ಕೋವಿಡ್ ಲಾಕ್‍ಡೌನ್‍ನಿಂದ ಸಂಕಷ್ಟಕ್ಕೀಡಾದ ಕಟ್ಟಡ ನಿರ್ಮಾಣ ಕಾರ್ಮಿಕರಿಗೆ ಶಾಸಕ ರಾಮದಾಸ್ ದಿನಸಿ ಕಿಟ್ ವಿತರಣೆ
ಮೈಸೂರು

ಕೋವಿಡ್ ಲಾಕ್‍ಡೌನ್‍ನಿಂದ ಸಂಕಷ್ಟಕ್ಕೀಡಾದ ಕಟ್ಟಡ ನಿರ್ಮಾಣ ಕಾರ್ಮಿಕರಿಗೆ ಶಾಸಕ ರಾಮದಾಸ್ ದಿನಸಿ ಕಿಟ್ ವಿತರಣೆ

July 21, 2021

ಮೈಸೂರು, ಜು.20(ಆರ್‍ಕೆಬಿ)- ಕೋವಿಡ್ ಲಾಕ್‍ಡೌನ್ ಸಂದರ್ಭದಲ್ಲಿ ಸಂಕಷ್ಟಕ್ಕೀಡಾದ ನೋಂದಾಯಿತ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರಿಗೆ ವಿವಿಧ ಸಂಘ-ಸಂಸ್ಥೆಗಳು ಕೊಡ ಮಾಡಿದ ಆಹಾರ ಧಾನ್ಯಗಳ ವಿತರಣೆ ಕಾರ್ಯಕ್ರಮ ಕೃಷ್ಣರಾಜ ಕ್ಷೇತ್ರದ ಶಾಸಕ ಎಸ್.ಎ. ರಾಮ ದಾಸ್ ನೇತೃತ್ವದಲ್ಲಿ ಮೈಸೂರಿನ ಬಿಲ್ಡರ್ಸ್ ಅಸೋಸಿಯೇಷನ್ ಆವರಣದಲ್ಲಿ ನಡೆಯಿತು.

ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿ, ಕಾರ್ಮಿಕ ಇಲಾಖೆ, ಮೈಸೂರು ಜಿಲ್ಲಾ ಕಾನೂನು ಸೇವೆ ಗಳ ಪ್ರಾಧಿಕಾರ, ಬಿಲ್ಡರ್ಸ್ ಅಸೋಸಿಯೇಷನ್ ಆಫ್ ಇಂಡಿಯಾ, ಕ್ರೆಡಾಯ್, ಮೈಸೂರು ಬಿಲ್ಡರ್ಸ್ ಚಾರಿಟಬಲ್ ಟ್ರಸ್ಟ್ ಜಂಟಿಯಾಗಿ ಕಾರ್ಯಕ್ರಮವನ್ನು ಆಯೋಜಿಸಿದ್ದವು.

ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಶಾಸಕ ಎಸ್.ಎ.ರಾಮದಾಸ್, ಕೋವಿಡ್ ಲಾಕ್‍ಡೌನ್ ಸಂದರ್ಭದಲ್ಲಿ ಕೃಷ್ಣರಾಜ ಕ್ಷೇತ್ರದಲ್ಲಿ ಕಟ್ಟಡ ಕಾರ್ಮಿಕರಿಗೆ ಕೆಲಸವೇ ಇಲ್ಲದಂತಾಗಿ ಸಂಕಷ್ಟಕ್ಕೀಡಾಗಿದ್ದರು. ಈ ಹಿಂದೆ ಸಿಎಂ ಯಡಿಯೂರಪ್ಪ ಸರ್ಕಾರ 5 ಸಾವಿರ ರೂ. ಕೊಡಿಸುವ ಕೆಲಸ ಮಾಡಿತ್ತು. ಕೋವಿಡ್ 2ನೇ ಅಲೆಯಲ್ಲೂ ಕೂಡ 3 ಸಾವಿರ ರೂ. ನೀಡುತ್ತಿದೆ. ಇದೀಗ ಅವರಿಗೆ ಅಗತ್ಯವಿರುವ ಆಹಾರ ಪದಾರ್ಥಗಳ ಕಿಟ್ ಅನ್ನು ನೀಡಲಾಗುತ್ತಿದೆ ಎಂದು ಹೇಳಿದರು.

