ಮೂಲ ಕಾಂಗ್ರೆಸ್ಸಿಗರ ಕಡೆಗಣನೆ ಆರೋಪ
ಮಂಡ್ಯ

ಮೂಲ ಕಾಂಗ್ರೆಸ್ಸಿಗರ ಕಡೆಗಣನೆ ಆರೋಪ

July 21, 2021

ಶ್ರೀರಂಗಪಟ್ಟಣ, ಜು.20(ವಿನಯ್‍ಕಾರೇಕುರ)- ಶ್ರೀರಂಗಪಟ್ಟಣ ಕ್ಷೇತ್ರ ವ್ಯಾಪ್ತಿ ಇರುವ ಮೂಲ ಕಾಂಗ್ರೆಸಿಗರನ್ನು ಕಡೆಗಾಣಿಸಲಾಗು ತ್ತಿದೆ ಎಂದು ಕಾಂಗ್ರೆಸ್ ಮುಖಂಡ ಪಾಲ ಹಳ್ಳಿ ಚಂದ್ರಶೇಖರ್ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಅಭಿಪ್ರಾಯ ವ್ಯಕ್ತಗೊಂಡಿತು.
ಪಟ್ಟಣದ ಖಾಸಗಿ ವಸತಿ ಗೃಹದಲ್ಲಿ ನಡೆದ ಸಭೆಯಲ್ಲಿ ನೂರಾರು ಕಾಂಗ್ರೆಸಿಗರು ಭಾಗವಹಿಸಿ ಸಭೆಯಲ್ಲಿ ಪಕ್ಷ ಬಲ ವರ್ಧನೆಗೆ ಹಾಗೂ ಮೂಲ ಕಾಂಗ್ರೆಸ್ ಕಾರ್ಯಕರ್ತರ ಕಡೆಗಣನೆ ಕುರಿತು ಚರ್ಚೆ ನಡೆಸಿದರು.

ಮಾಜಿ ಶಾಸಕ ರಮೇಶ್ ಬಂಡಿಸಿz್ದÉೀ ಗೌಡರು ತಮ್ಮ ಜೊತೆ ಬಂದ ಜೆಡಿಎಸ್ ಹಿಂಬಾಲಕರಿಗೆ ಮಾನ್ಯತೆ ನೀಡುತ್ತಿದ್ದು, ಹಲವು ಸಂಘ ಸಂಸ್ಥೆ ಚುನಾವಣೆಗಳು ನಡೆದು ಎಲ್ಲಾ ಅವರ ಬೆಂಬಲಿಗರ ಪಾಲಾಗಿದೆ. ಪಕ್ಷದ ಹಿರಿಯರ ಸಲಹೆ ಗಳನ್ನು ಪಡೆಯುವುದನ್ನು ಬಿಟ್ಟಿರುವು ದರಿಂದ ಈಗಾಗಲೇ ಕಾಂಗ್ರೆಸ್ ನೆಲಕಚ್ಚುವ ಮಟ್ಟಕ್ಕೆ ಹೋಗಿದೆ ಎಂದು ಕಾರ್ಯಕರ್ತರು ದೂರಿದರು.

