ಗಿಡನೆಟ್ಟು ಶ್ರೀ ನಿರ್ಮಲಾನಂದನಾಥಸ್ವಾಮೀಜಿ ಹುಟ್ಟುಹಬ್ಬ ಆಚರಣೆ
ಮಂಡ್ಯ

ಗಿಡನೆಟ್ಟು ಶ್ರೀ ನಿರ್ಮಲಾನಂದನಾಥಸ್ವಾಮೀಜಿ ಹುಟ್ಟುಹಬ್ಬ ಆಚರಣೆ

July 21, 2021

ಮಂಡ್ಯ, ಜು.20- ಅಖಿಲ ಕರ್ನಾಟಕ ರಾಜ್ಯ ಒಕ್ಕಲಿಗರ ಸಂಘದ ಮಂಡ್ಯ ಜಿಲ್ಲಾ ಸಮಿತಿ ವತಿಯಿಂದ ಆದಿಚುಂಚನಗಿರಿ ಮಠಾಧೀಶ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿಯವರ 53ನೇ ವರ್ಷದ ಹುಟ್ಟುಹಬ್ಬದ ಅಂಗವಾಗಿ ಗಿಡ ನೆಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ನಗರದ ಸಂತೆ ಮೈದಾನದಲ್ಲಿರುವ ರುದ್ರಭೂಮಿ ಹಾಗೂ ಬಂದೀಗೌಡ ಬಡಾವಣೆಯಲ್ಲಿ ಗಿಡ ನೆಡುವ ಕಾರ್ಯಕ್ರಮಕ್ಕೆ ಆದಿಚುಂಚನಗಿರಿ ಮಠದ ಕಾರ್ಯದರ್ಶಿ ಪುರುಷೋತ್ತಮಾನಂದನಾಥ ಸ್ವಾಮೀಜಿ ಗಿಡಕ್ಕೆ ನೀರೆರೆಯುವ ಮೂಲಕ ಚಾಲನೆ ನೀಡಿದರು.

ನಂತರ ಮಾತನಾಡಿದ ಅವರು, ಗಿಡ-ಮರಗಳಿದ್ದರೆ ಪ್ರಾಣಿ ಪಕ್ಷಿಗಳಿಗೆ ನೆಲೆಯನ್ನು ನೀಡಿ ಮೋಡಗಳನ್ನು ತಡೆದು ಮಳೆ ಬರಲು ಸಹಕಾರಿಯಾಗುತ್ತದೆ. ಪ್ರತಿ ಯೊಬ್ಬರೂ ಸಹ ಗಿಡಗಳನ್ನು ನೆಟ್ಟು ಪೆÇೀಷಿಸುವ ಕೆಲಸ ಮಾಡಬೇಕು. ವಾತಾವರಣದಲ್ಲಿ ಆಮ್ಲಜನಕ ವೃದ್ಧಿ ಯಾಗಿ ಉತ್ತಮ ಪರಿಸರ ಹೊಂದಲು ಸಹಕಾರಿ ಯಾಗುತ್ತದೆ ಎಂದು ಹೇಳಿದರು. ಅಖಿಲ ಕರ್ನಾಟಕ ಒಕ್ಕಲಿಗರ ಒಕ್ಕೂಟದ ಮಂಡ್ಯ ಜಿಲ್ಲಾಧ್ಯಕ್ಷ ಎಲ್.ಕೃಷ್ಣ ಮಾತನಾಡಿ, ಅನ್ನದಾಸೋಹ ಶಿಕ್ಷಣ ಸಂತ ನಿರ್ಮಲಾನಂದ ನಾಥಸ್ವಾಮೀಜಿ ಅವರ ಹುಟ್ಟುಹಬ್ಬವನ್ನು ಗಿಡ ನೆಟ್ಟು ಆಚರಿಸಿz್ದÉೀವೆ. ಗಿಡ ನೆಡುವುದು ಮುಖ್ಯವಲ್ಲ. ಅದನ್ನು ಪೆÇೀಷಿಸುವುದು ಮುಖ್ಯ. ನಿರ್ಮಲಾ ನಂದನಾಥ ಸ್ವಾಮೀಜಿಯವರು ಕೋವಿಡ್ ಸೋಂಕಿತರಿಗೆ ಹೆಲ್ತ್ ಕಿಟ್ ವಿತರಿಸಿ ಹಲವಾರು ಸಾಮಾ ಜಿಕ ಕಾರ್ಯಕ್ರಮಗಳನ್ನು ಕೈಗೊಂಡಿದ್ದಾರೆ. ಕೋವಿಡ್‍ನಿಂದ ಮೃತಪಟ್ಟ ಮಕ್ಕಳ ವಿದ್ಯಾಭ್ಯಾಸವನ್ನು ಮಠವೇ ವಹಿಸಿಕೊಳ್ಳಲಿದೆ ಎಂದು ಶ್ರೀಗಳು ತಿಳಿಸಿದ್ದಾರೆ ಎಂದರು.

ಅಖಿಲ ಕರ್ನಾಟಕ ಒಕ್ಕಲಿಗರ ಒಕ್ಕೂಟದ ರಾಜ್ಯಾಧ್ಯಕ್ಷ ನಾಗಣ್ಣ ಬಾಣಸವಾಡಿ, ನಗರಸಭೆ ಅಧ್ಯಕ್ಷ ಎಚ್.ಎಸ್. ಮಂಜು, ಸದಸ್ಯರಾದ ಪೂರ್ಣಿಮಾ, ಮೀನಾಕ್ಷಿ, ಮುಖಂಡ ರಾದ ಎಂ.ಎನ್. ಶಿವರಾಮ್, ಸುದರ್ಶನ್, ರಾಕೇಶ್, ಸೋಮಣ್ಣ, ದಯಾನಂದ್, ವೆಂಕಟೇಶ್, ಬೋರೇಗೌಡ, ನಾಗರಾಜು, ನೀನಾ ಪಟೇಲ್ ಸೇರಿದಂತೆ ಇತರರಿದ್ದರು.

Translate »