದಾನದ ಕ್ರಿಯಾ ಯೋಜನೆ ಕುರಿತಂತೆ ನಗದ ಎಲ್ಲ ವಾರ್ಡು ಗಳಲ್ಲೂ ಈ ವರ್ಗದ ಜನರಿದ್ದಾರೆ. ಒಂದೇ ವಾರ್ಡಿಗೆ ಸ್ವಲ್ಪ ಪ್ರಮಾಣದ ಅನು ದಾನವನ್ನು ನೀಡುವುದರಿಂದ ಯಾವುದೇ ಕಾಮಗಾರಿಯನ್ನೂ ಪೂರ್ಣಗೊಳಿಸಲು ಸಾಧ್ಯವಿಲ್ಲ. ಹೀಗಾಗಿ ಎಲ್ಲ ಅನು ದಾನವನ್ನು ಒಟ್ಟುಗೂಡಿಸಿ ಸಮವಾಗಿ ಹಂಚಿಕೆ ಮಾಡಲು ಸದಸ್ಯರು ಒಮ್ಮತದ ನಿರ್ಧಾರ ಕೈಗೊಂಡರು.

ಎಸ್‍ಸಿಪಿ ಮತ್ತು ಟಿಎಸ್‍ಪಿ ಅನುದಾನ 36.56 ಲಕ್ಷ, 15ನೇ ಹಣಕಾಸು ಯೋಜನೆ ಯಲ್ಲಿ 5.35 ಕೋಟಿ ಹಾಗೂ 14ನೇ ಹಣಕಾಸು ಯೋಜನೆಯಲ್ಲಿ ಉಳಿದಿರುವ 20 ಲಕ್ಷ ಸೇರಿದಂತೆ ಒಟ್ಟಾರೆ 2.20 ಕೋಟಿ ಲಭ್ಯವಾಗಲಿದ್ದು, ಇದಕ್ಕೆ ಇತರೆ ಮೂಲ ಗಳ 60 ರಿಂದ 70 ಲಕ್ಷ ರೂ.ಗಳನ್ನು ಜೋಡಿಸಿ ಎಲ್ಲ 35 ವಾರ್ಡುಗಳಲ್ಲಿರುವ ಎಸ್‍ಸಿ, ಎಸ್‍ಟಿ ವರ್ಗದ ಜನತೆ ವಾಸಿಸುವ ಪ್ರದೇಶಗಳ ರಸ್ತೆ, ಚರಂಡಿ ಇತರೆ ಯೋಜನೆಗಳಿಗೆ ಬಳಕೆ ಮಾಡಿಕೊಳ್ಳು ವುದು ಸೂಕ್ತ ಎಂದು ಅಧ್ಯಕ್ಷ ಮಂಜು ಹಾಗೂ ಆಯುಕ್ತ ಎಸ್. ಲೋಕೇಶ್ ಸಭೆಗೆ ಮಾಹಿತಿ ನೀಡಿದರು.

ಎಸ್‍ಸಿಪಿ ಮತ್ತು ಟಿಎಸ್‍ಪಿ ಯೋಜನೆ ಯಲ್ಲಿ ಶೇ. 50ರಷ್ಟು ಈ ವರ್ಗದ ಜನರಿರುವ ಪ್ರದೇಶಕ್ಕೆ ಮಾತ್ರ ಅನುದಾನವನ್ನು ಖರ್ಚು ಮಾಡಬಹುದು. ಇದು ನಿಯಮವಾಗಿದೆ. ಇದಕ್ಕೆ ತದ್ವಿರುದ್ಧವಾಗಿ ನಡೆಯುವುದು ಬೇಡ, ಈ ಯೋಜನೆ ಸದ್ಬಳಕೆಯಾಗಬೇಕು ಎಂದು ಸದಸ್ಯರಾದ ಶಿವಪ್ರಕಾಶ್, ಶ್ರೀಧರ್ ಹಾಗೂ ನಾರಾಯಣ್ ಸಲಹೆ ನೀಡಿದರು.

ಇದಕ್ಕೆ ಉತ್ತರಿಸಿದ ಅಧ್ಯಕ್ಷ ಎಚ್.ಎಸ್. ಮಂಜು, ಬೇರೆ ಬೇರೆ ಅನುದಾನಗಳಲ್ಲಿ ವ್ಯಯ ಮಾಡಿದರೆ ಕಾಮಗಾರಿಗಳು ಪೂರ್ಣವಾಗುವುದಿಲ್ಲ. ಅದಕ್ಕೆ ಬದಲಾಗಿ ಬೇರೆ ಬೇರೆ ಮೂಲಗಳ ಎಲ್ಲ ಅನುದಾನ ವನ್ನೂ ಒಟ್ಟುಗೂಡಿಸಿ ಕ್ರಿಯಾ ಯೋಜನೆ ರೂಪಿಸಿದಲ್ಲಿ ಕನಿಷ್ಠ ಒಂದು ಕಾಮ ಗಾರಿಯನ್ನಾದರೂ ಪೂರ್ಣಗೊಳಿಸಲು ಸಾಧ್ಯ ಎಂದು ಸಲಹೆ ನೀಡಿದರು.