ಪ್ರಧಾನಿ ನರೇಂದ್ರ ಮೋದಿ ಸರ್ಕಾರ ನವೆಂಬರ್‍ವರೆಗೂ ಉಚಿತ ಪಡಿತರ ನೀಡು ತ್ತಿದೆ. ಓರ್ವ ಬಾಲ ಕಟ್ಟಡ ಕಾರ್ಮಿಕ ತನ್ನ ಸಣ್ಣ ವಯಸ್ಸಿನಲ್ಲಿ ತಂದೆಯನ್ನು ಕಳೆದು ಕೊಂಡು, ತನ್ನ ಕುಟುಂಬವನ್ನು ಸಲಹುವು ದಕ್ಕಾಗಿ ವಿಶ್ವವಿದ್ಯಾಲಯದಲ್ಲಿ ಕೆಲಸ ಮಾಡುತ್ತಾ ಅಲ್ಲೇ ಸಾಧನೆಯನ್ನು ಮಾಡಿ ನೋಬಲ್ ಪ್ರಶಸ್ತಿ ಪಡೆದುಕೊಂಡ ಹ್ಯಾಮಲ್ಟನ್ ನಮ ಗೆಲ್ಲಾ ಸ್ಫೂರ್ತಿ. ಓರ್ವ ಕಟ್ಟಡ ಕಾರ್ಮಿಕ ಕೂಡಾ ತನ್ನ ಕೌಶಲ್ಯದ ಮೂಲಕ ದೇಶ-ವಿದೇಶದಲ್ಲಿ ಹೋಗಿ ಕೆಲಸ ಮಾಡ ಬಹುದು, ಅಂತಹ ಅವಕಾಶಗಳನ್ನು ಮೋದಿ ಸರ್ಕಾರ ಕಲ್ಪಿಸಿಕೊಟ್ಟಿದೆ. ಇಂತಹ ಕೌಶಲ್ಯ ಇರುವ ಕೆಲಸಗಾರರನ್ನು ಗುರುತಿಸಿ, ವಿಶೇಷ ಪ್ರೋತ್ಸಾಹ ನೀಡಬೇಕಾಗಿದೆ ಎಂದರು.

ಕೃಷ್ಣರಾಜ ಕ್ಷೇತ್ರದಲ್ಲಿ ಸ್ವಂತ ಮನೆಗಳಿ ಲ್ಲದ ಕಟ್ಟಡ ನಿರ್ಮಾಣ ಕಾರ್ಮಿಕರಿಗೆ ಸರ್ಕಾರದ ವತಿಯಿಂದ ಸವಲತ್ತು ಹಾಗೂ ಆಶ್ರಯ ಮನೆಗಳನ್ನು ಕೊಡುವ ಚಿಂತನೆ ಇದೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ನಗರಪಾಲಿಕೆ ಸದಸ್ಯೆ ಶಾಂತಮ್ಮ ವಡಿವೇಲು, ಕಾರ್ಮಿಕ ಇಲಾಖೆ ಅಧಿಕಾರಿ ರಾಜೇಶ್ ಜಾಧವ್, ಬಿಲ್ಡರ್ಸ್ ಅಸೋಸಿಯೇಷನ್ ಆಫ್ ಇಂಡಿಯಾ ವ್ಯವಸ್ಥಾಪಕ ಟ್ರಸ್ಟಿ ಟಿ.ಎನ್. ಹೇಮಂತ್, ಅಧ್ಯಕ್ಷ ಅಜಿತ್ ನಾರಾ ಯಣ್, ಕ್ರೆಡಾಯ್ ಅಧ್ಯಕ್ಷ ಮುರಳೀ ಧರ ಇನ್ನಿತರರು ಉಪಸ್ಥಿತರಿದ್ದರು.

Translate »