ದೇವರಾಜ ಮಾರುಕಟ್ಟೆ, ಬೋಟಿ ಬಜಾರ್, ಶಿವರಾಂಪೇಟೆ, ಸಂತೆಪೇಟೆಯಲ್ಲಿ ವ್ಯಾಪಾರ ವಹಿವಾಟು ಪುನಾರಂಭ
ಮೈಸೂರು

ದೇವರಾಜ ಮಾರುಕಟ್ಟೆ, ಬೋಟಿ ಬಜಾರ್, ಶಿವರಾಂಪೇಟೆ, ಸಂತೆಪೇಟೆಯಲ್ಲಿ ವ್ಯಾಪಾರ ವಹಿವಾಟು ಪುನಾರಂಭ

June 30, 2020

ಮೈಸೂರು, ಜೂ. 29(ಆರ್‍ಕೆ)- ಕೊರೊನಾ ಸೋಂಕಿತರು ಸಂಚರಿಸಿದರು ಎಂಬ ಕಾರಣಕ್ಕೆ ಮುನ್ನೆಚ್ಚರಿಕಾ ಕ್ರಮವಾಗಿ ಗುರುವಾರದಿಂದ ಬಂದ್ ಮಾಡಲಾಗಿದ್ದ ಮೈಸೂರಿನ ಹೃದಯ ಭಾಗದ ದೇವ ರಾಜ, ಮನ್ನಾರ್ಸ್ ಮಾರುಕಟ್ಟೆ, ಬೋಟಿ ಬಜಾರ್, ಶಿವರಾಂಪೇಟೆ, ಸಂತೆಪೇಟೆಯ ಅಂಗಡಿಗಳಲ್ಲಿ ಸೋಮವಾರದಿಂದ ವ್ಯಾಪಾರ -ವಹಿವಾಟು ಪುನಾರಂಭವಾಯಿತು.

ಮೈಸೂರು ಮಹಾನಗರ ಪಾಲಿಕೆ ಆಯುಕ್ತ ಗುರುದತ್ ಹೆಗ್ಡೆ ಅವರು ಕಳೆದ ಗುರುವಾರ ದಿಂದ ದೇವರಾಜ ಮೊಹಲ್ಲಾದ ಈ ಪ್ರದೇಶ ಗಳ ಅಂಗಡಿ-ಮುಂಗಟ್ಟುಗಳನ್ನು 4 ದಿನ ಗಳವರೆಗೆ (ಭಾನುವಾರದವರೆಗೆ) ಬಂದ್ ಮಾಡುವಂತೆ ಆದೇಶ ಹೊರಡಿಸಿದ್ದರು.

ವರ್ತಕರ ಬೇಡಿಕೆಗೆ ಸ್ಪಂದಿಸಿದ್ದ ಆಯು ಕ್ತರು, ದೇವರಾಜ ಮಾರುಕಟ್ಟೆಯ ಹಣ್ಣು ಮತ್ತು ತರಕಾರಿ ಅಂಗಡಿಗಳಿಗೆ ಕಳೆದ ಶುಕ್ರ ವಾರ ಮಧ್ಯಾಹ್ನದವರೆಗೆ ವಹಿವಾಟು ನಡೆಸಲು ಅವಕಾಶ ನೀಡಿದ್ದರು. ಆಯು ಕ್ತರ ಆದೇಶದಂತೆ ನಾಲ್ಕು ದಿನ ವ್ಯಾಪಾರ ವಹಿವಾಟು ಬಂದ್ ಮಾಡಿದ್ದ ಉದ್ಯಮಿ ಗಳು ಇಂದಿನಿಂದ ಅಂಗಡಿ ತೆರೆದು, ವ್ಯಾಪಾರ ವಹಿವಾಟು ಆರಂಭಿಸಿದ್ದಾರೆ.

ಪ್ರತೀ ಅಂಗಡಿಗಳ ಮುಂದೆ ಬಾಕ್ಸ್ ಗುರುತು ಮಾಡಿ ಗ್ರಾಹಕರು ಸಾಮಾಜಿಕ ಅಂತರ ಕಾಯ್ದುಕೊಳ್ಳಲು ವ್ಯವಸ್ಥೆ ಮಾಡಿ ದ್ದಾರಲ್ಲದೆ ಹ್ಯಾಂಡ್ ಸ್ಯಾನಿಟೈಸರ್ ಇಟ್ಟು ಕಡ್ಡಾಯವಾಗಿ ಮುಖಕ್ಕೆ ಮಾಸ್ಕ್ ಧರಿಸಿ ಖರೀದಿಸುವಂತೆ ಅಂಗಡಿ ಮಾಲೀಕರು ಅಗತ್ಯ ಮುಂಜಾಗ್ರತೆಗೆ ಕ್ರಮ ವಹಿಸಿದ್ದಾರೆ.

ಬಂದ್ ಮಾಡಿದ್ದ 4 ದಿನಗಳಲ್ಲಿ ಮೈಸೂರು ಮಹಾನಗರ ಪಾಲಿಕೆ ಅಧಿಕಾರಿ ಗಳು ಹಾಗೂ ಸಿಬ್ಬಂದಿ, ಆರೋಗ್ಯ ಇಲಾಖೆ ಸಿಬ್ಬಂದಿ ನೆರವಿನಿಂದ ದೇವರಾಜ ಮಾರು ಕಟ್ಟೆ, ಮನ್ನಾರ್ಸ್ ಮಾರ್ಕೆಟ್, ಶಿವರಾಂ ಪೇಟೆ, ಸಂತೆಪೇಟೆ ಸೇರಿದಂತೆ ದೇವ ರಾಜ ಮೊಹಲ್ಲಾ ಭಾಗದಲ್ಲಿ ಸೋಂಕು ನಿರೋಧಕ ದ್ರಾವಣ ಸಿಂಪಡಿಸಿ ನಾಲ್ಕೂ ದಿನಗಳ ಕಾಲ ಸ್ಯಾನಿಟೈಸ್ ಮಾಡಿಸಿದ್ದರು.

ಈ ಕುರಿತು ಪ್ರತಿಕ್ರಿಯಿಸಿದ ದೇವರಾಜ ಮಾರುಕಟ್ಟೆ ವರ್ತಕರ ಸಂಘದ ಅಧ್ಯಕ್ಷ ಎಂ.ಮಹದೇವು, ಪಾಲಿಕೆ ನಿರ್ದೇಶನ ಪಾಲಿಸುತ್ತಿದ್ದೇವೆ. ಇಂದಿನಿಂದ ಅಂಗಡಿ ಗಳನ್ನು ತೆರೆಯಲಾಗಿದೆಯಾದರೂ ತಯಾರಿ ಮಾಡುವುದರಲ್ಲೇ ಇಂದು ಸಮಯ ಕಳೆದು ಹೋಗಿದೆ.

ವ್ಯಾಪಾರವೇನಿದ್ದರೂ ನಾಳೆ (ಜೂನ್ 30)ಯಿಂದ ಆರಂಭವಾಗುತ್ತದೆ. ಜನರೂ ಕಡಿಮೆ ಸಂಖ್ಯೆಯಲ್ಲಿ ಮಾರುಕಟ್ಟೆಗೆ ಬರುತ್ತಿರುವುದರಿಂದ ವ್ಯಾಪಾರ ಅಷ್ಟಕಷ್ಟೆ ಎಂದು ನುಡಿದರು.

Translate »