ಪುರಸಭೆ ಹಾಗೂ ಟಿಎಪಿಸಿಎಂಎಸ್ ಚುನಾವಣೆಯಲ್ಲಿ ಪಕ್ಷದ ಮೂಲ ಕಾಂಗ್ರೆಸ್ ಕಾರ್ಯಕರ್ತರನ್ನು ಕಡೆಗಣಿಸಿದ್ದು, ಅವರ ಹಿಂಬಾಲಕರಿಗೆ ಟಿಕೆಟ್ ನೀಡ ಲಾಗಿದೆ. ಇದರಿಂದ ಪುರಸಭೆ ಆಡಳಿತ ಚುಕ್ಕಾಣಿ ಹಿಡಿಯಲು ಪಕ್ಷ ಎಡವಿದೆ. ಜೊತೆಗೆ ಟಿಎಪಿಸಿಎಂಎಸ್ ಚುನಾವಣೆಯಲ್ಲಿ ನಮ್ಮ ಪಕ್ಷದವರು ಒಬ್ಬರು ಸಹ ಗೆಲ್ಲಲಾಗಿಲ್ಲ. ಗ್ರಾಮ ಪಂಚಾಯಿತಿಯಲ್ಲೂ ಕಾಂಗ್ರೆಸಿಗರಿಗೆ ಅದೇ ಹಿನ್ನಡೆಯ ಗತಿಯಾಗಿದೆ. ಇನ್ನು ಜಿಪಂ, ತಾಪಂ ಚುನಾವಣೆಗಳು ಹತ್ತಿರವಾಗು ತ್ತಿದ್ದು, ಪಕ್ಷ ಸಂಘಟನೆಯಲ್ಲಿ ಯಾವುದೇ ಮುಖಂಡರು ಪಾಲ್ಗೊಳ್ಳುತ್ತಿಲ್ಲ. ಪಕ್ಷವನ್ನು ಸದೃಢ ಪಡಿಸಲು ಜಿಲ್ಲಾ ಹಾಗೂ ರಾಜ್ಯ ಮಟ್ಟದ ಮುಖಂಡರು ತಾಲೂಕಿನಲ್ಲಿ ಪ್ರವಾಸ ಕೈಗೊಂಡು ಪಕ್ಷ ಬಲವರ್ಧನೆಗೆ ಸಹಕಾರ ನೀಡಿ ಕಾರ್ಯಕರ್ತರಲ್ಲಿ ಹುಮ್ಮಸ್ಸು ತುಂಬ ಬೇಕು ಎಂದು ಮನವಿ ಮಾಡಿದರು.

ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸಿ.ಡಿ.ಗಂಗಾಧರ್ ಹಾಗೂ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪ್ರಕಾಶ್ ಮಾತನಾಡಿ, ರಾಜ್ಯ ಮಟ್ಟದ ಮುಖಂಡ ರಲ್ಲಿ ಈ ಬಗ್ಗೆ ಚರ್ಚೆ ಮಾಡಿ ಇಲ್ಲಿನ ವರದಿಯನ್ನು ತಿಳಿಸಲಾಗುತ್ತದೆ. ಪಕ್ಷ ಬಲವರ್ಧನೆಗೆ ಕ್ರಮ ಕೈಗೊಳ್ಳಲಾಗುತ್ತದೆ. ಯಾರು ಇದರಿಂದ ವಿಚಲಿತರಾಗುವುದು ಬೇಡ. ಎಲ್ಲರನ್ನು ಒಗ್ಗೂಡಿಸಿಕೊಂಡು ಪಕ್ಷ ಸಂಘಟನೆ ಮಾಡುವುದಾಗಿ ಸಮಾಧಾನಪಡಿಸಿದರು. ಕೆಪಿಸಿಸಿ ಸದಸ್ಯ ಎನ್.ಗಂಗಾಧರ್, ಕಾಂಗ್ರೇಸ್ ಹಿರಿಯ ಮುಖಂಡರಾದ ಬೆಳಗೊಳ ವಿಷಕಂಠೇ ಗೌಡ, ಮಹದೇವ ಪುರ ಬಸವರಾಜು, ಸಿದ್ದಲಿಂಗೇಗೌಡ, ಮರಿಸ್ವಾಮಿಗೌಡ ಮರಳಗಾಲ ಧನಂಜಯ, ಪುರಸಭಾ ಮಾಜಿ ಸದಸ್ಯೆ ಪಾರ್ವತಮ್ಮ, ಗ್ರಾಪಂ ಉಪಾಧ್ಯಕ್ಷೆ ನೇತ್ರಾವತಿ, ಯುವ ಕಾಂಗ್ರೇಸ್ ಮಾಜಿ ಅಧ್ಯಕ್ಷ ಗುಣವಂತ, ದರಸಗುಪ್ಪೆ ಗೋಪಾಲ್ ಸೇರಿದಂತೆ ಇತರ ಮೂಲ ಕಾಂಗ್ರೆಸ್ ಕಾರ್ಯಕರ್ತರು ಉಪಸ್ಥಿತರಿದ್ದರು.

Translate »