ಪ್ರಾಮಾಣಿಕತೆ, ಆರೋಗ್ಯ ಹೊಂದಿದಂತಹವರೇ ನಿಜವಾದ ಹೃದಯ ಶ್ರೀಮಂತರು
ಮೈಸೂರು

ಪ್ರಾಮಾಣಿಕತೆ, ಆರೋಗ್ಯ ಹೊಂದಿದಂತಹವರೇ ನಿಜವಾದ ಹೃದಯ ಶ್ರೀಮಂತರು

June 30, 2020

ಮೈಸೂರು, ಜೂ. 29- ಪ್ರಾಮಾಣಿ ಕತೆ, ಆರೋಗ್ಯ ಮುಂತಾದ ಹಣ ಕೊಟ್ಟು ಕೊಂಡುಕೊಳ್ಳಲು ಆಗದಂತಹ ಸಂಪತ್ತು ಹೊಂದಿರುವವರೇ ಹೃದಯ ಶ್ರೀಮಂ ತರು ಎಂದು ವಿಶ್ರಾಂತ ಹೈಕೋರ್ಟ್ ನ್ಯಾಯಾಧೀಶ ನ್ಯಾಯಮೂರ್ತಿ ಅರಳಿ ನಾಗರಾಜ ಹೇಳಿದರು.

ಶರಣು ವಿಶ್ವವಚನ ಫೌಂಡೇಷನ್ ಹಮ್ಮಿ ಕೊಂಡಿದ್ದ 5ನೇ ಅಂತರರಾಷ್ಟ್ರೀಯ ಅಂತರ್ಜಾಲ ಪ್ರವಚನ ಕಾರ್ಯಕ್ರಮದಲ್ಲಿ ಶರಣ ಸಾಹಿತ್ಯದ ಅನುಷ್ಠಾನ ವಿಷಯ ಕುರಿತು ಪ್ರವಚನ ನೀಡಿದ ಅವರು ಪ್ರಾಮಾಣಿಕತೆ, ಆರೋಗ್ಯ, ಏಕಾಗ್ರತೆ, ಭಕ್ತಿ ಮುಂತಾದವು ಗಳನ್ನು ಹಣ ಕೊಟ್ಟು ಖರೀದಿಸಲು ಸಾಧ್ಯ ವಿಲ್ಲ. ಇವುಗಳನ್ನು ಯಾರು ಜೀವನದಲ್ಲಿ ಅಳವಡಿಸಿಕೊಂಡಿರುತ್ತಾರೋ ಅವರು ಮಾದರಿ ವ್ಯಕ್ತಿಗಳಾಗಿ ರೂಪುಗೊಳ್ಳುತ್ತಾರೆ ಎಂದರು.

ವಿದ್ಯಾರ್ಥಿ ದೆಸೆ ಯಲ್ಲಿ ‘ನೀನೊಲಿ ದರೆ ಕೊರಡು ಕೊನರುವುದಯ್ಯಾ’ ಎಂಬ ವಚನ ಅಳ ವಡಿಸಿಕೊಂಡು ಅಧ್ಯ ಯನ ಮಾಡಿ, ಕಾಲೇ ಜಿನಲ್ಲಿ ವ್ಯಾಸಂಗ ಮಾಡುವಾಗ ಯಾವುದೇ ದುಶ್ಚಟಗಳಿಂದ ಪ್ರಭಾವಿತನಾಗದಂತೆ ಹೆಳವನ ಮಾಡಯ್ಯಾ ತಂದೆ ಎಂಬ ವಚನ ನೆನಪಿಸಿಕೊಳ್ಳುತ್ತಿದ್ದೆ. ನ್ಯಾಯಾಧೀಶರಾದ ಸಂದರ್ಭದಲ್ಲಿ ‘ಭೂಮಿ ನಿನ್ನದಲ್ಲ, ಕಾಮಿನಿ ನಿನ್ನವಳಲ್ಲ’ ಎಂಬ ವಚನ ಮನದಲ್ಲಿ ತಂದುಕೊಂಡು ವಚನ ಗಳಿಗೆ ಪೂರಕವಾದ ತೀರ್ಪನ್ನು ನೀಡು ತ್ತಿದ್ದೆ ಎಂದು ತಮ್ಮ ಜೀವನದ ವಿವಿಧ ಘಟನೆಗಳನ್ನು ಎಳೆಎಳೆಯಾಗಿ ಬಿಡಿಸಿಟ್ಟರು.

