ಕೆಆರ್‍ಎಸ್‍ಗೆ ದೃಷ್ಟಿ ತಗುಲಿದೆ, ಹೋಮ ಮಾಡಿಸಬೇಕು
ಮಂಡ್ಯ

ಕೆಆರ್‍ಎಸ್‍ಗೆ ದೃಷ್ಟಿ ತಗುಲಿದೆ, ಹೋಮ ಮಾಡಿಸಬೇಕು

July 21, 2021

ಶ್ರೀರಂಗಪಟ್ಟಣ, ಜು.20(ವಿನಯ್ ಕಾರೇಕುರ)- ಕೆಆರ್‍ಎಸ್ ಅಣೆಕಟ್ಟೆಗೆ ಯಾರದ್ದೋ ದೃಷ್ಟಿ ತಗುಲಿದ್ದು, ಇದೀಗ ಅಣೆಕಟ್ಟೆಯ ಪಾದಚಾರಿ ರಸ್ತೆಗಾಗಿ ನಿರ್ಮಿ ಸಿದ್ದ ಕಟ್ಟಡ ಕುಸಿದಿದೆ. ಮುಂದೆ ಅಣೆಕಟ್ಟೆಗೆ ಹೆಚ್ಚಿನ ಅಪಾಯ ಎದುರಾಗದಂತೆ ಹೋಮ ನಡೆಸಲು ಯೋಚಿಸಿರುವುದಾಗಿ ಶಾಸಕ ರವೀಂದ್ರ ಶ್ರೀಕಂಠಯ್ಯ ತಿಳಿಸಿದರು.

ತಾಲೂಕಿನ ವಿವಿಧೆಡೆ ಸೋಮವಾರ 6.42 ಕೋಟಿ ವೆಚ್ಚದಲ್ಲಿ ಗ್ರಾಮಗಳ ಸಂಪರ್ಕ ರಸ್ತೆ, ಚರಂಡಿ ಸೇರಿದಂತೆ ಕಾಂಕ್ರೀಟ್ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿ ಬಳಿಕ ಅವರು ಮಾತನಾಡಿದರು.

ಜೀವನಾಡಿ ಕನ್ನಂಬಾಡಿ ಅಣೆಕಟ್ಟೆ ಸುಭದ್ರವಾಗಿದೆ, ಆದರೆ ಕೆಲ ದಿನಗಳಿಂದೀ ಚೆಗೆ ಕೆಲವರ ಸ್ವಾರ್ಥ ಸಾಧನೆಗೆ ಸಲ್ಲದ ಅಪವಾದ ಹೊರಿಸಿ ವಿವಾದ ಎಬ್ಬಿಸಿದ “ಮನುಷ್ಯನ ಕಣ್ಣಿಗೆ ಮರ ಮುರಿತು” ಎಂಬ ಗಾದೆಯಂತೆ ಜಲಾಶಯಕ್ಕೆ ದೃಷ್ಠಿ ತಗುಲಿದೆ. ಈ ಬಗ್ಗೆ ಸರ್ಕಾರದೊಂದಿಗೆ ಚರ್ಚಿಸಿ ದೃಷ್ಟಿ ಪರಿಹಾರಕ್ಕೆ ಒಂದು ವಿಶೇಷ ಹೋಮ ಮತ್ತು ಪೂಜೆ ನಡೆಸು ವುದಾಗಿ ಮನವಿ ಮಾಡಿದ್ದೇ, ಆದರೆ ಸರ್ಕಾರ ಮನಸ್ಸು ಮಾಡಿದಂತೆ ಕಾಣುತ್ತಿಲ್ಲ. ಇದೀಗ ನಾನೇ ಪೂಜೆ ಮಾಡಿಸುವುದಾಗಿ ಅವರು ತಿಳಿಸಿದರು.

ಸರ್ಕಾರ ಗಣಿಗಾರಿಕೆ ನಿಷೇಧಿಸುವ ಮೂಲಕ ಅಭಿವೃದ್ಧಿ ಕಾರ್ಯಗಳಿಗೆ ತಡೆಯೊಡ್ಡಿ, ಜೊತೆಗೆ ಜಿಲ್ಲೆಯಲ್ಲಿ 6 ಜೆಡಿಎಸ್ ಶಾಸಕರುಗಳಿದ್ದು, ಪರೋಕ್ಷವಾಗಿ ಗಣಿಗಾರಿಕೆ ಅಸ್ತ್ರ ಉಪ ಯೋಗಿಸುವ ಮೂಲಕ ಜಿಲ್ಲೆಯ ಅಭಿವೃದ್ಧಿಗೆ ತೊಡ ಕುಂಟು ಮಾಡುತ್ತಿದ್ದಾರೆ ಎಂದು ಸರ್ಕಾರದ ವಿರುದ್ಧ ಕಿಡಿಕಾರಿದರು. ಈ ಸಂಬಂಧ ಮುಂದಿನ ವಿಧಾನಸಭೆಯ ಅಧಿವೇಶನ ದಲ್ಲಿ ಚರ್ಚಿಸಿ ಸಕ್ರಮಕ್ಕೆ ಒತ್ತಾಯಿಸ ಲಾಗುವುದು ಎಂದರು. ಇದಕ್ಕೂ ಮುನ್ನ ತಾಲೂಕಿನ ಮೇಳಾಪುರ ಗ್ರಾಮದಲ್ಲಿ ಲಿಂಕ್ ರಸ್ತೆ, ಅಭಿವೃದ್ಧಿಯೇ ಕಾಣದ ಕೃಷ್ಣಾಪುರ (ಕಡೆಗದ್ದೆ) ಗ್ರಾಮದ ಸೀಮೆಂಟ್ ಸಂಪರ್ಕ ರಸ್ತೆ ಸೇರಿದಂತೆ ಚೆನ್ನಹಳ್ಳಿ, ಬಿದರಹಳ್ಳಿ ಹುಂಡಿ ಹಾಗೂ ತರಿಪುರ ಗ್ರಾಮಗಳಲ್ಲಿ ವಿವಿಧ ಕಾಮಗಾರಿಗೆ ಚಾಲನೆ ನೀಡಿದರು.

ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ದಶರಥ, ತಾಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಪುಟ್ಟಸ್ವಾಮಿ, ವೀರಶೈವ ಮಹಾ ಸಭಾ ತಾಲೂಕು ಅಧ್ಯಕ್ಷ ಬಿ.ನಾಗಣ್ಣ, ಮೇಳಾ ಪುರ ಪ್ರದೀಪ್, ಮಹದೇವಪುರ ಗ್ರಾಪಂ ಸದಸ್ಯ ವಿಜಯ್, ಮುಖಂಡ ಭಾಸ್ಕರ್ ಸೇರಿ ದಂತೆ ಹಲವರು ಈ ವೇಳೆ ಹಾಜರಿದ್ದರು.

Translate »