ಅಧ್ಯಕ್ಷರು ಮತ್ತು ಆಯುಕ್ತರ ಈ ಯೋಜನೆ ಸಮಂಜಸವಾಗಿದ್ದು, ಇದನ್ನು ಜಾರಿಗೊಳಿಸುವ ಬಗ್ಗೆ ಸದಸ್ಯರು ನಿರ್ಧಾರ ಕೈಗೊಳ್ಳುವುದು ಸೂಕ್ತ ಎಂದು ಸದಸ್ಯ ಎಂ.ಪಿ. ಅರುಣ್‍ಕುಮಾರ್ ಸಲಹೆ ನೀಡಿದರು. ಇದಕ್ಕೆ ಎಲ್ಲ ಸದಸ್ಯರೂ ಸಹ ಮತ ವ್ಯಕ್ತಪಡಿಸಿದರು.

ಮಂಡ್ಯ ನಗರ ವ್ಯಾಪ್ತಿಯಲ್ಲಿರುವ ಹಲವಾರು ವಾರ್ಡುಗಳಲ್ಲೂ ವಿದ್ಯುತ್ ಕಂಬಗಳು ಶಿಥಿಲ ಗೊಂಡಿವೆ. ಈ ಬಗ್ಗೆ ಹಲವಾರು ಬಾರಿ ಮನವಿ ಮಾಡಿದರೂ ಸೆಸ್ಕ್‍ನವರು ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಸದಸ್ಯರಾದ ಮಂಜುಳಾ ಉದಯ ಶಂಕರ್, ಮೀನಾಕ್ಷಿ ಪುಟ್ಟಸ್ವಾಮಿ, ಅರುಣ್, ನಾಗೇಶ್, ನಾರಾಯಣ್, ಶ್ರೀಧರ್ ಇತರರು ಆರೋಪಿಸಿದರು.

ಸೆಸ್ಕ್ ಕಾರ್ಯಪಾಲಕ ಅಭಿಯಂತರ ಮಾತನಾಡಿ, ನಗರಸಭೆ ವ್ಯಾಪ್ತಿಯಲ್ಲಿ ನಾಲ್ಕು ಕಚೇರಿಗಳಿದ್ದು, ಈಗಾಗಲೇ ಪರಿಶೀಲಿಸಿ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಲಾಗಿದೆ. ದೂರು ಬಂದ ಕಡೆಗಳಲ್ಲೂ ನಾವು ನಿಗಾ ವಹಿಸಿz್ದÉೀವೆ. ಶೀಘ್ರ ಅವುಗಳನ್ನು ತೆರವು ಗೊಳಿಸಲಾಗುವುದು ಎಂದರು.
ಚರಂಡಿಗಳಲ್ಲೂ ವಿದ್ಯುತ್ ಕಂಬ ಗಳನ್ನು ಅಳವಡಿಸಲಾಗಿದ್ದು, ಅವುಗಳನ್ನೂ ಸ್ಥಳಾಂತರ ಮಾಡುವಂತೆ ಒತ್ತಾಯಿಸಿದರು. ಈ ಬಗ್ಗೆಯೂ ಕ್ರಮ ಕೈಗೊಳ್ಳುವುದಾಗಿ ಅಧಿಕಾರಿಗಳು ಭರವಸೆ ನೀಡಿದರು.

ನಗರ ವ್ಯಾಪ್ತಿಯಲ್ಲಿ ಬಹುತೇಕ ಮರಗಳು ಹಳೆಯದಾಗಿದ್ದು, ಶಿಥಿಲಗೊಂಡಿರುವ, ಒಣಗಿರುವ ಮರ ಮತ್ತು ರೆಂಬೆಗಳನ್ನು ತೆರವುಗೊಳಿಸಿ. ಇಲ್ಲದಿದ್ದಲ್ಲಿ ಭಾರೀ ಅನಾಹುತ ಗಳು ಸಂಭವಿಸುವ ಸಾಧ್ಯತೆಗಳಿವೆ ಎಂದು ಸದಸ್ಯರು ಒಕ್ಕೊರಲಿನಿಂದ ಆರೋಪಿಸಿದರು.

ವಲಯ ಅರಣ್ಯಾಧಿಕಾರಿ ಶಿಲ್ಪ ಮಾತನಾಡಿ, ನಗರಸಭೆ ವ್ಯಾಪ್ತಿಯಲ್ಲಿ ಶಿಥಿಲಗೊಂಡಿರುವ ಮರಗಳ ತೆರವಿಗೆ ಈಗಾಗಲೇ ಟೆಂಡರ್ ಕರೆಯಲಾಗಿದೆ. ಸ್ವರ್ಣಸಂದ್ರ ಮತ್ತು ಇತರೆ ಬಡಾವಣೆಯಲ್ಲಿರುವ ಮರಗಳ ರೆಂಬೆ ತೆರವಿಗೆ ಜಿಲ್ಲಾಧಿಕಾರಿ ಸ್ಥಿರೀಕರಣಕ್ಕೆ ಅನುಮತಿ ನೀಡಬೇಕು. ಅದು ಸಿಕ್ಕ ತಕ್ಷಣ ತೆರವು ಕಾರ್ಯ ನಡೆಸಲಾಗುವುದು ಎಂದು ಮಾಹಿತಿ ನೀಡಿದರು. ಕುಡಿಯುವ ನೀರು, ಒಳಚರಂಡಿ ವ್ಯವಸ್ಥೆ ಸೇರಿದಂತೆ ವಿವಿಧ ವಿಚಾರಗಳ ಕುರಿತಂತೆ ಚರ್ಚೆ ನಡೆಯಿತು. ಉಪಾಧ್ಯಕ್ಷೆ ಇಷ್ರತ್ ಫಾತೀಮಾ ಸಭೆಯಲ್ಲಿ ಭಾಗವಹಿಸಿದ್ದರು.

Translate »