ಪ್ರಾಸ್ತಾವಿಕವಾಗಿ ಮಾತನಾಡಿದ ಶರಣು ವಿಶ್ವವಚನ ಫೌಂಡೇಷನ್ ಸಂಸ್ಥಾಪಕಿ ರೂಪ ಕುಮಾರಸ್ವಾಮಿ, ಕೊರೊನಾ ರೋಗಿಗಳ ಸಂಖ್ಯೆ ಹೆಚ್ಚುತ್ತಿರುವ ಈ ಸಂದರ್ಭದಲ್ಲಿ ಬಹುಪಾಲು ಜನರು ಮನೆಯಲ್ಲಿಯೇ ಉಳಿಯುತ್ತಿದ್ದು, ಅವರಿಗೆ ಆದರ್ಶ ವ್ಯಕ್ತಿತ್ವ ಹೊಂದಿರುವ ಸ್ವಾಮೀಜಿಗಳು ಮತ್ತು ವ್ಯಕ್ತಿಗಳಿಂದ ಪ್ರವಚನ ಏರ್ಪಡಿಸಿ ಅವರ ನುಡಿಗಳನ್ನು ಕೇಳಿಸುವುದರ ಮುಖಾಂತರ ಮನಸ್ಸಿಗೆ ನೆಮ್ಮದಿ ನೀಡಲು ಅಂತರ್ಜಾಲ ಪ್ರವಚನ ಕಾರ್ಯಕ್ರಮವನ್ನು ಪ್ರತೀ ವಾರ ಏರ್ಪಡಿಸಲಾಗುತ್ತಿದೆ ಎಂದರು.

ಕಾರ್ಯಕ್ರಮದಲ್ಲಿ ಶರಣು ವಿಶ್ವವಚನ ಫೌಂಡೇಷನ್ ಸಂಸ್ಥಾಪಕÀ ಡಾ. ವಚನ ಕುಮಾರಸ್ವಾಮಿ, ಕೇಂದ್ರೀಯ ಸಂಚಾಲಕಿ ಸುಧಾ ಮೃತ್ಯುಂಜಯಪ್ಪ, ಬಹ್ರೈನ್ ಶರಣು ವಿಶ್ವವಚನ ಫೌಂಡೇಷನ್ ಅಧ್ಯಕ್ಷ ಶಿವಾ ನಂದ ಪಾಟೀಲ್, ಓಂಕಾರಯ್ಯ, ಸರಸ್ವತಿ ರಾಮಣ್ಣ, ಬಸವರಾಜು ಗವತಿ, ಸುಮಂ ಗಳ ಆರ್, ಪಾರ್ವತಿ ಶಂಕರ್, ಉಷಾ ನಾಗೇಶ್, ಚಂಚಲ ಜಯದೇವ್, ಸಂಧ್ಯಾ ಸದಾನಂದ್, ಡಾ.ಮುಡಿಗುಂಡ ಪುಟ್ಟಪ್ಪ, ಸುನಿತಾ ಅಂಗಡಿ ಕೊಡೇಕಲ್, ಕಣ್ಣೂರು ಕುಮಾರಸ್ವಾಮಿ, ಮಾರುತೇಶ್, ಅನಿತಾ ನಾಗರಾಜ್, ಜೆ.ಕವಿತ, ಡಾ.ನಾಗಪ್ಪ ಗೋಗಿ, ಆರ್.ನರೇಂದ್ರ, ಪ್ರಭುಸ್ವಾಮಿ, ಜಯ ಪ್ರಕಾಶ್ ವಿವಿಧ ರಾಜ್ಯ ಮತ್ತು ದೇಶಗಳಿಂದ ನೂರಾರು ಜನರು ಭಾಗವಹಿಸಿದ್ದರು.

Translate »